ADVERTISEMENT

‘ಚನ್ನಮ್ಮ ಸ್ವಾತಂತ್ರ್ಯ ಸಂಗ್ರಾಮದ ಬೆಳ್ಳಿಚುಕ್ಕೆ’

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2014, 10:21 IST
Last Updated 10 ಫೆಬ್ರುವರಿ 2014, 10:21 IST
ಹನುಮಸಾಗರದ ವೀರರಾಣಿ ಕಿತ್ತೂರು ಚನ್ನಮ್ಮ ವೃತ್ತ ಉದ್ಘಾಟನೆ ಹಾಗೂ ಚನ್ನಮ್ಮ ಭಾವಚಿತ್ರದ ಅನಾವರಣ ಕಾರ್ಯಕ್ರಮಕ್ಕೆ ಭಾನುವಾರ ಕೂಡಲಸಂಗಮದ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರು ಚಾಲನೆ ನೀಡಿದರು. ಮೈಸೂರು ಮಠದ ವಿಜಯಮಹಾಂತ ಸ್ವಾಮೀಜಿ, ಷಾ ಅಬ್ದುಲ್ ಖಾದರ ಹುಸೇನಿ ಖಾದ್ರಿ, ಮಾಜಿ ಶಾಸಕ ಕೆ.ಶರಣಪ್ಪ, ಶರಣಪ್ಪ ಅಗಸಿಮುಂದಿನ, ಜಿ.ಪಂ ಸದಸ್ಯೆ ಲಕ್ಷ್ಮೀದೇವಿ ಹಳ್ಳೂರ, ಗ್ರಾ.ಪಂ ಅಧ್ಯಕ್ಷೆ ಲಲಿತಮ್ಮ ಹುಲ್ಲೂರ, ಬಸವಂತಪ್ಪ ಕಂಪ್ಲಿ, ಕರಿಸಿದ್ದಪ್ಪ ಕುಷ್ಟಗಿ ಇತರರು ಇದ್ದರು

ಹನುಮಸಾಗರ: ಬ್ರಿಟಿಷರಿಗೆ ಸಿಂಹಸ್ವಪ್ನ ವಾಗಿದ್ದ ಕಿತ್ತೂರಿನ ವೀರ ಮಹಿಳೆ ಚನ್ನಮ್ಮ ಸ್ವಾತಂತ್ರ್ಯ ಸಂಗ್ರಾಮದ ‘ಬೆಳ್ಳಿಚುಕ್ಕೆ’ ಎಂದು ಎಂದು ಕೂಡಲಸಂಗಮದ ಪಂಚಮ ಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಅವರು ಬಣ್ಣಿಸಿದರು.

ಭಾನುವಾರ ಇಲ್ಲಿನ ಹಳೆ ಬಸ್‌ ನಿಲ್ದಾಣದ ಬಳಿ ವೀರರಾಣಿ ಕಿತ್ತೂರು ಚನ್ನಮ್ಮ ವೃತ್ತ ಉದ್ಘಾಟಿಸಿ ಅವರು ಮಾತನಾಡಿದರು.
ಚನ್ನಮ್ಮ ಒಂದು ಜಾತಿಗೆ ಸೀಮಿತ ವಲ್ಲ. ಸ್ವಾತಂತ್ರ್ಯ ಹೋರಾಟಗಾ ರರಿಗೆ ಪ್ರೇರಣೆ ನೀಡಿದ ಈ ಮಹಿಳೆ ಪಂಚಮಸಾಲಿ ಸಮಾಜಕ್ಕೆ ಸೇರಿದ್ದಾಳೆ ಎಂಬುದು ನಮಗೆ ಅಭಿಮಾನದ ವಿಷಯವಾಗಿದೆ. ತವರು ಮನೆಯಿಂದ ತಂದ ಆಸ್ತಿಯಲ್ಲಿ ಮತ್ತೊಂದು ಧರ್ಮದ ಬೆಳೆವಣಿಗೆಗೆ ದಾನ ಮಾಡಿದ ಈಕೆ ಮಹಿಳೆಯರಿಗೆ ಆದರ್ಶ ಎಂದರು.

