ADVERTISEMENT

‘ಆಧುನಿಕತೆಯಿಂದ ರಂಗ ಕಲೆ ಮಾಯ’

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2021, 11:23 IST
Last Updated 18 ಏಪ್ರಿಲ್ 2021, 11:23 IST
ಕನಕಗಿರಿ ಸಮೀಪದ ಸುಳೇಕಲ್ ಗ್ರಾಮದಲ್ಲಿ ಶನಿವಾರ ರಾತ್ರಿ ನಡೆದ ‘ತುತ್ತು ಕೊಟ್ಟ ರೈತನಿಗೆ ಕುತ್ತು ತಂದ ಸರ್ಕಾರ’ ನಾಟಕ ಪ್ರದರ್ಶನದಲ್ಲಿ ಭುವನೇಶ್ವರಯ್ಯ ತಾತ ಮಾತನಾಡಿದರು
ಕನಕಗಿರಿ ಸಮೀಪದ ಸುಳೇಕಲ್ ಗ್ರಾಮದಲ್ಲಿ ಶನಿವಾರ ರಾತ್ರಿ ನಡೆದ ‘ತುತ್ತು ಕೊಟ್ಟ ರೈತನಿಗೆ ಕುತ್ತು ತಂದ ಸರ್ಕಾರ’ ನಾಟಕ ಪ್ರದರ್ಶನದಲ್ಲಿ ಭುವನೇಶ್ವರಯ್ಯ ತಾತ ಮಾತನಾಡಿದರು   

ಕನಕಗಿರಿ: ‘ಆಧುನಿಕ ಮಾಧ್ಯಮಗಳಿಂದ ನಾಟಕ ಕಲೆ ಮಾಯವಾಗುತ್ತಿದೆ’ ಎಂದು ಸುಳೇಕಲ್ ಬೃಹನ್ಮಠದ ಭುವನೇಶ್ವರಯ್ಯ ತಾತ ವಿಷಾದ ವ್ಯಕ್ತಪಡಿಸಿದರು.

ಸಮೀಪದ ಸುಳೇಕಲ್ ಗ್ರಾಮದ ಶರಣಬಸವೇಶ್ವರ ಜಾತ್ರಾ ಮಹೋತ್ಸವದ ಪ್ರಯುಕ್ತ ಶರಣಬಸವೇಶ್ವರ ನಾಟ್ಯ ಸಂಘ ಶನಿವಾರ ಆಯೋಜಿಸಿದ್ದ ‘ತುತ್ತು ಕೊಟ್ಟ ರೈತನಿಗೆ ಕುತ್ತು ತಂದ ಸರ್ಕಾರ’ ಸಾಮಾಜಿಕ ನಾಟಕ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.

‘ಗ್ರಾಮೀಣ ಭಾಗದ ಜನರಲ್ಲಿ ಸೌಹಾರ್ದತೆ ಮೂಡಿಸುವಲ್ಲಿ ನಾಟಕಗಳು ಪ್ರಮುಖ ಪಾತ್ರ ವಹಿಸಿವೆ. ಸಾಮಾಜಿಕ, ರಾಜಕೀಯ, ಆರ್ಥಿಕ ಕ್ಷೇತ್ರದ ಮೇಲೆ ಬೆಳಕು ಚೆಲ್ಲುವ ಕೆಲಸ ಮಾಡುತ್ತಿವೆ’ ಎಂದು ತಿಳಿಸಿದರು.

ADVERTISEMENT

ಗಂಗಾವತಿ ಭೂ ಅಭಿವೃದ್ಧಿ ಬ್ಯಾಂಕ್ ನಿರ್ದೇಶಕ ರಮೇಶ ನಾಯಕ, ಕಲಾವಿದ ಡಾ. ಎಸ್.ಬಿ. ಹಂದ್ರಾಳ್ ಮಾತನಾಡಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಿಂಗಮ್ಮ ನಿಂಗಪ್ಪ, ತಾಲ್ಲೂಕು ಪಂಚಾಯಿತಿ ಸದಸ್ಯರಾದ ಮಲ್ಲಿಕಾರ್ಜುನಗೌಡ, ಬಸಂತಗೌಡ ಪಾಟೀಲ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಜಡಿಯಪ್ಪ ಮುಕ್ಕುಂದಿ, ಪ್ರಮುಖರಾದ ಅಮರಗುಂಡಪ್ಪ ತೆಗ್ಗಿನಮನಿ, ಶಿವಪ್ಪ ಕಲ್ಮನಿ, ಮಲ್ಲಯ್ಯಸ್ವಾಮಿ, ಶಿವಾನಂದ ವಂಕಲಕುಂಟಿ, ಗಂಗಣ್ಣ ಗಣಗೂರು, ಮೈನುಸಾಬ, ಹನುಮಂತಪ್ಪ ಬಸರಿಗಿಡದ, ವಿರೂಪಾಕ್ಷಗೌಡ, ಪಂಪಾಪತಿ ದೇಸಾಯಿ, ವೀರೇಶ ಬೆನಕನಾಳ, ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ವಿವಿಧ ಪಕ್ಷಗಳ ಮುಖಂಡರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.