ADVERTISEMENT

ಅಂಗವಿಕಲರಿಗೂ ಬದುಕಲು ಅವಕಾಶ ನೀಡಿ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2012, 5:00 IST
Last Updated 3 ಅಕ್ಟೋಬರ್ 2012, 5:00 IST

ಕೊಪ್ಪಳ: ಅಂಗವಿಕಲತೆಯನ್ನು ಶಾಪವೆಂದು ತಿಳಿಯಬಾರದು. ಅಂಗವಿಕಲರಿಗೂ ಎಲ್ಲರಂತೆ ಬದುಕಲು ಅವಕಾಶ ನೀಡುವುದು ಸಮಾಜದ ಕರ್ತವ್ಯ ಎಂದು ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸ್ಥಳೀಯ ಘಟಕದ ಉಪಾಧ್ಯಕ್ಷ ಡಾ.ಕೆ.ಜಿ.ಕುಲಕರ್ಣಿ ಹೇಳಿದರು.

ವಿಶ್ವ ವಾಕ್-ಶ್ರವಣ ನ್ಯೂನತೆಯುಳ್ಳ ವ್ಯಕ್ತಿಗಳ ದಿನಾಚರಣೆ ಅಂಗವಾಗಿ ಸಮೂಹ ಸಾಮರ್ಥ್ಯ ಸಂಸ್ಥೆಯ ವತಿಯಿಂದ ಈಚೆಗೆ ನಗರದ ರಾಘವೇಂದ್ರ ಸ್ವಾಮಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ತಮ್ಮ ಮಕ್ಕಳಲ್ಲಿನ ಅಂಗವೈಕಲ್ಯ ಕಂಡು ಪಾಲಕರು ಸಹ ಕೊರಗಬಾರದು. ಅವರು ತಮ್ಮ ಅಂಗವಿಕಲತೆಯನ್ನು ಮೆಟ್ಟಿ ನಿಂತು ಏನಾದರೂ ಸಾಧನೆ ಮಾಡುವಂತೆ ಸಹಕರಿಸಬೇಕು ಎಂದು ಕಿವಿಮಾತು ಹೇಳಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ವಿ.ದೊರೈಸ್ವಾಮಿ, ಅಕ್ಕಮಹಾದೇವಿ ಮಹಿಳಾ ಮಂಡಳ ಅಧ್ಯಕ್ಷೆ ಕೋಮಲಾ ಕುದರಿಮೋತಿ ಮಾತನಾಡಿದರು.

ಸಮೂಹ ಸಾಮರ್ಥ್ಯದ ಸಂಯೋಜಕ ಎಚ್.ಎನ್.ಬಸಪ್ಪ, ಇನ್ನರ್‌ವೀಲ್ ಕ್ಲಬ್‌ನ ಅಧ್ಯಕ್ಷೆ ಪಾರ್ವತಿ ಪಾಟೀಲ, ರತ್ನಾ ಪಾಟೀಲ, ಡಾ.ರಾಧಾ ಕುಲಕರ್ಣಿ, ವೈಷ್ಣವಿ ಹುಲಗಿ ವೇದಿಕೆ ಮೇಲೆ ಉಪಸ್ಥಿತರಿದ್ದರು.

ವಿರೂಪಾಕ್ಷಿ ಅಳವಂಡಿ ಸ್ವಾಗತಿಸಿದರು. ತಾಹೀರಾ ಕಾರ್ಯಕ್ರಮ ನಿರೂಪಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.