ADVERTISEMENT

ಶರಣರ ವಚನ ಅಜರಾಮರ:ಕನ್ನೂರ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2012, 6:45 IST
Last Updated 6 ಡಿಸೆಂಬರ್ 2012, 6:45 IST

ಹನುಮಸಾಗರ:  ಸಮಾಜದ ಓರೆಕೋರೆಗಳನ್ನು ತಿದ್ದುವುದಕ್ಕಾಗಿ ಶರಣರು ನಡೆಸಿದ ವಚನ ಕ್ರಾಂತಿ ಸೂರ್ಯ ಚಂದ್ರ ಇರುವವರೆಗೂ ಶಾಶ್ವತ ಎಂದು ನಿವೃತ್ತ ಉಪನ್ಯಾಸಕ ಕರಿಸಿದ್ದಪ್ಪ ಕನ್ನೂರ ಹೇಳಿದರು.

ಸೋಮವಾರ ಇಲ್ಲಿನ ಅನ್ನದಾನೇಶ್ವರ ಮಠದಲ್ಲಿ ಫಕೀರೇಶ್ವರ ಪುರಾಣ ಮಂಗದ ನಿಮಿತ್ತ ನಡೆದ ಕಾರ್ಯಕ್ರಮದಲ್ಲಿ ವಚನ ಸಾಹಿತ್ಯ ಕುರಿತು ಅವರು ಉಪನ್ಯಾಸ ನೀಡಿದರು.

12ನೇ ಶತಮಾನದಲ್ಲಿಯೇ ಬಸವಣ್ಣನವರು ಜಾತೀಯತೆಯನ್ನು ಹೋಗಲಾಡಿಸಲು ಕ್ರಾಂತಿಯ ಮಾರ್ಗ ಅನುಸರಿಸಬೇಕಾಯಿತು. ತಮ್ಮ ಅನುಭವ ಮಂಟಪದ ಮೂಲಕ ತುಳಿತಕ್ಕೊಳಪಟ್ಟವರಿಗೆ ಹಾಗೂ ಸ್ತ್ರೀಯರಿಗೆ ಸಮಾಜದಲ್ಲಿ ಸಮಾನ ಅವಕಾಶ ನೀಡುವಲ್ಲಿ ಮಾಡಿದ ಅವರ ಕಾರ್ಯ ಎಂದಿಗೂ ಅಜರಾಮರ ಎಂದು ಅಭಿಪ್ರಾಯಪಟ್ಟರು.

ಅನ್ನದಾನೇಶ್ವರಸ್ವಾಮಿಗಳು ಕಾರ್ಯಕ್ರಮದ ಸಾನಿಧ್ಯವಹಿಸಿದ್ದರು. ನಿಡಗುಂದಿಕೊಪ್ಪದ ಶಿವಬಸವಸ್ವಾಮಿಗಳು, ಗುರುಪಾದಸ್ವಾಮಿಗಳು, ಮಹಾದೇವದೇವರು, ಕುಮಾರದೇವರು, ಕೊಟ್ಟೂರು ಚನ್ನಮಲ್ಲಿಕಾರ್ಜುನಸ್ವಾಮಿಗಳು, ಅನ್ನದಾನಶಾಸ್ತ್ರಿಗಳು, ಮುಖಂಡರಾದ ದೊಡ್ಡಬಸವ ಬಯ್ಯಾಪೂರ, ಬಸವರಾಜ ಹಳ್ಳೂರ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಧರಿಯಾಬಿ ಬಳುಟಗಿ, ಉಪಾಧ್ಯಕ್ಷ ಬಸವರಾಜ ದ್ಯಾವಣ್ಣವರ, ಕರಿಸಿದ್ದಪ್ಪ ಚಿನಿವಾಲರ, ಶರಣಪ್ಪ ಅಗಸಿಮುಂದಿನ, ಕಕರಿಸಿದ್ದಪ್ಪ ಕುಷ್ಟಗಿ. ಬಸವರಾಜ ಕಂಪ್ಲಿ, ಸಂಗಯ್ಯ ವಸ್ತ್ರದ ಇತರರು ಇದ್ದರು.

ಮಲ್ಲಯ್ಯ ಕೋಮಾರಿ ಕಾರ್ಯಕ್ರಮ ಸ್ವಾಗತಿಸಿದರು. ಗದಿಗೆಪ್ಪ ಬ್ಯಾಳಿ ನಿರೂಪಿಸಿದರು. ಮಲ್ಲಯ್ಯ ಕೋಮಾರಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.