ಕನಕಗಿರಿ: ಕೃಷಿ ಉತ್ಪನ್ನ ಮಾರುಕಟ್ಟೆಯು ರೈತರು ಹಾಗೂ ವರ್ತಕರಿಗಾಗಿ ಇದೆ. ವ್ಯಾಪಾರ ವಹಿವಾಟುಗಳಿಗೆ ಸಂಬಂಧಿಸಿದಂತೆ ವರ್ತಕರು, ರೈತರ ಸಮಸ್ಯೆಗಳಿಗೆ ತಾವು ಸ್ಪಂದಿಸುವುದಾಗಿ ಎಪಿಎಂಸಿ ಪ್ರಭಾರ ಕಾರ್ಯದರ್ಶಿ ಸಾವಿತ್ರಿ ಸುರೇಶ ಪಾಟೀಲ ತಿಳಿಸಿದರು.
ಇಲ್ಲಿನ ಎಪಿಎಂಸಿಯ ಉಪ ಮಾರುಕಟ್ಟೆಯ ಪ್ರಭಾರ ಕಾರ್ಯದರ್ಶಿಯಾಗಿ ಬುಧವಾರ ಅಧಿಕಾರ ವಹಿಸಿಕೊಂಡು ಅವರು ಮಾತನಾಡಿದರು.
ದಲ್ಲಾಳಿ ವರ್ತಕರು, ರೈತರ ಸಹಕಾರದಿಂದ ಎಪಿಎಂಸಿ ಅಭಿವೃದ್ಧಿ ಸಾಧ್ಯವಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರ ಸಹಕಾರ ಮುಖ್ಯವಾಗಿದೆ ಎಂದು ಹೇಳಿದರು.
ದಲ್ಲಾಳಿ ವರ್ತಕ ಶರಣಬಸಪ್ಪ ಭತ್ತದ ಮಾತನಾಡಿದರು. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ವೀರೇಶ ಸಮಗಂಡಿ, ದಲ್ಲಾಳಿ ವರ್ತಕರಾದ ಅನಂತಪ್ಪ ದಾಯಪುಲ್ಲೆ, ವಾಗೀಶ ಹಿರೇಮಠ, ಶರಣಬಸಪ್ಪ ಸಜ್ಜನ್, ಶರಣೆಗೌಡ ಪಾಟೀಲ, ರವಿ ಪಾಟೀಲ, ಶ್ರೀಕಾಂತ ದಾಯಪುಲ್ಲೆ, ಪ್ರಮುಖ ನೀಲಕಂಠ ಗೌಡ ಪಾಟೀಲ, ಟಿ.ಜೆ. ರಾಮಚಂದ್ರ ಹಾಗೂ ವರ್ತಕರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.