ADVERTISEMENT

‘ಆತ್ಮಹತ್ಯೆಗೆ ಆತ್ಮಸ್ಥೈರ್ಯವೇ ಮದ್ದು’

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2013, 6:41 IST
Last Updated 14 ಸೆಪ್ಟೆಂಬರ್ 2013, 6:41 IST

ಕೊಪ್ಪಳ: ‘ಆತ್ಮಹತ್ಯೆಗೆ ಖಿನ್ನತೆ ಮುಖ್ಯ ಕಾರಣ. ಆತ್ಮಸ್ಥೈರ್ಯದಿಂದ ಮಾತ್ರ ಆತ್ಮಹತ್ಯೆ ತಡೆಯಬಹುದು’ ಎಂದು ಮನೋವೈದ್ಯ ಡಾ.ಕೃಷ್ಣಾ.ವಿ. ಓಂಕಾರ ಅಭಿಪ್ರಾಯಪಟ್ಟರು.

ಇಲ್ಲಿನ ಜಿಲ್ಲಾ ಆಸ್ಪತ್ರೆಯಲ್ಲಿ ಶುಕ್ರವಾರ ಏರ್ಪಡಿಸಲಾಗಿದ್ದ ‘ಆತ್ಮಹತ್ಯೆ ತಡೆಗಟ್ಟುವ ದಿನಾಚರಣೆ’ ಕಾರ್ಯಕ್ರಮ ದಲ್ಲಿ ಅವರು ಮಾತನಾಡಿದರು.

ಪ್ರತಿ ಜಿಲ್ಲಾ ಕೇಂದ್ರದಲ್ಲಿ ಮಾನಸಿಕ ಆರೋಗ್ಯ ವಿಭಾಗದಲ್ಲಿ ಆತ್ಮಸ್ಥೈರ್ಯ ಕಳೆದುಕೊಂಡವರು ಸಮಾಲೋಚನೆ ಮತ್ತು ಸೂಕ್ತ ಚಿಕಿತ್ಸೆಯಿಂದ ಆತ್ಮಹತ್ಯೆ ತಡೆಯಬಹುದು. ಖಿನ್ನತೆ ವಾಸಿಯಾಗುವ ಕಾಯಿಲೆ. ಚಿಕಿತ್ಸೆ ಯಿಂದಾಗಲಿ ಅಥವಾ ಮಾನಸಿಕವಾಗಿ ಧೈರ್ಯ ತುಂಬಿದಲ್ಲಿ ಈ ಕಾಯಿಲೆ ವಾಸಿ ಯಾಗುತ್ತದೆ. ಈ ಅರಿವು ಇಲ್ಲದ ಕಾರಣ ಆತ್ಮಹತ್ಯೆ ಹೆಚ್ಚಾಗುತ್ತಿದೆ ಎಂದರು.

ಜಿಲ್ಲಾಸ್ಪತ್ರೆ ಮನೋ ಸಾಮಾಜಿಕ ಕಾರ್ಯಕರ್ತ ಅನಲ್ ಕೆ.ಹಳ್ಳಿಯವರು ಮಾತನಾಡಿ, ಖಿನ್ನತೆ ಒಂದು ಜಾಗತಕ ಬಿಕ್ಕಟ್ಟು. ಮಿಲಿಯನ ಜನರನ್ನು ಈ ಸಮಸ್ಯೆ ಕಾಡುತ್ತಿದೆ. ಏಳರಲ್ಲಿ ಒಬ್ಬರಿಗೆ ಖಿನ್ನತೆ ಬರಬಹುದು. ಇದೊಂದು ದೀರ್ಘಕಾಲಿಕ ಹಾಗೂ ಮರುಕಳಿಸುವ ಕಾಯಿಲೆ ಎಂದರು.

ಖಿನ್ನತೆಯಿಂದ ಬಳಲುವ ವ್ಯಕ್ತಿ ಹೊರಗೆ ಬಾರದೆ ಸಾವು ಒಂದೇ ಪರಿಹಾರ ಎಂದು ಆತ್ಮಹತ್ಯೆಗೆ ಶರಣಾಗುತ್ತಾನೆ.
ಈ ಹಿನ್ನೆ್ನಲೆಯಲ್ಲಿ ಸಾರ್ವಜನಿಕರಲ್ಲಿ ಆತ್ಮಹತ್ಯೆ ತಡೆಗಟ್ಟುವ ಬಗ್ಗೆ ಅರಿವು ಮೂಡಿಸುವುದು ಅವಶ್ಯ ಎಂದರು.
ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಬಿ.ಎಸ್.ಲೋಕೇಶ ಅಧ್ಯಕ್ಷತೆ ವಹಿಸಿದ್ದರು.

ಜಿಲ್ಲಾ ಆಸ್ಪತ್ರೆಯ ವೈದ್ಯರು, ಸಾರ್ವಜನಿಕರು, ಸಿಬ್ಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.