ಇಂಥ ವನಿತೆಯ ರಾಷ್ಟ್ರಾಭಿಮಾನ ಮುಂದಿನ ಪೀಳಿಗೆಗೆ ತಿಳಿಸಲು ಸರ್ಕಾರ ವಿವಿಧ ಕಾರ್ಯಕ್ರಮಗಳನ್ನು ಹಾಕಿಕೊ ಳ್ಳಬೇಕು. ಜತೆಗೆ ಚನ್ನಮ್ಮಳ ಹೆಸರಿನಲ್ಲಿ ವಿಶ್ವವಿದ್ಯಾಲಯ, ಶಾಲಾ ಕಾಲೇಜು ಆರಂಭಿಸಬೇಕು. ಬೆಳಗಾವಿ ವಿಮಾನ ನಿಲ್ದಾಣಕ್ಕೆ ಕಿತ್ತೂರ ಚನ್ನಮ್ಮ ಅವರ ಹೆಸರಿಡಬೇಕು ಎಂದರು.

ಮೈಸೂರುಮಠದ ವಿಜಯ ಮಹಾಂತಸ್ವಾಮೀಜಿ ಮಾತನಾಡಿ, ಸಮಾಜದಲ್ಲಿ ಜಾತಿಗಿಂತ ನೀತಿ ಬೆಳಗಬೇಕು. ನಾಡಿಗಾಗಿ ದೇಶಕ್ಕಾಗಿ ಜೀವನ ಮುಡಿಪಾಗಿಟ್ಟ ಚನ್ನಮ್ಮಳ ಪರಾಕ್ರಮ, ಶೌರ್ಯ ಎಲ್ಲರಿಗೂ ತಿಳಿಯಬೇಕು ಎಂದು ಹೇಳಿದರು.
ಮಾಜಿ ಶಾಸಕ ಕೆ. ಶರಣಪ್ಪ, ಬಸವರಾಜ ಹಳ್ಳೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್. ಎನ್. ಕಡಪಟ್ಟಿ ಉಪನ್ಯಾಸ ನೀಡಿದರು.

ಷಾ ಅಬ್ದುಲ್ ಖಾದರ ಹುಸೇನಿ ಖಾದ್ರಿ ಸಾನ್ನಿಧ್ಯ ವಹಿಸಿದ್ದರು. ಮುಖಂಡ ಶರಣಪ್ಪ ಅಗಸಿಮುಂದಿನ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ, ಜಿಲ್ಲಾ ಪಂಚಾಯಿತಿ ಸದಸ್ಯೆ ಲಕ್ಷ್ಮೀದೇವಿ ಹಳ್ಳೂರ,  ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಲಿತಮ್ಮ ಹುಲ್ಲೂರ, ಬಸವಂತಪ್ಪ ಕಂಪ್ಲಿ, ಕರಿಸಿದ್ದಪ್ಪ ಕುಷ್ಟಗಿ, ಡಾ.ಶರಣು ಹವಾಲ್ದಾರ, ವಿಠಲ ಶ್ರೇಷ್ಠಿ ನಾಗೂರ, ಸಂಕ್ರಪ್ಪ ಬಿಂಗಿ, ದುರುಗೇಶ ಮಡಿವಾಳರ, ಚಂದ್ರಶೇಖರ ಹಿರೇಮನಿ, ಬಸಣ್ಣ ಗೋನಾಳ, ಸಿದ್ದಣ್ಣ ಚಿನಿವಾಲರ, ಬಾಬುಮಿಯಾ ಚೌದರಿ, ನಾಗಪ್ಪ ಸೂಡಿ ಪಂಚಮಸಾಲಿ ಸಮಾಜದ ಯುವಕರು, ಗ್ರಾಮ ಪಂಚಾಯಿತಿ ಸದಸ್ಯರು ಇದ್ದರು.
 
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.