ADVERTISEMENT

ಮಳೆ ಬಂದರೂ ಈಗ ರೈತರಿಗಿಲ್ಲ ಪ್ರಯೋಜನ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2012, 9:35 IST
Last Updated 9 ಅಕ್ಟೋಬರ್ 2012, 9:35 IST

ಹನುಮಸಾಗರ: ಈ ಸಮಯದಲ್ಲಿ ಸಜ್ಜೆ ಸಂಪೂರ್ಣ ಕೊಯಿಲಾಗಿರಬೇಕಾಗಿತ್ತು, ಜೋಳದ ಗೂಡುಗಳನ್ನು ಹಾಕಬೇಕಾಗಿತ್ತು, ಹಬ್ಬಶೇಂಗಾ ಬಳ್ಳಿ ನೆಲಕ್ಕೆ ಹಾಸಬೇಕಾಗಿತ್ತು ಆದರೆ ಮೂರು ತಿಂಗಳ ಕಾಲ ಮಳೆ ದೂರ ಸರಿದಿದ್ದರಿಂದ ಬಿತ್ತನೆ ಕಾರ್ಯ ನಡೆದಿಲ್ಲ.

`ಆದರೆ ಇತ್ತೀಚೆಗೆ ಸುರಿದ ಕೊಂಚ ಮಳೆಯಿಂದಲಾದರೂ ಭೂಮಿಗೆ ಹಸಿರಿನ ಭಾಗ್ಯ ಕಾಣವಂತಾಗಿದೆ; ಇದು ನಮ್ಮ ಪುಣ್ಯ~ ಎಂದು ರೈತ ಸುರೇಶಬಾಬು ಜಮಖಂಡಿಕರ ಹೇಳುತ್ತಾರೆ.

ಮುಂದೆ ಮಳೆಯಾಗಬಹುದು ಎಂಬ ನಿರೀಕ್ಷೆಯಲ್ಲಿದ್ದ ರೈತರು ಸ್ವಲ್ಪ ಪ್ರಮಾಣದಲ್ಲಿ ಬಿದ್ದ `ಮಗೆ  ಮಳೆ~ಗೆ ಸಾಕಷ್ಟು ಪ್ರಮಾಣದಲ್ಲಿ ಸಜ್ಜೆ ಬಿತ್ತನೆ ಮಾಡಿದ್ದರು. ಆದರೆ ಮುಂದಿನ ಬಹುತೇಕ ಮಳೆಗಳು ಕೈಕೊಟ್ಟಿದ್ದರಿಂದ ಸಜ್ಜೆ ಬೆಳೆಯೂ ಸಂಪುರ್ಣ ಕಾಳುಕಟ್ಟದೆ ಅರೆಬರೆ ತೆನೆಬಿಟ್ಟಿರುವುದರಿಂದ ಅದೀಗ ಕೂಲಿ ಆಳಿನ ಖರ್ಚಿನಷ್ಟಾಗುವುದು ಕಷ್ಟ ಎಂದು ಅವರು ಹೇಳಿದರು.

ಸದ್ಯ ಉತ್ತರೆ ಮಳೆಯಾಗುತ್ತಿದ್ದರೂ ಮಸಾರಿ ಭೂಮಿಗೆ ಯಾವುದೇ ಪ್ರಯೋಜನವಾಗುವುದಿಲ್ಲ. ಇದೇ ರೀತಿ ಬಂದರೆ ಜಾನುವಾರುಗಳಿಗೆ ಕುಡಿಯುವ ನೀರು, ಹುಲ್ಲು ಹಾಗೂ ಹುರಳಿಗೆ ಮಾತ್ರ ಉಪಯೋಗ ಎಂದು ಹೇಳಲಾಗುತ್ತಿದೆ. ಆದರೆ ಇಲ್ಲಿಯವರಗೆ ಹಸಿರು ಮೇವಿಲ್ಲದೆ ಪರಿತಪಿಸಿದ ಜಾನುವಾರುಗಳು ಸ್ವಲ್ಪು ದಿನ ಮಾತ್ರ ನೆಮ್ಮದಿಯಿಂದ ಬದುಗಳಲ್ಲಿ ಬೆಳೆದ ಕರಿಕೆ, ಹುಲ್ಲು ಮೇಯಬಹುದಾಗಿದೆ ಎಂದು ರೈತರು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.