ADVERTISEMENT

ಸಕಾಲಕ್ಕೆ ಸಿಗದ ಚಿಕಿತ್ಸೆ: ಜಾನುವಾರು ತತ್ತರ

​ಪ್ರಜಾವಾಣಿ ವಾರ್ತೆ
Published 7 ಜನವರಿ 2014, 8:28 IST
Last Updated 7 ಜನವರಿ 2014, 8:28 IST

ಯಲಬುರ್ಗಾ: ನಾಲ್ಕು ತಿಂಗಳಿಂದ ತಾಲ್ಲೂಕಿನ ವಿವಿಧ ಗ್ರಾಮಗಳ ಜಾನು ವಾರುಗಳಿಗೆ ಕಾಲುಬಾಯಿ ರೋಗ ಕಾಣಿಸಿಕೊಂಡಿದ್ದು, ಸೂಕ್ತ ಚಿಕಿತ್ಸೆ ಸಿಗದೆ ರೈತರು ಕಂಗಾಲಾಗಿದ್ದಾರೆ.

‘ಚಿಕಿತ್ಸೆ ನೀಡುವಲ್ಲಿ ಪಶುವೈದ್ಯಕೀಯ ಇಲಾಖೆ ವಿಫಲವಾಗಿದೆ. ಸರಿಯಾದ ನಿರ್ವಹಣೆ ಇಲ್ಲದೇ ಜಾನುವಾರುಗಳು ತೊಂದರೆ ಅನುಭವಿಸಿ ಸಾಯುತ್ತಿವೆ’ ಎಂದು ಸಂಗನಾಳದ ಶರಣಪ್ಪ ಕವಳಕೇರಿ, ಸ್ಥಳೀಯ ಕಲ್ಲಪ್ಪ ಗಾಂಜಿ ಹಾಗೂ ರಮೇಶ ಕುಕನೂರು ಅವರು ದೂರಿದ್ದಾರೆ.

‘ಪಟ್ಟಣ ಸೇರಿದಂತೆ ವಿವಿಧೆಡೆ ಪಶುಚಿಕಿತ್ಸಾ ಕೇಂದ್ರಗಳಿಗೆ ಬರುವ ದನಕರುಗಳಿಗೆ ಸರಿಯಾದ ಚಿಕಿತ್ಸೆ ಲಭಿಸುತ್ತಿಲ್ಲ. ಸೂಕ್ತ ಚಿಕಿತ್ಸೆ ಸಿಗದೆ ಜಾನುವಾರುಗಳು ಇನ್ನಷ್ಟು ತೊಂದರೆಗೆ ಸಿಲುಕುತ್ತಿವೆ. ಈ ಬಗ್ಗೆ ಹಲವು ತಿಂಗಳಿಂದ ಒತ್ತಾಯಿಸಿದರೂ ಸುಧಾರಣೆ ಕಾಣುತ್ತಿಲ್ಲ’ ಎಂದು ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಇದೇ ಪರಿಸ್ಥಿತಿ ಇದೆ. ರೈತರು ಜಾನುವಾರುಗಳನ್ನು ಕಡಿಮೆ ದುಡ್ಡಿಗೆ ಮಾರಾಟ ಮಾಡುವ ಹಂತಕ್ಕೆ ಬಂದಿದ್ದಾರೆ.
ಚಿಕಿತ್ಸಾ ಕೇಂದ್ರಗಳಿಗೆ ಬಂದು ಚಿಕಿತ್ಸೆ ಕೊಡಿಸಲು ಸಾಧ್ಯವಾ ಗದ ಸಂದರ್ಭದಲ್ಲಿ ಮನೆಗೆ ಬರಲು ಸಿಬ್ಬಂದಿ ಹಿಂದೇಟು ಹಾಕುತ್ತಿದ್ದಾರೆ. ಸೌಜನ್ಯ ಕ್ಕಾದರೂ ಬಂದು ಔಷಧ ನೀಡು ತ್ತಿಲ್ಲ. ಖಾಸಗಿ ಅಂಗಡಿಯಲ್ಲಿ ಕೊಳ್ಳು ವಂತೆ ಚೀಟಿ ಬರೆದು ಕಳಿಸುತ್ತಾರೆ.

ಇಂತಹ ವೈದ್ಯರು ಹಾಗೂ ಇತರ ಸಹಾಯಕ ಸಿಬ್ಬಂದಿ ಇದ್ದು ಇಲ್ಲದಂತ ಗಾಗಿದೆ ಎಂಬುದು ಈ ಭಾಗದ ರೈತರು ಆರೋಪ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.