ADVERTISEMENT

ಶ್ರೀ ಸಿದ್ದಗಂಗಾ ಮಹಿಮೆ ಉತ್ತಮ ಕೃತಿ

ಲೇಖಕಿ ಕೆ.ಶಾಂತ ಬಸವರಾಜ ಅವರ ಪುಸ್ತಕ ಬಿಡುಗಡೆ: ಕೋಲ್ಕಾರ ಅಭಿಮತ

​ಪ್ರಜಾವಾಣಿ ವಾರ್ತೆ
Published 21 ಜುಲೈ 2021, 13:55 IST
Last Updated 21 ಜುಲೈ 2021, 13:55 IST
ಗಂಗಾವತಿ‌ ನಗರದ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ಶ್ರೀ ಸಿದ್ದಗಂಗಾ ಮಹಿಮೆ ಪುಸ್ತಕ ಪರಿಚಯ ಸಮಾರಂಭ ನಡೆಯಿತು
ಗಂಗಾವತಿ‌ ನಗರದ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ಶ್ರೀ ಸಿದ್ದಗಂಗಾ ಮಹಿಮೆ ಪುಸ್ತಕ ಪರಿಚಯ ಸಮಾರಂಭ ನಡೆಯಿತು   

ಗಂಗಾವತಿ: ‘ಭಾವನಾತ್ಮಕ ದೃಷ್ಟಿಯಿಂದ ಶ್ರೀ ಸಿದ್ದಗಂಗಾ ಮಹಿಮೆ ಉತ್ತಮ ಕೃತಿ’ ಎಂದು ಇಲ್ಲಿನ ಕೆ.ಎಸ್.ಸಿ.ಮಹಿಳಾ ಕಾಲೇಜು ಪ್ರಾಚಾರ್ಯ ಡಾ.ಶರಣಬಸಪ್ಪ ಕೋಲ್ಕಾರ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ಶರಣ ಸಾಹಿತ್ಯ ಪರಿಷತ್ತು ಮತ್ತು ಕಾವ್ಯಲೋಕ ಸಂಘಟನೆ ವತಿಯಿಂದ ಆಯೋಜಿಸಲಾಗಿದ್ದ ‘ಶ್ರೀ ಸಿದ್ದಗಂಗಾ ಮಹಿಮೆ’ ಪುಸ್ತಕ ಪರಿಚಯ ಹಾಗೂ ಕಾವ್ಯಲೋಕದ 98ನೇ ಕವಿಗೋಷ್ಠಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಲೇಖಕಿ ಶಾಂತಾ ಅವರು ಭಕ್ತಿರಸದಲ್ಲಿ ಶಿವಕುಮಾರ ಶ್ರೀಗಳ ಬಗ್ಗೆ ಅಭಿವ್ಯಕ್ತಿಗೊಳಿಸಿದ್ದಾರೆ. ಭಾವನೆ ಪರಿಶುದ್ಧವಾಗಿದ್ದರೆ ಪರಿಸರ, ಪ್ರಕೃತಿ ತಾನೇ ನಿರ್ಮಾಣಗೊಂಡು ಪುಸ್ತಕ ರಚನೆಗೆ ಪ್ರತ್ಯಕ್ಷ ಸಹಕಾರ ನೀಡುತ್ತದೆ ಎಂದರು.

ADVERTISEMENT

ಪೌರಾಯುಕ್ತ ಅರವಿಂದ ಬಿ.ಜಮಖಂಡಿ ಮಾತನಾಡಿ,‘ಅಂಬೇಡ್ಕರ್, ಬಸವಣ್ಣ, ವಿವೇಕಾನಂದ, ಗೌತಮ ಬುದ್ಧ ಅವರ ತತ್ವಗಳು ಎಲ್ಲರಿಗೂ ಸ್ಪೂರ್ತಿದಾಯಕ. ಅವರ ಜೀವನ, ಆದರ್ಶ ತತ್ವಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳುವುದರ ಜತೆಗೆ ಶ್ರೀಗಳು ನಡೆದ ಮಾರ್ಗದಲ್ಲಿ ನಾವು ಅಳಿಲು ಸೇವೆ ಮಾಡೋಣ’ ಎಂದರು.

