ADVERTISEMENT

ಭತ್ತದ ಗದ್ದೆಗೆ ಬೆಂಕಿ ಬೇಡ: ಸಲಹೆ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2013, 9:29 IST
Last Updated 21 ಡಿಸೆಂಬರ್ 2013, 9:29 IST

ಮುನಿರಾಬಾದ್‌:  ತುಂಗಭದ್ರಾ ಅಚ್ಚು­ಕಟ್ಟು ಪ್ರದೇಶದಲ್ಲಿ ನಿರಂತರವಾಗಿ ಬತ್ತ ಬೆಳೆಯಲಾಗುತ್ತಿದ್ದು ಸುಗ್ಗಿಯ ಬೆಳೆ­ಯನ್ನು ತೆಗೆದುಕೊಂಡ ರೈತ ಬೇಸಿಗೆ ಬೆಳೆಗೆ ತಯಾರಿ ನಡೆಸಿದ್ದು ಹೊಲಕ್ಕೆ ಬೆಂಕಿ ಹಾಕುವ ಕೆಲಸ ರೈತರಿಂದ ಅವ್ಯಾಹ­­ತವಾಗಿ ನಡೆದಿದೆ.

ಗಂಗಾವತಿ ಕೃಷಿ ಸಂಶೋಧನಾ ಕೇಂದ್ರದ ತಳಿ ವಿಜ್ಞಾನಿ ಪ್ರೋ.ಮೊಹ್ಮದ್‌ ಇಬ್ರಾಹಿಂ ಹೇಳುವಂತೆ ಗ್ರಾಮೀಣ ಜನರ ಮೂಲಾಧಾರ ಬೇಸಾಯ, ಅದಕ್ಕೆ ಮೂಲಾಧಾರ ಮಣ್ಣು. ಮಣ್ಣಿ­ನಲ್ಲಿ ರೈತನ ಮಿತ್ರರಂತೆ ಕೆಲಸ ಮಾಡುವ ಅನೇಕ ಸೂಕ್ಷ್ಮಾಣು­ಜೀವಿ­ಗಳು ನೆಲೆಸಿರುತ್ತವೆ.

ಆದರೆ ರೈತರು ಬತ್ತದ ಕೊಯ್ಲಿನ ನಂತರ ಉಳಿಯುವ ಪುಡಿ ಬತ್ತದ ಹುಲ್ಲನ್ನು ಬೆಂಕಿ ಹಾಕಿ ಸುಡುತ್ತಿರುವುದರಿಂದ ಅಂಥಹ ಅನೇಕ ಜೀವಿಗಳು ಸತ್ತು ಹೋಗುತ್ತವೆ ಇದರಿಂದ ಪರಿಸರ ಅಸಮತೋಲನ ಉಂಟಾಗುತ್ತದೆ.

ಬೆಂಕಿಯ ಉಷ್ಣದ ಪರಿಣಾಮ ಮಣ್ಣು ತನ್ನ ಮೂಲ ಸತ್ವವನ್ನು ಕಳೆದುಕೊಳ್ಳುವ ಸಂಭವ­ವಿರುತ್ತದೆ ಅಲ್ಲದೆ ಬದುವಿನಲ್ಲಿನ ಇತರ ಗಿಡಗಳಿಗೂ  ಮಾರುಕಟ್ಟೆಯಲ್ಲಿ ಒಳ್ಳೆಯ ಬೆಲೆ ಕೂಡ ಇರಬೇಕು. ಆದರೆ ಎರಡೂ ನಮ್ಮ ನಿಯಂತ್ರಣದಲ್ಲಿಲ್ಲ.

ರೈತ ಖರ್ಚನ್ನು ಕಡಿಮೆ ಮಾಡಿಕೊ­ಳ್ಳುವುದು  ಹಾಗೂ ಬತ್ತದ ಉಪ ಉತ್ಪನ್ನ­ವಾದ ಹುಲ್ಲಿಗೆ ಬೆಂಕಿ ಇಡುವ ಬದಲಿಗೆ ಅದನ್ನು ಸಂಗ್ರಹಿಸಿ ಬಳಸ­ಬಹುದು ಅಥವಾ ಮಾರಾಟ ಮಾಡಿ ಹಣ ಗಳಿಸಬಹುದಾಗಿದೆ ಎಂದು ಅಭಿ­ಪ್ರಾ­ಯಪಡುತ್ತಾರೆ. ಇದಾವು­ದನ್ನೂ ಲೆಕ್ಕಿಸದ ರೈತರು ದೊಡ್ಡ ಗಾತ್ರದ ಹುಲ್ಲನ್ನು ಮಾತ್ರ ಸಂಗ್ರಹಿಸಿ ಪುಡಿ ಹುಲ್ಲಿಗೆ ಬೆಂಕಿ ಹಾಕಿ ಸುಡುವುದನ್ನು ಮಾತ್ರ ನಿಲ್ಲಿಸುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.