ಕಾರಟಗಿ: ತಾಲೂಕಿನ ಮೈಲಾಪುರ ಗ್ರಾಪಂ ವ್ಯಾಪ್ತಿಯ ನರೇಗಾ ಕೂಲಿಕಾರರಿಗೆ ದುಡಿಯೋಣ ಬಾ ಅಭಿಯಾನದಡಿ ನಡೆದಿರುವ ಜೀರಾಳ ಕೆರೆ ಹೂಳೆತ್ತುವ ಕಾಮಗಾರಿ ಸ್ಥಳಕ್ಕೆ ತಾ.ಪಂ ಇಒ ಲಕ್ಷ್ಮೀದೇವಿ ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿದರು.
ತಾಲೂಕಿನ ಮೈಲಾಪುರ ಗ್ರಾಪಂ ವ್ಯಾಪ್ತಿಯ ನರೇಗಾ ಕೂಲಿಕಾರರಿಗೆ ದುಡಿಯೋಣ ಬಾ ಅಭಿಯಾನದಡಿ ನಡೆದಿರುವ ಜೀರಾಳ ಕೆರೆ ಹೂಳೆತ್ತುವ ಕಾಮಗಾರಿ ಸ್ಥಳಕ್ಕೆ ತಾ.ಪಂ ಇಒ ಲಕ್ಷ್ಮೀದೇವಿ ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿದರು.
ಬಳಿಕ ಮಾತನಾಡಿದ ಅವರು, ನರೇಗಾ ಕೂಲಿಕಾರರ ಕೆಲಸದ ಸ್ಥಳದಲ್ಲಿ ಹಾಜರಾತಿ ದಿನಕ್ಕೆರಡು ಬಾರಿ ಕಡ್ಡಾಯವಾಗಿದ್ದು, ಪ್ರತಿಯೊಬ್ಬರೂ ಪಾರದರ್ಶಕವಾಗಿ ಹಾಜರಾತಿ ಹಾಕುವ ಮೂಲಕ ಗ್ರಾ.ಪಂ ಸಿಬ್ಬಂದಿಳಿಗೆ ಸಹಕರಿಸಬೇಕು. ಬೇಸಿಗೆ ಅವಧಿಯಲ್ಲಿ ಶೇ 30ರಷ್ಟು ಕೆಲಸದ ರಿಯಾಯಿತಿ ಹಾಗೂ ಅಳತೆಗೆ ಅನುಗುಣವಾಗಿ ಪ್ರತಿಯೊಬ್ಬರಿಗೂ ಕೂಲಿ ಜಮಾ ಆಗಲಿದೆ. ಎಲ್ಲರೂ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಸಹಾಯಕ ನಿರ್ದೇಶಕಿ ವೈ. ವನಜಾ ಮಾತನಾಡಿದರು.
ಕುಡಿಯುವ ನೀರು, ನೆರಳಿನ ವ್ಯವಸ್ಥೆ ಬಗ್ಗೆ ಪರಿಶೀಲನೆ ಮಾಡಲಾಯಿತು.
ತಾ.ಪಂ ತಾಂತ್ರಿಕ ಸಂಯೋಜಕ ವಿಶ್ವನಾಥ ಜಿನ್ನೂರು, ಐಇಸಿ ಸಂಯೋಜಕ ಸೋಮನಾಥ ನಾಯಕ, ಗ್ರಾಪಂ ಗ್ರಾಮ ಕಾಯಕ ಮಿತ್ರರು, ಸಿಬ್ಬಂದಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.