‘ಶ್ರೀ ಸಿದ್ದಗಂಗಾ ಮಹಿಮೆ’ ಪುಸ್ತಕ ಕುರಿತು ಸಾಹಿತಿ ಶರಣಪ್ಪ ತಳ್ಳಿ ಮಾತನಾಡಿದರು. ಲೇಖಕಿ ಕೆ.ಶಾಂತ ಬಸವರಾಜ ಅವರು ಬರೆದಶ್ರೀ ಸಿದ್ದಗಂಗಾ ಮಹಿಮೆ’ ಪುಸ್ತಕ ಬಿಡುಗಡೆ ಮಾಡಲಾಯಿತು.

ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಡಾ.ಸುಲೋಚನಾ ಚಿನಿವಾಲರ, ಶರಣ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ಅಧ್ಯಕ್ಷ ಜಿ.ಎಸ್.ಗೋನಾಳ, ಲೇಖಕಿ ಕೆ.ಶಾಂತಾ ಬಸವರಾಜ, ಲಯನ್ಸ್ ಕ್ಲಬ್ ಅಧ್ಯಕ್ಷ ಡಿ.ಎಂ.ಅಭಿಷೇಕ ಮಾತನಾಡಿದರು.

ಈ ಸಂದರ್ಭದಲ್ಲಿ ಕೆ.ಶಾಂತಾ ಬಸವರಾಜ ಅವರನ್ನು ಕಾವ್ಯಲೋಕ, ಶರಣ ಸಾಹಿತ್ಯ ಪರಿಷತ್ತು, ಸರ್ವಾಗೀಂಣ ಅಭಿವೃದ್ಧಿ ವೇದಿಕೆ, ರುದ್ರಮ್ಮ ಹಾಸಿನಾಳ, ರಮೇಶ ಗಬ್ಬೂರು ಅವರು ಸನ್ಮಾನಿಸಿದರು.


ಕವಿಗೋಷ್ಠಿಯಲ್ಲಿ ನರ್ಮದಾಬಾಯಿ ಕುಲಕರ್ಣಿ, ರಾಧಾ ಉಮೇಶ, ಸುಧಾತಾಯಿ ಬಡಿಗೇರ, ಶ್ರೀದೇವಿ ಕೃಷ್ಣಪ್ಪ, ಯು.ಆರ್.ಶಿವರುದ್ರಪ್ಪ, ಚಿದಾನಂದ ಕೀರ್ತಿ, ಮಲ್ಲೇಶಪ್ಪ ಅಂಗಡಿ, ಗೋಪಿನಾಥ ದಿನ್ನಿ, ಮಹಾದೇವ ಮೋಟಿ ಮತ್ತಿತರರು ಕವನ ವಾಚಿಸಿದರು.

ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ.ಶಿವಕುಮಾರ ಮಾಲಿ ಪಾಟೀಲ್, ಕಾವ್ಯಲೋಕ ಸಂಘಟನೆ ಅಧ್ಯಕ್ಷ ಎಂ.ಪರಶುರಾಮ ಪ್ರಿಯ, ಹಿರಿಯ ಸಾಹಿತಿಗಳಾದ ನಿಜಲಿಂಗಪ್ಪ ಮೆಣಸಗಿ, ಲಿಂಗಾರೆಡ್ಡಿ ಆಲೂರು, ಮಂಜುನಾಥ ಗುಡ್ಲಾನೂರು, ಜಿ.ಶಿವಲಿಂಗಪ್ಪ, ಬ್ಯಾಂಕ್ ಬಸವರಾಜ ಇದ್ದರು.

ಮೈಲಾರಪ್ಪ ಬೂದಿಹಾಳ, ಕವಿಯತ್ರಿ ಸಿ.ಮಹಾಲಕ್ಷ್ಮಿ, ಕವಿ ಸುರೇಶ ಜಿ.ಎಸ್. ನಿರ್ವಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.