ADVERTISEMENT

ಮುಳಬಾಗಿಲು: ವೃದ್ಧೆಗೆ ಆಶ್ರಯ ಕಲ್ಪಿಸಿದ ತಾಲ್ಲೂಕು ಆಡಳಿತ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2020, 1:58 IST
Last Updated 25 ಸೆಪ್ಟೆಂಬರ್ 2020, 1:58 IST
ಮುಳಬಾಗಿಲು ನಗರದ ಬಜಾರು ರಸ್ತೆಯ ಶ್ರೀನಿವಾಸಪುರ ವೃತ್ತದಲ್ಲಿ ರಸ್ತೆ ಬದಿ ವಾಸಮಾಡುತ್ತಿದ್ದ ಶಿವನಾಗಮ್ಮ ಅವರನ್ನು ತಾಲ್ಲೂಕು ಆಡಳಿತ ಕೆಜಿಎಫ್‌ನ ರಮಣ ಮಹರ್ಷಿ ವೃದ್ಧಾಶ್ರಮಕ್ಕೆ ತಲುಪಿಸುವ ವ್ಯವಸ್ಥೆ ಮಾಡಿತು. ತಹಶೀಲ್ದಾರ್ ಕೆ.ಎನ್. ರಾಜಶೇಖರ್ ಇದ್ದರು.
ಮುಳಬಾಗಿಲು ನಗರದ ಬಜಾರು ರಸ್ತೆಯ ಶ್ರೀನಿವಾಸಪುರ ವೃತ್ತದಲ್ಲಿ ರಸ್ತೆ ಬದಿ ವಾಸಮಾಡುತ್ತಿದ್ದ ಶಿವನಾಗಮ್ಮ ಅವರನ್ನು ತಾಲ್ಲೂಕು ಆಡಳಿತ ಕೆಜಿಎಫ್‌ನ ರಮಣ ಮಹರ್ಷಿ ವೃದ್ಧಾಶ್ರಮಕ್ಕೆ ತಲುಪಿಸುವ ವ್ಯವಸ್ಥೆ ಮಾಡಿತು. ತಹಶೀಲ್ದಾರ್ ಕೆ.ಎನ್. ರಾಜಶೇಖರ್ ಇದ್ದರು.   

ಮುಳಬಾಗಿಲು: ನಗರದ ಬಜಾರು ರಸ್ತೆಯ ಶ್ರೀನಿವಾಸಪುರ ವೃತ್ತದ ಜಹಂಗೀರ್‌ ಮೊಹಲ್ಲಾದ ರಸ್ತೆ ಬದಿ ವಾಸಿಸುತ್ತಿದ್ದ 80 ವರ್ಷ ವಯಸ್ಸಿನ ಶಿವನಾಗಮ್ಮ ಅವರನ್ನು ತಾಲ್ಲೂಕು ಆಡಳಿತ ಕೆಜಿಎಫ್‌ನ ರಮಣ ಮಹರ್ಷಿ ವೃದ್ಧಾಶ್ರಮಕ್ಕೆ ತಲುಪಿಸುವ ವ್ಯವಸ್ಥೆ ಮಾಡಿತು.

ಕೆಜಿಎಫ್‌ನ ಶಿವನಾಗಮ್ಮ ಆರು ವರ್ಷಗಳಿಂದ ರಸ್ತೆ ಬದಿಯಲ್ಲಿಯೇ ವಾಸಮಾಡುತ್ತಿದ್ದರು. ಸುತ್ತಮುತ್ತಲಿನ ಎಲ್ಲಾ ಧರ್ಮದವರು ಅವರಿಗೆ ಪ್ರತಿ ದಿನ ಆಹಾರ ನೀಡುತ್ತಿದ್ದರು.

ವಾಯು ವಿಹಾರಕ್ಕೆ ಬರುತ್ತಿದ್ದ ನಿವೃತ್ತ ಶಿಕ್ಷಕ ಅಗ್ರಹಾರದ ಕೆ. ಜಯತೀರ್ಥ ಅವರಿಗೆ ಊಟ, ಬಟ್ಟೆ ನೀಡುತ್ತಿದ್ದರು. ದಿನದಿಂದ ದಿನಕ್ಕೆ ಅವರ ಪರಿಸ್ಥಿತಿ ಹದಗೆಟ್ಟಟಾಗ ಸ್ನೇಹಿತರ ಮೂಲಕ ಈ ಕುರಿತು ತಾಲ್ಲೂಕು ಆಡಳಿತದ ಗಮನ ಸೆಳೆದರು.

ADVERTISEMENT

ಈ ಬಗ್ಗೆ ಮಾಹಿತಿ ಪಡೆದ ತಹಶೀಲ್ದಾರ್ ಕೆ.ಎನ್. ರಾಜಶೇಖರ್, ನಗರಸಭೆ ಆಯುಕ್ತ ಜಿ. ಶ್ರೀನಿವಾಸಮೂರ್ತಿ ರಾಜಸ್ವ ನಿರೀಕ್ಷಕ ಸಾದತುಲ್ಲಾಖಾನ್ ಮತ್ತು ತಮ್ಮ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಅವರನ್ನು ವಿಚಾರಿಸಿದರು. ತಾಲ್ಲೂಕು ಆರೋಗ್ಯಾಧಿಕಾರಿಗೆ ಮಾಹಿತಿ ನೀಡಿ ಆಂಬುಲೆನ್ಸ್‌ನಲ್ಲಿ ವೃದ್ಧೆಯನ್ನು ರಮಣ ಮಹರ್ಷಿ ವೃದ್ಧಾಶ್ರಮಕ್ಕೆ ಸೇರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.