ADVERTISEMENT

ಗರ್ಭಿಣಿಯರಿಗೆ ಸೀಮಂತ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2018, 15:52 IST
Last Updated 14 ಅಕ್ಟೋಬರ್ 2018, 15:52 IST
ಕುಕನೂರು ತಾಲ್ಲೂಕಿನ ರಾಜೂರು ಗ್ರಾಮದ ಶರಣಬಸವೇಶ್ವರ ದೇವಸ್ಥಾದಲ್ಲಿ ಶನಿವಾರ ಸೀಮಂತ ಕಾರ್ಯಕ್ರಮ ನಡೆಯಿತು
ಕುಕನೂರು ತಾಲ್ಲೂಕಿನ ರಾಜೂರು ಗ್ರಾಮದ ಶರಣಬಸವೇಶ್ವರ ದೇವಸ್ಥಾದಲ್ಲಿ ಶನಿವಾರ ಸೀಮಂತ ಕಾರ್ಯಕ್ರಮ ನಡೆಯಿತು   

ಕುಕನೂರು: ಗರ್ಭಿಣಿಯರು ಕಾಲಕಾಲಕ್ಕೆ ತಪಾಸಣೆ ಮಾಡಿಸಿಕೊಂಡು ಪೌಷ್ಟಿಕ ಆಹಾರ ಸೇವಿಸಬೇಕು ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಡಿ.ಬೆನ್ನೂರ ಹೇಳಿದರು.

ತಾಲ್ಲೂಕಿನ ರಾಜೂರು ಗ್ರಾಮದ ಶರಣಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಶಿಶು ಅಭಿವೃಧ್ಧಿ ಯೋಜನೆ ಇಲಾಖೆ ಹಾಗೂ ಆರೋಗ್ಯ ಇಲಾಖೆ ವತಿಯಿಂದ ಪೋಷಣ ಅಭಿಯಾನ ಕಾರ್ಯಕ್ರಮದಡಿಯಲ್ಲಿ ಪೌಷ್ಟಿಕ ಆಹಾರ ಶಿಬಿರ ಹಾಗೂ ಗರ್ಭಿಣಿಯರಿಗೆ ಸೀಮಂತ ಕಾರ್ಯಕ್ರಮದಲ್ಲಿ ಮಾತನಾಡಿದರು.

ಹಿರಿಯ ಆರೋಗ್ಯ ಸಹಾಯಕ ಚನ್ನಬಸಯ್ಯ ಸರಗಣಾಚಾರ ಮಾತನಾಡಿ, ತಾಯಿಯ ಎದೆ ಹಾಲಿನ ಮಹತ್ವ ಹಾಗೂ ಸ್ವಚ್ಛತೆ ಬಗ್ಗೆ ಮಾತನಾಡಿದರು.

ADVERTISEMENT

ಗ್ರಾಮ ಪಂಚಾಯತ ಸದಸ್ಯ ಲಿಂಗರಡ್ಡಿ ಚಿಲಕಮುಖಿ, ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ಜಯಶ್ರೀ ಕೊಟಗಿ, ಸಮುದಾಯ ಆರೋಗ್ಯ ಅಧಿಕಾರಿ ಮಹಾಲಕ್ಷ್ಮಿ, ಸಾವಿತ್ರಿ ಹಿರೇಮಠ, ಶಾರದಾ ಹೊಟ್ಟಿನ, ರೇಣುಕಾ ನಾಯಕ, ಕಸ್ತೂರಿ ರಡ್ಡೆರ್, ಅನ್ನಕ್ಕ ಕಂದಗಲ್,ಶಾರದಾ ಶಿಂಧೆ, ಸೀತಮ್ಮ ನಿಗೂಢಗಿ, ಶಿವಮ್ಮ ಕಟ್ಟಿಮನಿ, ಶಿಲ್ಪಾ ಹಿರೇಮಠ, ಸವಿತಾ ಕಾಯಿಗಡ್ಡಿ, ಅನ್ನಪೂರ್ಣಾ ಉಜ್ಜವ್ವನವರ, ಅನ್ನಪೂರ್ಣ ಮುಂಡರಗಿ,ಶರಣಮ್ಮ ಮಾದಿನೂರ, ಲತಾ ಗೊಂದಿ, ಅನಸುಯಾ ಬಡಿಗೇರ, ಲಲಿತಾ ಕೊಪ್ಪಳ, ಶರಣಮ್ಮ ಗೋಡೆಕಾರ, ವಿಜಯಲಕ್ಷ್ಮೀ ಘೋರ್ಪಡೆ, ನೂರಜಾನ್ ಸಂಕನೂರ, ಅಕ್ಕಮ್ಮ ಚೌಡಿಮಠ, ಮಂಜುಳಾ ತಳವಾರ, ಆಪ್ತ ಸಮಾಲೋಚಕ ಕಳಕಪ್ಪ ಬಂಡಿ ಇದ್ದರು.

ರಾಜೂರ, ಆಡೂರ, ದ್ಯಾಮಪೂರ, ಹರಿಶಂಕರಬಂಡಿ, ಚನ್ನಪ್ಪನಹಳ್ಳಿ ಗ್ರಾಮದಿಂದ ಬಂದಿದ್ದ 62 ಜನ ಗರ್ಭಿಣಿಯರಿಗೆ ಅರಿಶಿಣ-ಕುಂಕುಮ, ಹೂ ನೀಡಿ ಸಾಂಪ್ರದಾಯಕ ರೀತಿಯಲ್ಲಿ ಉಡಿ ತುಂಬಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.