ADVERTISEMENT

ಹಾಬಲಕಟ್ಟಿ: ಚರಂಡಿ ಸ್ವಚ್ಛತೆ

​ಪ್ರಜಾವಾಣಿ ವಾರ್ತೆ
Published 11 ಜೂನ್ 2021, 14:21 IST
Last Updated 11 ಜೂನ್ 2021, 14:21 IST
ಹನುಮಸಾಗರ ಸಮೀಪದ ಗಡಚಿಂತಿ ಗ್ರಾಮದಲ್ಲಿ ಚರಂಡಿ ಸ್ವಚ್ಛ ಮಾಡಲಾಯಿತು
ಹನುಮಸಾಗರ ಸಮೀಪದ ಗಡಚಿಂತಿ ಗ್ರಾಮದಲ್ಲಿ ಚರಂಡಿ ಸ್ವಚ್ಛ ಮಾಡಲಾಯಿತು   

ಹಾಬಲಕಟ್ಟಿ (ಹನುಮಸಾಗರ): ಸಮೀಪದ ಹಾಬಲಕಟ್ಟಿ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ಸಿಬ್ಬಂದಿ ಚರಂಡಿ ಸ್ವಚ್ಛ ಮಾಡಿದರು.

ಗ್ರಾಮಸ್ಥರು ಗ್ರಾಮ ಪಂಚಾಯಿತಿ ಅಧಿಕಾರಿಗಳ ಮೇಲೆ ಒತ್ತಡ ಹಾಕಿದ ಕಾರಣ ಈ ಕಾರ್ಯ ಮಾಡಲಾಯಿತು.

ಗ್ರಾಮ ಪಂಚಾಯಿತಿ ಸದಸ್ಯ ಮಲ್ಲಪ್ಪ ಭೋವಿ ಮಾತನಾಡಿ,‘ಗ್ರಾಮಸ್ಥರು ಚರಂಡಿಗಳಲ್ಲಿ ಕಸ–ಕಡ್ಡಿ, ಪ್ಲಾಸ್ಟಿಕ್ ಹಾಕುತ್ತಿರುವುದರಿಂದ ನೀರು ಹರಿಯದಂತಾಗಿ, ಮಳೆಗಾಲದಲ್ಲಿ ಇಂಥ ಅವಘಡಗಳು ಸಂಭವಿಸುತ್ತವೆ. ಗ್ರಾಮದಲ್ಲಿ ಕುಡಿಯುವ ನೀರು, ವಿದ್ಯುತ್, ಸ್ವಚ್ಛತೆಗೆ ಆದ್ಯತೆ ನೀಡಲಾಗುತ್ತದೆ. ಗ್ರಾಮಸ್ಥರು ತಮ್ಮ ಮನೆ ಮುಂದಿನ ಚರಂಡಿಯಲ್ಲಿ ಅನಗತ್ಯವಾಗಿ ವಸ್ತುಗಳನ್ನು ಹಾಕಬಾರದು’ ಎಂದು ಮನವಿ ಮಾಡಿದರು.

ADVERTISEMENT

ಪ್ರಮುಖರಾದ ಯಮನೂರಪ್ಪ ಅಬ್ಬಿಗೇರಿ, ಶಂಕರ ರಾಜೂರು, ಸಿದ್ದಪ್ಪ ಹಾಗೂ ಶರಣಪ್ಪ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.