ADVERTISEMENT

‘ಕುಡಿ ಚಿವುಟುವುದರಿಂದ ಉತ್ತಮ ಇಳುವರಿ’

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2017, 8:35 IST
Last Updated 20 ಅಕ್ಟೋಬರ್ 2017, 8:35 IST

ಕೊಪ್ಪಳ: ಬಿತ್ತನೆ ಮಾಡಿದ 20ರಿಂದ 30 ದಿನದ ನಂತರ ಕುಡಿ ಚಿವುಟುವುದರಿಂದ ಉತ್ತಮ ಇಳುವರಿ ಪಡೆಯಬಹುದು ಎಂದು ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ವಿಸ್ತರಣಾ ಮುಂದಾಳು ಡಾ. ಎಂ.ಬಿ. ಪಾಟೀಲ ಹೇಳಿದರು.

ಯಲಬುರ್ಗಾ ತಾಲ್ಲೂಕಿನ ಸಂಗನಾಳ ಗ್ರಾಮದಲ್ಲಿ ಈಚೆಗೆ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ಆಶ್ರಯದಲ್ಲಿ ನಡೆದ ‘ಲಾಭದಾಯಕ ಕಡಲೆ ಬೇಸಾಯದ ತರಬೇತಿ ಕಾರ್ಯಕ್ರಮ’ದಲ್ಲಿ ಮಾತನಾಡಿದರು.

‘ಬಿತ್ತುವ ಪೂರ್ವದಲ್ಲಿ ಕಡಲೆ ಬೀಜಕ್ಕೆ ಬೀಜೋಪಚಾರ ಮಾಡಬೇಕು. 25 ಕೆ.ಜಿ ಬೀಜಕ್ಕೆ 500 ಗ್ರಾಂ ರೈಜೋಬಿಯಂ, 500 ಗ್ರಾಂ ರಂಜಕ ಕರಗಿಸುವ ಅಣುಜೀವಿಯ ಗೊಬ್ಬರ (ಪಿ.ಎಸ್.ಬಿ) ಹಾಗೂ 100 ರಿಂದ 200 ಗ್ರಾಂ ಟ್ರೈಕೋಡರ್ಮಾ ಈ ಮೂರನ್ನು ಪ್ರತಿ ಬೀಜಕ್ಕೆ ತಗುಲುವಂತೆ ಮಿಶ್ರಣ ಮಾಡಬೇಕು.

ADVERTISEMENT

ಬೀಜೋಪಚಾರವಾದ ನಂತರ 6 ಗಂಟೆ ಗಾಳಿಗೆ ಬಿಟ್ಟು ನಂತರ ಬಿತ್ತಲು ಉಪಯೋಗಿಸಬೇಕು. ಈ ಬೀಜೋಪಚಾರ ಮಾಡುವುದರಿಂದ ಸಿಡಿರೋಗ, ಎಲೆ ಮುಟುರು ರೋಗ, ಗೊಡ್ಡುರೋಗಗಳನ್ನು ತಡೆಗಟ್ಟಬಹುದು’ ಎಂದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.