ADVERTISEMENT

ವಾಲ್ಮೀಕಿ ಬಗ್ಗೆ ಅಪಚಾರದ ಪದ ಬಳಕೆ: ಡಾ.ಮಾಳೆ ವಿಷಾದ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2011, 11:05 IST
Last Updated 12 ಅಕ್ಟೋಬರ್ 2011, 11:05 IST

ಕುಷ್ಟಗಿ: ಇತಿಹಾಸವನ್ನು ಸರಿಯಾಗಿ ಅರ್ಥಮಾಡಿಕೊಳ್ಳದೇ ರಾಮಾಯಣದಂಥ ಮಹಾಕಾವ್ಯವನ್ನು ನೀಡಿದ ಮಹರ್ಷಿ ವಾಲ್ಮೀಕಿಯನ್ನು ಕಳ್ಳ, ದರೋಡೆಕೋರ, ಕೊಲೆಗಡುಕ ಎಂಬ ಅಪಚಾರ ಪದಗಳನ್ನು ಬಳಸುವ ಮೂಲಕ ಅವರ ವ್ಯಕ್ತಿತ್ವಕ್ಕೆ ಧಕ್ಕೆ ತರುವಂಥ ಕೆಲಸ ನಡೆಯುತ್ತಿದೆ ಎಂದು ಉಪನ್ಯಾಸಕ ಡಾ.ಡಿ.ಕೆ.ಮಾಳೆ ಮಂಗಳವಾರ ಇಲ್ಲಿ ವಿಷಾದಿಸಿದರು.

ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವದ ಅಂಗವಾಗಿ ಸರ್ಕಾರದ ವತಿಯಿಂದ  ತಹಸೀಲ್ದಾರರ ಕಚೇರಿ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಮಾರಂಭದಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು, ಸವಕಲು ಪದಗಳನ್ನು ಬಳಸುವುದನ್ನು ಕೈಬಿಡಬೇಕು ಎಂದು ಮನವಿ ಮಾಡಿದರು.

ಮಾಜಿ ಶಾಸಕ ಕೆ.ಶರಣಪ್ಪ, ಹಸನ್‌ಸಾಬ್ ದೋಟಿಹಾಳ, ದೊಡ್ಡನಗೌಡ ಪಾಟೀಲ, ಜಿ.ಪಂ ಮಾಜಿ ಅಧ್ಯಕ್ಷೆ ಮಾಲತಿ ನಾಯಕ, ಪ್ರಾಸ್ತಾವಿಕವಾಗಿ ತಹಸೀಲ್ದಾರ ವೀರೇಶ ಬಿರಾದಾರ ಮಾತನಾಡಿದರು. ಪುರಸಭೆ ಅಧ್ಯಕ್ಷೆ ಮೋದಿನಬಿ ಮುಲ್ಲಾ ಅಧ್ಯಕ್ಷತೆ ವಹಿಸಿದ್ದರು.

ಸಮಾಜದ ಗುರುಗಳಾದ ಹುಲಿಹೈದರದ ನವೀನಚಂದ್ರ ನಾಯಕ, ಪುರಸಭೆ ಉಪಾಧ್ಯಕ್ಷೆ ರೂಪಾ ಕೊನಸಾಗರ, ಜಿ.ಪಂ ಸದಸ್ಯೆಯರಾದ ಅನ್ನಪೂರ್ಣಮ್ಮ ವಾಲ್ಮೀಕಿ, ಹನುಮಕ್ಕ ಚೌಡ್ಕಿ, ಈರಪ್ಪ ಹಜಾಳ, ಎಪಿಎಂಸಿ ಅಧ್ಯಕ್ಷ ಗುರನಗೌಡ, ಉಪಾಧ್ಯಕ್ಷ ನಿಂಗಪ್ಪ ಕುರನಾಳ, ಸದಸ್ಯಹನಮಗೌಡ ಅಮರೇಗೌಡ ಪಾಟೀಲ, ಹ.ಯ.ಈಟಿಯವರ, ತಾ.ಪಂ ಇ.ಒ ಜಯರಾಮ ಚವ್ಹಾಣ, ಸಿಪಿಐ ನೀಲಪ್ಪ ಓಲೇಕಾರ, ಬಿ.ಇ.ಒ ಭೀಮಪ್ಪ ಗೋನಾಳ, ನಾಗರಾಜ ಮೇಲಿನಮನಿ, ಶಿವಪುತ್ರಪ್ಪ ಗುಮಗೇರಿ ಸೇರಿದಂತೆ ನಾಯಕ ಇತರೆ ಸಮಾಜಗಳ ಪ್ರಮುಖರು ವೇದಿಕೆಯಲ್ಲಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.