ADVERTISEMENT

ಕೊಪ್ಪಳ: ಶಾಲೆಗೆ ಬಂದ ಮಕ್ಕಳಿಗೆ ಹೂಮಳೆಗೆರೆದು ಸ್ವಾಗತ

​ಪ್ರಜಾವಾಣಿ ವಾರ್ತೆ
Published 9 ಜೂನ್ 2025, 12:49 IST
Last Updated 9 ಜೂನ್ 2025, 12:49 IST
ಕೊಪ್ಪಳ ತಾಲ್ಲೂಕಿನ ಹನುಮನಹಳ್ಳಿಯಲ್ಲಿ ವಿಶೇಷ ದಾಖಲಾತಿ ಆಂದೋಲನದ ಮೂಲಕ ಬಂದ ಮಕ್ಕಳಿಗೆ ಸಂಭ್ರಮದಿಂದ ಸ್ವಾಗತ ಕೋರಲಾಯಿತು
ಕೊಪ್ಪಳ ತಾಲ್ಲೂಕಿನ ಹನುಮನಹಳ್ಳಿಯಲ್ಲಿ ವಿಶೇಷ ದಾಖಲಾತಿ ಆಂದೋಲನದ ಮೂಲಕ ಬಂದ ಮಕ್ಕಳಿಗೆ ಸಂಭ್ರಮದಿಂದ ಸ್ವಾಗತ ಕೋರಲಾಯಿತು   

ಕೊಪ್ಪಳ: ತಾಲ್ಲೂಕಿನ ಹನುಮನಹಳ್ಳಿ ಗ್ರಾಮದಲ್ಲಿ ಟಾಟಾ ಕಲಿಕಾ ಟ್ರಸ್ಟ್‌ ಸಹಯೋಗದಲ್ಲಿ ಸರ್ಕಾರಿ ಶಾಲೆಗೆ ಮಕ್ಕಳನ್ನು ಸೆಳೆಯಲು ವಿಶೇಷ ಆಂದೋಲನ ನಡೆಸಲಾಯಿತು. ಸೋಮವಾರ ಶಾಲೆಗೆ ಬಂದ ಮಕ್ಕಳನ್ನು ಸಂಭ್ರಮದಿಂದ ಸ್ವಾಗತಿಸಲಾಯಿತು.

ಹೆಣ್ಣು  ಮಕ್ಕಳು ಕುಂಭ ಹೊತ್ತು ಸಾಗಿದರೆ, ಬಾಲಕರು ಕೋಲಾಟ ನೃತ್ಯ ಮಾಡಿ ಗಮನ ಸೆಳೆದರು. ಕಿತ್ತೂರು ರಾಣಿ ಚನ್ನಮ್ಮ, ಒನಕೆ ಓಬವ್ವ ಛದ್ಮವೇಷಧಾರಿಗಳಾಗಿದ್ದರು.

ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಬಡಕಪ್ಪ ರಾಮನಳ್ಳಿ ಮಾತನಾಡಿ, ‘ಒಂದನೇ ತರಗತಿಗೆ ಪ್ರವೇಶ ಪಡೆಯಲು ಐದು ವರ್ಷ ಐದು ತಿಂಗಳು ಪೂರ್ಣಗೊಂಡಿರುವ ಮಕ್ಕಳನ್ನು ಕಡ್ಡಾಯವಾಗಿ ಶಾಲೆಗೆ ಸೇರಿಸಬೇಕು. ಮಗು ನಿಯಮಿತವಾಗಿ ಶಾಲೆಗೆ ಬರುವಂತೆ ನೋಡಿಕೊಳ್ಳಬೇಕು. ಈ ಎಲ್ಲ ಜವಾಬ್ದಾರಿ ಮೇಲಿದೆ’ ಎಂದರು.

ADVERTISEMENT

ಟಾಟಾ ಕಲಿಕಾ ಟ್ರಸ್ಟ್‌ ಸಂಯೋಜಕ ಕಲ್ಲೇಶ ತಳವಾರ ಮಾತನಾಡಿ ‘ಅರ್ಹ ವಯಸ್ಸಿನ ಮಕ್ಕಳು ಶಾಲೆಗೆ ದಾಖಲಾಗಬೇಕು. ಮಕ್ಕಳಿಗೆ ಗುಣಾತ್ಮಕ ಶಿಕ್ಷಣ  ಸಿಗಬೇಕು. ಸಮುದಾಯ, ಶಿಕ್ಷಕರು ಮಕ್ಕಳ ಶ್ರೇಯೋಭಿವೃದ್ಧಿಗೆ ಶ್ರಮಿಸಬೇಕು’ ಎಂದು ಸಲಹೆ ನೀಡಿದರು.

ವೇದಿಕೆ ಮೇಲೆ ಗ್ರಾಮ ಪಂಚಾಯಿತಿ ಸದಸ್ಯರಾದ ಶಿವಪ್ಪ ಮುರುಡಿ, ಸಣ್ಣ ಯಮನೂರಪ್ಪ ಬಗನಾಳ, ಊರಿನ ಹಿರಿಯರಾದ ತಾಯಪ್ಪ, ಯಡಿಯಪ್ಪ ಭೋವಿ, ಬಡಕಪ್ಪ,, ರಾಘು ಬಡಿಗೇರ, ಹನುಮಪ್ಪ ಮುರುಡಿ, ಬಸವರಾಜ ಮುಂಡರಗಿ, ಸತ್ಯಪ್ಪ, ಯಮನೂರಪ್ಪ ಕುಟಗನಹಳ್ಳಿ, ಮಲ್ಲಪ್ಪ ಹೊಸಳ್ಳಿ, ಇರಕಲ್ಲಗಡ ಸಿಆರ್‌ಪಿ ಸಂತೋಷ್ , ಶಿಕ್ಷಕರಾದ ಕೊಟ್ರೇಶ್, ಮಲ್ಲಪ್ಪ, ಕಿರಣ, ಮಂಜಪ್ಪ, ಯಮನೂರಪ್ಪ, ಮುರಗೇಶ್, ಪ್ರಾಣೇಶ್ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.