ADVERTISEMENT

ಅಕ್ಕಿ ಸುಲಿಗೆ ಮಾಡಿದ್ದ ಆರೋಪಿಗಳ ಬಂಧನ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2023, 8:50 IST
Last Updated 18 ಮಾರ್ಚ್ 2023, 8:50 IST
ಕೊಪ್ಪಳ ತಾಲ್ಲೂಕಿನ ಮುನಿರಾಬಾದ್‌ ಪೊಲೀಸರು ವಶಪಡಿಸಿಕೊಂಡ ಸಾಮಗ್ರಿಗಳು
ಕೊಪ್ಪಳ ತಾಲ್ಲೂಕಿನ ಮುನಿರಾಬಾದ್‌ ಪೊಲೀಸರು ವಶಪಡಿಸಿಕೊಂಡ ಸಾಮಗ್ರಿಗಳು   

ಕೊಪ್ಪಳ: ತಾಲ್ಲೂಕಿನ ಬೂದಗುಂಪಾ ಕ್ರಾಸ್‌ ಹತ್ತಿರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಾ. 5ರಂದು ಬೆಳಗಿನ ಜಾವ 154.50 ಕ್ವಿಂಟಲ್‌ ಅಕ್ಕಿ ಮೂಟೆಗಳನ್ನು ಸುಲಿಗೆ ಮಾಡಿಕೊಂಡು ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುನಿರಾಬಾದ್‌ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಕಸ್ತೂರಿ ಕರ್ನಾಟಕ ಜನಪರ ಸೇನೆಯ ರಾಜ್ಯ ಘಟಕದ ಅಧ್ಯಕ್ಷ ಕೂಕನಪಳ್ಳಿ ಗ್ರಾಮದ ಪ್ರಶಾಂತ ಮಣ್ಣೂರ (24), ಫೈನಾನ್ಸ್‌ ಉದ್ಯಮದಲ್ಲಿ ತೊಡಗಿದ್ದ ಕೊಪ್ಪಳದ ಅಂಬೇಡ್ಕರ್‌ ನಗರದ ಗೌತಮ ಬಳಾಗನೂರ (28) ಮತ್ತು ತಾಲ್ಲೂಕಿನ ನೀರಲಗಿ ಗ್ರಾಮದ ವಿದ್ಯಾರ್ಥಿ ಗವಿ ಹೂಗಾರ (23) ಬಂಧಿತರು.

ಆರೋಪಿಗಳಿಂದ ₹1.5 ಲಕ್ಷ ನಗದು, ₹2 ಲಕ್ಷ ಮೌಲ್ಯದ 80 ಕ್ವಿಂಟಲ್‌ ತೂಕದ 100 ಅಕ್ಕಿ ಮೂಟೆ ಚೀಲಗಳು ಹಾಗೂ ಕೃತ್ಯಕ್ಕೆ ಬಳಸಿದ ಟೊಯೊಟೊ ಇನೊವಾ ಕಾರು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.