ಗಂಗಾವತಿ: ಇಲ್ಲಿನ ನಗರೇಶ್ವರ ದೇವಸ್ಥಾನ ಕಲ್ಯಾಣ ಮಂಟಪದಲ್ಲಿ ತಾಲ್ಲೂಕು ಆರ್ಯವೈಶ್ಯ ಸಮಾಜದ ಕಾರ್ಯಕಾರಿ ಮಂಡಳಿಯ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ರೂಪರಾಣಿ ಎಲ್. ರಾಯಚೂರು, ಉಪಾಧ್ಯಕ್ಷರಾಗಿ ಸುರೇಶ ಶ್ರೇಷ್ಠಿ, ಕಾರ್ಯದರ್ಶಿ ಈಶ್ವರ ಶ್ರೇಷ್ಠಿ, ಸಹಕಾರ್ಯದರ್ಶಿ ಮಾರುತಿ ಪ್ರಸಾದ ಶ್ರೇಷ್ಠಿ, ಪಾನಘಂಟಿ ಗೋಪಾಲ ಕೃಷ್ಣ ಶ್ರೇಷ್ಠಿ, ನಿರ್ದೇಶಕರಾಗಿ ಕಾಕುಮನಿ ಶ್ರೀಧರ ಶ್ರೇಷ್ಠಿ, ಮಿಠಾಯಿಗಾರ ವೀರಭದ್ರಪ್ಪ ಶ್ರೇಷ್ಠಿ, ಭಂಡಾರಿ ವಾಸುದೇವ ಶ್ರೇಷ್ಠಿ ಸೇರಿ ಇತರೆ ನಿರ್ದೇಶಕರು ಆಯ್ಕೆಯಾದರು. ಗೌರವ ಸಲಹೆಗಾರರಾಗಿ ರಾಮಚಂದ್ರ ಶ್ರೇಷ್ಠಿ, ಪಿಂಡಿಕೂರ ಹನುಮಂತಯ್ಯ ಶ್ರೇಷ್ಠಿ, ಸಾಲಗುಂದಿ ಗೋಪಾಲ ಶ್ರೇಷ್ಠಿ ಅವರನ್ನು ಆಯ್ಕೆ ಮಾಡಲಾಯಿತು.
ವಾಸವಿ ಯುವಕ ಸಂಘದ ಅಧ್ಯಕ್ಷರಾಗಿ ಪಾನಘಂಟಿ ಪ್ರಸಾದ ಶ್ರೇಷ್ಠಿ, ಕಾರ್ಯದರ್ಶಿಯಾಗಿ ಇಲ್ಲೂರು ಮಂಜುನಾಥ ಶ್ರೇಷ್ಠಿ, ಅರಿಕೇರಿ ಗಂಗಾಧರ ಶ್ರೇಷ್ಠಿ, ಸಿ.ಎಚ್. ಶ್ರೀನಿವಾಸ ಶ್ರೇಷ್ಠಿ, ಇಂದರಿಗಿ ಶ್ರೀನಿವಾಸ ಶ್ರೇಷ್ಠಿ, ಇಲ್ಲೂರು ವೀರೇಶ ಶ್ರೇಷ್ಠಿ, ಇಲ್ಲೂರು ಸತ್ಯನಾರಾಯಣ ಶ್ರೇಷ್ಠಿ ಅವರು ಆಯ್ಕೆಯಾದರು.
ಆರ್ಯವೈಶ್ಯ ಸಮಾಜದ ಹಿರಿಯರು, ಮುಖಂಡರು, ಮಹಿಳೆಯರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.