ADVERTISEMENT

ಮುಳಬಾಗಿಲು | ‘ವಿಶ್ವ ತಾಯಂದಿರ ದಿನ‘ ಆಚರಣೆ

​ಪ್ರಜಾವಾಣಿ ವಾರ್ತೆ
Published 11 ಮೇ 2025, 14:15 IST
Last Updated 11 ಮೇ 2025, 14:15 IST
ಮುಳಬಾಗಿಲಿನಲ್ಲಿ ಜನ ಸಮೂಹ ಸಂಘಟನೆಗಳ ವತಿಯಿಂದ ನಡೆದ ವಿಶ್ವ ತಾಯಂದಿರ ದಿನಾಚರಣೆಯಲ್ಲಿ ತಾಯಂದಿರನ್ನು ಸತ್ಕರಿಸಲಾಯಿತು
ಮುಳಬಾಗಿಲಿನಲ್ಲಿ ಜನ ಸಮೂಹ ಸಂಘಟನೆಗಳ ವತಿಯಿಂದ ನಡೆದ ವಿಶ್ವ ತಾಯಂದಿರ ದಿನಾಚರಣೆಯಲ್ಲಿ ತಾಯಂದಿರನ್ನು ಸತ್ಕರಿಸಲಾಯಿತು   

ಮುಳಬಾಗಿಲು: ಜನ್ಮದಾತೆ ತಾಯಿ ಸ್ಥಾನಕ್ಕೆ ಬೆಲೆ ಕಟ್ಟಲಾಗದು ಎಂದು ಜನಸಮೂಹ ವೇದಿಕೆ ಅಧ್ಯಕ್ಷ ಸಂಗಸಂದ್ರ ವಿಜಯ್ ಕುಮಾರ್ ಹೇಳಿದರು.

ನಗರದ ಅಂಬೇಡ್ಕರ್ ಭವನದಲ್ಲಿ ಜನ ಸಮೂಹ‌ ಸಂಘಟನೆಗಳ ಒಕ್ಕೂಟದಿಂದ ನಡೆದ ವಿಶ್ವ ತಾಯಂದಿರ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದರು.

ಸ್ವರ್ಗಕ್ಕಿಂತಲೂ ಮೀಸಲಾದ ಸ್ಥಾನ ಹೊಂದಿರುವ ತಾಯಂದಿರಿಗೆ ಗೌರವ ನೀಡುವ ದೇಶದಲ್ಲಿ ವೃದ್ಧಾಶ್ರಮ ಹಾಗೂ ಅನಾಥಾಶ್ರಮಗಳು ಇರುವುದು ಆಶ್ಚರ್ಯ ಹಾಗೂ ದುಃಖಕರ ಸಂಗತಿ ಎಂದು ವಿಷಾದ ವ್ಯಕ್ತಪಡಿಸಿದರು.

ADVERTISEMENT

ಇದೇ ಸಂಧರ್ಭದಲ್ಲಿ 25 ಮಂದಿ ತಾಯಂದಿರನ್ನು ವೇದಿಕೆ ವತಿಯಿಂದ ಸತ್ಕರಿಸಲಾಯಿತು.

ಮುದಿಗೆರೆ ರಾಜಣ್ಣ,ಖಲೀಮ್,ನರಸಿಂಹಮೂರ್ತಿ,ಶಂಕರ್,ಶಾಮಣ್ಣ,ರಾಮಣ್ಣ,ನಾರಾಯಣಸ್ವಾಮಿ, ಜಮೀರ್ ಅಹಮದ್ ಸಲೀಂ,ವೆಂಕಟರಾಮ್,ಈಶ್ವರಮ್ಮ, ಸರಸ್ವತಿ, ಮುನಿರಾಜು ಮತ್ತಿತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.