ಕೊಪ್ಪಳ: ಜಿಲ್ಲೆಯಲ್ಲಿ ಒಂದೆಡೆ ರಸಗೊಬ್ಬರ ಕೊರತೆಯಾದರೆ ಮತ್ತೊಂದೆಡೆ ನಕಲಿ ಬಿತ್ತನೆ ಬೀಜ ಪೂರೈಕೆ ಆರೋಪಗಳು ಕೇಳಿಬಂದಿವೆ. ಕೊಪ್ಪಳ ತಾಲ್ಲೂಕಿನ ತಾಳಕನಕಾಪುರ, ಕಲಕೇರಾ ಗ್ರಾಮದಲ್ಲೂ ಮೆಕ್ಕೆಜೋಳ ಒಣಗುತ್ತಿದ್ದು ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಕಿನ್ನಾಳ ಗ್ರಾಮದ ಅಂಗಡಿಯಲ್ಲಿ ತಾಳಕನಕಾಪುರ ಹಾಗೂ ಕಲಕೇರಾ ಗ್ರಾಮದ ನಾಲ್ವರು ರೈತರು ಮೆಕ್ಕೆಜೋಳ ಬಿತ್ತನೆ ಬೀಜ ಖರೀದಿಸಿದ್ದರು. ಅಲ್ಲಿ ಬೆಳೆಗಳು ಒಣಗುತ್ತಿವೆ. ರೈತರಾದ ಪರಮೇಶ ಮೂಗಿನ, ಶರಣಪ್ಪ ಕುರಿ ಹಾಗೂ ಇನ್ನಿಬ್ಬರು 11 ಎಕರೆ ಪ್ರದೇಶದಲ್ಲಿ ಮೆಕ್ಕೆಜೋಳ ಬಿತ್ತಿದ್ದಾರೆ. ಒಟ್ಟು 196 ಕೆಜಿ ಬೀಜ ಖರೀದಿಸಿದ್ದು ಬೆಳೆ ಒಣಗುತ್ತಿದೆ. ಬಿತ್ತನೆ ಬೀಜ ಪೂರೈಸಿದ ಅಂಗಡಿಕಾರರು ಹಾಗೂ ಏಜೆಂಟ್ಗಳು ಗುರುವಾರ ಜಮೀನಿಗೆ ಭೇಟಿ ನೀಡಿದ್ದಾರೆ.
ಜಿಲ್ಲಾಧಿಕಾರಿ ಭೇಟಿ: ರಸಗೊಬ್ಬರ ಸಮಸ್ಯೆ ಹೆಚ್ಚಾದ ಕಾರಣ ಜಿಲ್ಲಾಧಿಕಾರಿ ಸುರೇಶ ಬಿ. ಇಟ್ನಾಳ ಅವರು ವಿವಿಧೆಡೆ ಸೊಸೈಟಿಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ತಾಲ್ಲೂಕಿನ ಬಿಸರಳ್ಳಿ ಗ್ರಾಮಕ್ಕೆ ತೆರಳಿದಾಗ ಅಲ್ಲಿನ ರೈತರು ಇನ್ನಷ್ಟು ಯೂರಿಯಾ ಗೊಬ್ಬರಕ್ಕೆ ಬೇಡಿಕೆ ಇಟ್ಟರು. ರೈತರಿಗೆ ಅನುಕೂಲವಾಗುವಂತೆ ಗೊಬ್ಬರ ಒದಗಿಸಲುವಂತೆ ಜಿಲ್ಲಾಧಿಕಾರಿ ಕೃಷಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.