ಬಾಲ್ಯವಿವಾಹ (ಪ್ರಾತಿನಿಧಿಕ ಚಿತ್ರ)
ಕನಕಗಿರಿ : ತಾಲ್ಲೂಕಿನಲ್ಲಿ ಒಂದೇ ವಾರದ ಅಂತರದಲ್ಲಿ ಮತ್ತೊಂದು ಬಾಲ್ಯವಿವಾಹ ನಡೆದಿದೆ. ವಿವಾಹವಾದ ಯುವಕ, ಆತನ ತಂದೆ ಹಾಗೂ ತಾಯಿ ವಿರುದ್ಧ ಕನಕಗಿರಿ ಪೊಲೀಸ್ ಠಾಣೆಯಲ್ಲಿ ಭಾನುವಾರ ರಾತ್ರಿ ಎಫ್‌ಐಆರ್ ದಾಖಲಾಗಿದೆ.
16 ವರ್ಷ ಒಂಬತ್ತು ತಿಂಗಳು ವಯಸ್ಸಿನ ಬಾಲಕಿಯನ್ನು ಹನುಮೇಶ್ ಗದ್ದಿ ಎಂಬಾತ ಏ.26ರಂದು ಮದುವೆಯಾಗಿದ್ದನು. ಈ ಕುರಿತು ಶಿಶು ಅಭಿವೃದ್ಧಿ ಯೋಜನಾಧಿಕಾರಿಗೆ ದೂರು ಬಂದಿತ್ತು. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಬಾಲಕಿಯ ವಯಸ್ಸಿನ ದಾಖಲೆ ಪರಿಶೀಲಿಸಿದಾಗ ಬಾಲ್ಯವಿವಾಹ ನಡೆದಿದ್ದು ಖಚಿತವಾಗಿದೆ.
ಎರಡನೇ ಪ್ರಕರಣ: ಏ.25ರಂದು ಇದೇ ತಾಲ್ಲೂಕಿನಲ್ಲಿ ಗ್ರಾಮ ಪಂಚಾಯಿತಿ ಸದಸ್ಯೆಯೊಬ್ಬರು ತಮ್ಮ ಪುತ್ರಿಗೆ ಬಾಲ್ಯವಿವಾಹ ಮಾಡಿಸಿದ್ದರು. ಈ ವಿವಾಹ ಕಾರ್ಯಕ್ರಮದಲ್ಲಿ ಕೆಲವು ಶಾಸಕರೂ ಭಾಗಿಯಾಗಿದ್ದರು.
‘ಅಕ್ಷಯ ತೃತೀಯ ದಿನದಂದು ಸಾಮೂಹಿಕ ವಿವಾಹಗಳು ಹೆಚ್ಚಾಗಿ ಆಯೋಜನೆಯಾಗುತ್ತಿದ್ದು, ಈ ಸಂದರ್ಭದಲ್ಲಿ ಬಾಲ್ಯವಿವಾಹ ನಡೆಯುವ ಸಾಧ್ಯತೆ ಇರುತ್ತದೆ. ಹೀಗಾಗಿ ಅಧಿಕಾರಿಗಳು ಮದುವೆಗಳ ಮೇಲೆ ನಿಗಾ ಇಡಬೇಕು’ ಎಂದು ಜಿಲ್ಲಾಧಿಕಾರಿ ನಲಿನ್ ಅತುಲ್ ಸೂಚಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.