ADVERTISEMENT

‘ಧಾರ್ಮಿಕ ಕಾರ್ಯದಿಂದ ನೆಮ್ಮದಿ’

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2018, 9:39 IST
Last Updated 8 ಫೆಬ್ರುವರಿ 2018, 9:39 IST
ಯಲಬುರ್ಗಾದಲ್ಲಿ ಸಿದ್ದರಾಮೇಶ್ವರ ಸ್ವಾಮೀಜಿ ಅವರಿಗೆ ತುಲಾಭಾರ ಸೇವೆ ನಡೆಯಿತು
ಯಲಬುರ್ಗಾದಲ್ಲಿ ಸಿದ್ದರಾಮೇಶ್ವರ ಸ್ವಾಮೀಜಿ ಅವರಿಗೆ ತುಲಾಭಾರ ಸೇವೆ ನಡೆಯಿತು   

ಯಲಬುರ್ಗಾ: ಧಾರ್ಮಿಕ ಕಾರ್ಯಕ್ರಮ ದಲ್ಲಿ ಪಾಲ್ಗೊಳ್ಳುವುದರಿಂದ ಮಾನಸಿಕ ನೆಮ್ಮದಿ, ಶಾಂತಿ ಹಾಗೂ ಉತ್ತಮ ಸಂಸ್ಕಾರಗಳನ್ನು ಬೆಳೆಸಿಕೊಳ್ಳಲು ಸಾಧ್ಯ ಎಂದು ಎಂದು ತಾ.ಪಂ ಅಧ್ಯಕ್ಷೆ ಲಕ್ಷ್ಮೀ ಗೌಡರ ಹೇಳಿದರು.

ಯಲಬುರ್ಗಾ ಪಟ್ಟಣದ ಸಂಸ್ಥಾನ ಹಿರೇಮಠದ ಸಿದ್ದರಾಮೇಶ್ವರ ಸ್ವಾಮೀಜಿ ಅವರ 18ನೇ ವಾರ್ಷಿಕ ಪಟ್ಟಾಧಿಕಾರ ಮಹೋತ್ಸವ ಅಂಗವಾಗಿ ಈಚೆಗೆ ನಡೆದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಮಠದಲ್ಲಿ ನಡೆಯುವ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ಇಲ್ಲಿನ ಜನರಲ್ಲಿ ಹೆಚ್ಚಿನ ಅಧ್ಯಾತ್ಮ ಹಾಗೂ ಧಾರ್ಮಿಕ ಜಾಗೃತಿ ಮೂಡಿದೆ ಎಂದು ನುಡಿದರು.

ADVERTISEMENT

ಪ್ರಸ್ತುತ ಸನ್ನಿವೇಶದಲ್ಲಿ ದೇಶಿ ಸಂಸ್ಕೃತಿ ನಾಶವಾಗುತ್ತಿದೆ. ಟಿವಿ, ಸಿನಿಮಾ ವೀಕ್ಷಣೆ ಬದಲಿಗೆ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರೆ ನೆಮ್ಮದಿ ಸಿಗುತ್ತದೆ ಎಂದು ಹೇಳಿದರು.

ಮಾನಿಹಳ್ಳಿಯ ಪುರವರ್ಗಮಠದ ಮಳೆಯೋಗಿಶ್ವರ ಸ್ವಾಮೀಜಿ ಆಶೀರ್ವಚನ ನೀಡಿ, ಜಾತಿ ಮತ ಎನ್ನದೇ ಎಲ್ಲರೂ ಕೂಡಿ ಐಕ್ಯತೆಯಿಂದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಶ್ರೀಮಠವನ್ನು ಶ್ರೀಮಂತಗೊಳಿಸಿದ್ದು ಉತ್ತಮ ಬೆಳವಣಿಗೆ ಎಂದು ಅಭಿಪ್ರಾಯಪಟ್ಟರು.

ಹರಕಂಗಿ, ತಾಳಕೇರಿ, ಮಾಟಲದಿನ್ನಿ, ತಿಪ್ಪಳ್ಳಿ, ಮೆಟಗಡ್ಲಿ, ಉಚ್ಚಲಕುಂಟಾ, ಮರಕಟ್ಟು, ಬಳೂಟಗಿ, ತಾವರಗೇರಿ, ಹಳ್ಳಿಗುಡಿ ಗ್ರಾಮದ ಸದ್ಬಕ್ತರಿಂದ ಸಿದ್ದರಾಮೇಶ್ವರ ಸ್ವಾಮೀಜಿಗೆ ತುಲಭಾರ ಸೇವೆ ನಡೆಯಿತು. ಐರಸಂಗದ ರೇವಣಸಿದ್ದ ಶಾಸ್ತ್ರಿ, ಮಲ್ಲಯ್ಯ ಮಾದಿನೂರುಮಠ, ಈಶ್ವರಯ್ಯ ಹಲಸಿನಮಠ ಅವರಿಂದ ಸಂಗೀತ ಕಾರ್ಯಕ್ರಮ ಜರುಗಿತು.

ಸಂಸ್ಥಾನ ಹಿರೇಮಠದ ಸಿದ್ದರಾಮೇಶ್ವರ ಸ್ವಾಮೀಜಿ ಆಶೀರ್ವಚನ ನೀಡಿದರು. ಹಿರಿಯ ಸಾಹಿತಿ ಸಿದ್ದರಾಮಸ್ವಾಮಿ ಹಿರೇಮಠ, ಗುತ್ತಿಗೆದಾರ ಬಸಯ್ಯ ಮ್ಯಾಗಳಮಠ, ಅಯ್ಯನಗೌಡ ಶೀಲವಂತರ, ಡಾ. ಶರಣಪ್ಪ ಕೊಪ್ಪಳ, ವರ್ತಕ ಅಮರಪ್ಪ ಕಲಬುರ್ಗಿ, ಪಪಂ ಸದಸ್ಯ ಸಿದ್ರಾಮೇಶ ಬೇಲೇರಿ, ಮಲ್ಲಿಕಾರ್ಜುನ ಟೆಂಗಿನಕಾಯಿ, ಸಂಗಪ್ಪ ರಾಮತಾಳ, ವೀರಭದ್ರಯ್ಯ ಹಿತ್ತಲಮನಿ, ಎಸ್.ಡಿ.ಅಪ್ಪಾಜಿ, ಬಸವರಾಜ ಜಾರಗಡ್ಡಿ, ವಿರುಪಾಕ್ಷಯ್ಯ ಗಂಧದ, ಮಲ್ಲನಗೌಡ ಹೊಸಮನಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.