ಕೊಪ್ಪಳ: ಇಲ್ಲಿನ ರೈಲು ನಿಲ್ದಾಣಕ್ಕೆ ಗಂಡುಗಲಿ ಕುಮಾರರಾಮನ ಹೆಸರು ನಾಮಕರಣ ಮಾಡಬೇಕು ಎಂದು ಪ್ರಗತಿಪರ ಸಂಘಟನೆಗಳು ಒಕ್ಕೂಟದ ಮುಖಂಡರು ಆಗ್ರಹಿಸಿದ್ದಾರೆ.
ಒಕ್ಕೂಟದ ಮುಖಂಡ, ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ‘ಕೊಪ್ಪಳದಲ್ಲಿ ಅಶೋಕನ ಎರಡು ಶಾಸನಗಳಿದ್ದು ಒಂದು ಗವಿಮಠ ಇನ್ನೊಂದು ಪಾಲ್ಕಿಗುಂಡು ಶಾಸನ ಎಂದು ಹೆಸರಾಗಿದೆ. ಅಶೋಕನ ಹೆಸರನ್ನು ಜಗತ್ತಿನ ಅನೇಕ ಕಡೆ ಇರಿಸಲಾಗಿದೆ. ಆದ್ದರಿಂದ ಈಗ ಕುಮಾರರಾಮನ ಹೆಸರು ರೈಲ್ವೆ ನಿಲ್ದಾಣಕ್ಕೆ ನಾಮಕರಣ ಮಾಡಬೇಕು’ ಎಂದು ಹೇಳಿದರು.
ಈ ಕುರಿತು ಚರ್ಚಿಸಲು ಇತ್ತೀಚೆಗೆ ಸಭೆ ನಡೆಸಲಾಗಿದೆ. ಗಂಡುಗಲಿ ಕುಮಾರರಾಮ ಮತ್ತು ದೇವನಾಂಪ್ರಿಯ ಸಾಮ್ರಾಟ ಅಶೋಕ ಈ ಹೆಸರುಗಳನ್ನು ನಮ್ಮ ಒಕ್ಕೂಟದ ವತಿಯಿಂದ ಸೂಚಿಸಲಾಗಿದೆ ಎಂದು ತಿಳಿಸಿದರು. ಇಲ್ಲಿನ ರೈಲು ನಿಲ್ದಾಣದ ಅಭಿವೃದ್ಧಿಗೂ ನಮ್ಮ ಸಂಘಟನೆಯ ವತಿಯಿಂದ ಹೋರಾಟ ಮಾಡಲಾಗುವುದು ಎಂದರು.
ಹಲವು ಸಂಘಟನೆಗಳು ಗವಿಸಿದ್ಧೇಶ್ವರರ ಹೆಸರು ಪ್ರಸ್ತಾಪಿಸಿರುವ ಬಗ್ಗೆ ಕೇಳಲಾದ ಪ್ರಶ್ನೆಗೆ ’ಅವರ ವಿಚಾರ ನಮಗೆ ಬೇಕಿಲ್ಲ. ಕುಮಾರರಾಮನ ಹೆಸರು ಮಾತ್ರ ನಮ್ಮ ಆಶಯ’ ಎಂದು ಪ್ರತಿಕ್ರಿಯಿಸಿದರು.
ಒಕ್ಕೂಟದ ಮುಖಂಡರಾದ ಮಹಾಂತೇಶ ಕೊತಬಾಳ, ಟಿ. ರತ್ನಾಕರ, ಸುಕ್ರಾಜ ತಾಳಿಕೇರಿ ಹಾಗೂ ಅಂದಪ್ಪ ಬೆಣಕಲ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.