ADVERTISEMENT

ಆಸ್ತಿ ವಿವಾದ: ವ್ಯಕ್ತಿಗೆ ಗುಂಡೇಟು

​ಪ್ರಜಾವಾಣಿ ವಾರ್ತೆ
Published 7 ಜನವರಿ 2014, 8:26 IST
Last Updated 7 ಜನವರಿ 2014, 8:26 IST

ಗಂಗಾವತಿ: ಹಣ ಮತ್ತು ಆಸ್ತಿ ಸಂಬಂಧ ಇಬ್ಬರು ಸಂಬಂಧಿಕರ ನಡುವೆ ವಾಗ್ವಾದ ನಡೆದು, ಒಬ್ಬ ಮತ್ತೊಬ್ಬನ ಮೇಲೆ ಗುಂಡು ಹಾರಿಸಿದ ಘಟನೆ ಗ್ರಾಮೀಣ ಠಾಣೆ ವ್ಯಾಪ್ತಿಯ ಆರ್ಹಾಳ ಗ್ರಾಮದಲ್ಲಿ ಸೋಮವಾರ ನಡೆದಿದೆ.

ಯರಡೋಣದ ಚನ್ನನಗೌಡ ಶಿವಪೂಜಿಗೆ ಅವರಿಗೆ ಗುಂಡೇಟಿನಿಂದ ತಲೆಗೆ ತೀವ್ರ ಗಾಯವಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಬಳ್ಳಾರಿಯ ವಿಜಯನಗರ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದೆ.

ಗುಂಡು ಹಾರಿಸಿದ ಬಸವರಾಜ ಹೊಸಳ್ಳಿ ಎಂಬಾತನನ್ನು  ಬಂಧಿಸಿರುವ ಗ್ರಾಮೀಣ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಘಟನೆ ವಿವಿರ: ‘ಸೋದರ ಸಂಬಂಧಿ­ಯಾದ ಬಸವರಾಜನ ಕುಟುಂಬಕ್ಕೆ ಹಣ­ಕಾಸಿನ ಅ­ಡ­ಚಣೆ ಉಂಟಾದಾಗ ಮ­­ಧ್ಯಸ್ಥಿಕೆ ವಹಿಸಿದ್ದ ಚ­ನ್ನನಗೌಡ
ಶಿ­ವಪೂಜಿ ಬೇರೆ­ಯವರಿಂದ ಹಣ ಕೊಡಿಸಿ­ದ್ದರು.

ಹಣ ಮರಳಿಸಿದೆ ಮೂರು ವರ್ಷದಿಂದ ಬಸವರಾಜ ಸತಾಯಿಸುತ್ತಿದ್ದರು. ಶನಿವಾರ ಪ್ರಕರಣ ಸಂಬಂಧ ಪರಸ್ಪರ ಮಾತಿನ ಚ­ಕಮಕಿ ನಡೆ­ದಿದೆ.
ಸೋ­ಮವಾರ ಹ­ಣ ನೀಡುವ ಭ­­ರವಸೆ ನೀಡಿದ್ದ ಬಸ­ವರಾಜ ಅವ­ರ ಆ­ಶ್ವಾಸನೆ ಮೇ­ರೆಗೆ ಆ­ರ್ಹಾ­­ಳಕ್ಕೆ ತೆರಳಿದ್ದ ಶಿವ­ಪೂಜಿಯ ಮೇಲೆ ಬಸ­ವ­ರಾಜ ಏಕಾ­ಏಕಿ ಪಿಸ್ತೂಲಿ­ನಿಂದ ಗುಂಡು ಹಾರಿಸಿ ಕೊಲೆಗೆ ಯತ್ನಿಸಿದ್ದಾನೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಮಾಹಿತಿ ತಿಳಿದ ತಹಶೀಲ್ದಾರ್‌ ಎಂ.ಗಂಗಪ್ಪ ಕಲ್ಲೂರು, ನಗರಠಾಣೆ ಪಿಐ ಕಾಳಿಕೃಷ್ಣ ಆಸ್ಪತ್ರೆಗೆ ಭೇಟಿ ನೀಡಿದರು.
ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಮಂಜುನಾಥ ಅಣ್ಣಿಗೇರಿ, ಗಂಗಾವತಿ ಡಿವೈಎಸ್ಪಿ ವಿನ್ಸಂಟ್‌ ಶಾಂತಕುಮಾರ, ಗ್ರಾಮೀಣ ಸಿಪಿಐ ರಮೇಶ ಧರ್ಮಟ್ಟಿ, ಗ್ರಾಮೀಣ ಪಿಎಸ್‌ಐ ಹನುಮರೆಡ್ಡಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಆರೋಪಿಯಿಂದ ಪಿಸ್ತೂಲ್‌ ವಶಪಡಿಸಿಕೊಳ್ಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.