ADVERTISEMENT

ಕೋಟಿಲಿಂಗೇಶ್ವರ ಲೆಕ್ಕಪತ್ರ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 8 ಜುಲೈ 2020, 9:23 IST
Last Updated 8 ಜುಲೈ 2020, 9:23 IST
ಬೇತಮಂಗಲ ಸಮೀಪದ ಕೋಟಿಲಿಂಗೇಶ್ವರ ದೇವಾಲಯದ ಕಚೇರಿಯಲ್ಲಿ ಅರ್ಜಿದಾರ ಡಾ.ಶಿವಪ್ರಸಾದ್ ಅವರ ಸಹೋದರಿ ಅನುರಾಧಾ ಲೆಕ್ಕಪತ್ರಗಳನ್ನು ಪರಿಶೀಲನೆ ಮಾಡಿದರು
ಬೇತಮಂಗಲ ಸಮೀಪದ ಕೋಟಿಲಿಂಗೇಶ್ವರ ದೇವಾಲಯದ ಕಚೇರಿಯಲ್ಲಿ ಅರ್ಜಿದಾರ ಡಾ.ಶಿವಪ್ರಸಾದ್ ಅವರ ಸಹೋದರಿ ಅನುರಾಧಾ ಲೆಕ್ಕಪತ್ರಗಳನ್ನು ಪರಿಶೀಲನೆ ಮಾಡಿದರು   

ಬೇತಮಂಗಲ: ಸುಪ್ರೀಂ ಕೋರ್ಟ್‌ ನಿರ್ದೇಶನದಂತೆ ಕೋಟಿಲಿಂಗೇಶ್ವರ ದೇವಾಲಯದ ಆಡಳಿತಾಧಿಕಾರಿ ಕೆ.ವಿ.‌ ಕುಮಾರಿ ಲೆಕ್ಕ ಪತ್ರಗಳನ್ನು ದೇವಾಲಯದ ಸಂಸ್ಥಾಪಕ ಸಾಂಬಶಿವಮೂರ್ತಿ ಅವರ ಪುತ್ರಿ ಅನುರಾಧಾ ಅವರಿಗೆ ಮಂಗಳವಾರ ಹಾಜರುಪಡಿಸಿದರು.

ದೇವಾಲಯದ ಧರ್ಮಾಧಿಕಾರಿ ಪಟ್ಟಕ್ಕಾಗಿ ನಡೆಯುತ್ತಿರುವ ವಿವಾದದ ಕುರಿತು ಈಚೆಗೆ ಸುಪ್ರೀಂ ಕೋರ್ಟ್‌ ನಿರ್ದೇಶನ ನೀಡಿತ್ತು. ಪ್ರತಿ ತಿಂಗಳು 7ರಂದು ಅರ್ಜಿದಾರರಿಗೆ ದೇವಾಲಯದ ಲೆಕ್ಕಪತ್ರಗಳನ್ನು ತೋರಿಸಬೇಕು. ನ್ಯಾಯಾಲಯಕ್ಕೆ ಒಪ್ಪಿಸಬೇಕು ಎಂದು ಸೂಚನೆ ನೀಡಿತ್ತು.

ಈ ವಿಚಾರಕ್ಕೆ ಸಂಬಂಧಿಸಿದಂತೆ ಮಂಗಳವಾರ ಮಧ್ಯಾಹ್ನ 12ರಿಂದ 2ಘಂಟೆವರೆಗೆ ಲೆಕ್ಕಪತ್ರ ಪರಿಶೀಲನೆ ಮಾಡಲು ಬರಬಹುದು ಎಂದು ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದ ಡಾ.ಶಿವಪ್ರಸಾದ್ ಅವರಿಗೆ ಮಾಹಿತಿ ನೀಡಲಾಗಿತ್ತು. ಆದರೆ, ಅವರು ಲೆಕ್ಕಪತ್ರ ಪರಿಶೀಲನೆಗೆ ಬರಲು ನಿರಾಕರಿಸಿದರು.

ADVERTISEMENT

ಆದ್ದರಿಂದ ಇನ್ನೊಬ್ಬ ಅರ್ಜಿದಾರರಾದ ಅನುರಾಧಾ ಅವರು ದೇವಾಲಯದ ಕಚೇರಿಗೆ ಭೇಟಿ ನೀಡಿ ಲೆಕ್ಕಪತ್ರಗಳನ್ನು ಪರಿಶೀಲನೆ ಮಾಡಿ ಸಹಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.