ADVERTISEMENT

‘ಕೆರೆಗಳ ನಿರ್ಮಾಣ ಉತ್ತಮ ಯೋಜನೆ’

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2018, 13:24 IST
Last Updated 29 ಮಾರ್ಚ್ 2018, 13:24 IST

ಕನಕಗಿರಿ: ಕಡು ಬೇಸಿಗೆ ಸಮಯದಲ್ಲಿ ನೀರಿನ ಬಳಕೆ ಮಹತ್ವವನ್ನು ಪ್ರತಿಯೊಬ್ಬರು ಅರಿಯಬೇಕು ಎಂದು ತಾಲ್ಲೂಕು ಪಂಚಾಯಿತಿ ಸದಸ್ಯ ಬಸವರಾಜಸ್ವಾಮಿ ತಿಳಿಸಿದರು.

ಸಮೀಪದ ಆದಾಪುರ ಗ್ರಾಮದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಆಶ್ರಯದಲ್ಲಿ ಮಂಗಳವಾರ ಆಯೋಜಿಸಿದ್ದ ಕೆರೆ ಹೂಳು ಎತ್ತುವ ಕಾಮಗಾರಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿ, ನೀರನ್ನು ಹಿತಮಿತವಾಗಿ ಬಳಕೆ ಮಾಡಬೇಕು ಎಂದರು.

ಯೋಜನೆಯ ಹೈದರಾಬಾದ್‌ ಕರ್ನಾಟಕ ಪ್ರಾದೇಶಿಕ ನಿರ್ದೇಶಕ ಪಿ ಗಂಗಾಧರ್ ರೈ ಮಾತನಾಡಿ, ಅಂತರ್ಜಲ ಮಟ್ಟ ಹೆಚ್ಚಳಕ್ಕೆ ಕೆರೆಗಳು ಸಹಕಾರಿ. ಕೆರೆ, ಬಾವಿಗಳಲ್ಲಿ ನೀರಿನ ಕೊರತೆ ಕಂಡು ಬಂದರೆ ಜನ, ಜಾನುವಾರುಗಳು ಹಾಹಾಕಾರ ಅನುಭವಿಸಬೇಕಾಗುತ್ತದೆ. ಕೆರೆಯ ಹೂಳೆತ್ತುವ ಕಾಮಗಾರಿಗೆ ₹10 ಲಕ್ಷ ನೀಡಲಾಗಿದೆ ಎಂದು ತಿಳಿಸಿದರು,

ADVERTISEMENT

ಸೋಮನಾಳದ ಚಂದ್ರಶೇಖರಯ್ಯ ತಾತ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹನುಮಂತಮ್ಮ, ಎಪಿಎಂಸಿ ನಿರ್ದೇಶಕ ಸಣ್ಣಪ್ಪ ಭಾವಿಕಟ್ಟಿ, ಜಿಲ್ಲಾ ನಿರ್ದೇಶಕ ಶೇಖರಗೌಡ, ಕೆರೆ ಸಮಿತಿ ಅಧ್ಯಕ್ಷ ತಿಮ್ಮರೆಡ್ಡೆಪ್ಪ, ಮುಖಂಡರಾದ ಜಡಿಯಪ್ಪ ಮುಕ್ಕುಂದಿ, ಕಳಕನಗೌಡ, ಶರಣಪ್ಪ ಸಾಹುಕಾರ, ರಾಮನಗೌಡ ಬುನ್ನಟ್ಟಿ. ಶೇಖರಗೌಡ , ಬಸವನಗೌಡ ಪಾಟೀಲ, ಯೋಜನೆಯ ಪದಾಧಿಕಾರಿ
ಗಳಾದ ಮಹೇಶ, ರುದ್ರಪ್ಪ ಹೂಗಾರ ಇದ್ದರು,

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.