ADVERTISEMENT

ಯಲಬುರ್ಗಾ: ಹದಿಹರೆಯದವರಿಗೆ ಆರೋಗ್ಯ ಶಿಕ್ಷಣ ಅವಶ್ಯ

ಆರೋಗ್ಯ, ಕ್ಷೇಮ ದಿನಾಚರಣೆಯಲ್ಲಿ ವೈದ್ಯಾಧಿಕಾರಿ ಡಾ. ಅಮರೇಶ ಸಲಹೆ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2021, 6:45 IST
Last Updated 14 ನವೆಂಬರ್ 2021, 6:45 IST
ಯಲಬುರ್ಗಾ ತಾಲ್ಲೂಕು ಸಂಗನಾಳ ಗ್ರಾಮದಲ್ಲಿ ಶನಿವಾರ ನಡೆದ ಹದಿಹರೆಯದವರಿಗೆ ಆರೋಗ್ಯ ಮತ್ತು ಕ್ಷೇಮ ದಿನಾಚರಣೆಯಲ್ಲಿ ಆಪ್ತಸಮಾಲೋಚಕ ಶರಣಪ್ಪ ಉಪ್ಪಾರ ಮಾತನಾಡಿದರು. ವೈದ್ಯಾಧಿಕಾರಿ ಅಮರೇಶ ನಾಗರಾಳ, ಫರೀದಾ ಬೇಗಂ ಇದ್ದರು
ಯಲಬುರ್ಗಾ ತಾಲ್ಲೂಕು ಸಂಗನಾಳ ಗ್ರಾಮದಲ್ಲಿ ಶನಿವಾರ ನಡೆದ ಹದಿಹರೆಯದವರಿಗೆ ಆರೋಗ್ಯ ಮತ್ತು ಕ್ಷೇಮ ದಿನಾಚರಣೆಯಲ್ಲಿ ಆಪ್ತಸಮಾಲೋಚಕ ಶರಣಪ್ಪ ಉಪ್ಪಾರ ಮಾತನಾಡಿದರು. ವೈದ್ಯಾಧಿಕಾರಿ ಅಮರೇಶ ನಾಗರಾಳ, ಫರೀದಾ ಬೇಗಂ ಇದ್ದರು   

ಯಲಬುರ್ಗಾ: ತಾಲ್ಲೂಕಿನ ಸಂಗನಾಳ ಗ್ರಾಮದಲ್ಲಿ ಆರೋಗ್ಯ ಇಲಾಖೆ ಮತ್ತು ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ರಾಷ್ಟ್ರೀಯ ಕಿಶೋರ ಸ್ವಾಸ್ಥ್ಯ ಯೋಜನೆ ಅಡಿಯಲ್ಲಿ ಹದಿಹರೆಯದವರಿಗೆ ಆರೋಗ್ಯ ಮತ್ತು ಕ್ಷೇಮ ದಿನಾಚರಣೆ ಮತ್ತು ಆರೋಗ್ಯ ತಪಾಸಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಶನಿವಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಅಮರೇಶ ನಾಗರಾಳ ಮಾತನಾಡಿ,‘ಪ್ರಸ್ತುತ ಸಂದರ್ಭದಲ್ಲಿ ಹದಿಹರೆಯದವರಿಗೆ ಆರೋಗ್ಯ ಶಿಕ್ಷಣ ಅವಶ್ಯಕ. ಪ್ರಸ್ತುತ ಅವರ ಜೀವನ ಶೈಲಿ ಬದಲಾಗುತ್ತಿರುವ ಕಾರಣ ಶಿಕ್ಷಣ ಮುಖ್ಯವಾಗಿದೆ’ ಎಂದರು.

ಆರೋಗ್ಯ ಆಪ್ತ ಸಮಾಲೋಚಕ ಶರಣಪ್ಪ ಉಪ್ಪಾರ ಮಾತನಾಡಿ,‘ಹದಿಹರೆಯದವರು ಎದುರಿಸುತ್ತಿರುವ ಸಮಸ್ಯೆಗಳಲ್ಲಿ ಮುಖ್ಯವಾಗಿ ರಕ್ತಹೀನತೆ, ಪೌಷ್ಟಿಕ ಆಹಾರದ ಕೊರತೆ, ಋತುಚಕ್ರ ಸಂಬಂಧಿ ಸಮಸ್ಯೆಗಳು ಹಾಗೂ ವೈಯಕ್ತಿಕ ಅನಾರೋಗ್ಯ ಮೊದಲಾದವುಗಳು ಅವರನ್ನು ಬಲಹೀನರನ್ನಾಗಿ ಮಾಡುತ್ತವೆ. ಇಂಥ ಸಮಸ್ಯೆಗಳಿಂದ ಮುಕ್ತರಾಗಲು ಸಾಧ್ಯವಿದ್ದು, ವೈದ್ಯರ ಸಲಹೆ ಹಾಗೂ ಆರೋಗ್ಯಪೂರ್ಣ ನಡಾವಳಿಕೆ ಮತ್ತು ಉತ್ತಮ ಆಹಾರ ಸೇವನೆ ಮುಖ್ಯ’ ಎಂದರು.

ADVERTISEMENT

ಪಂಚಾಯಿತಿ ಅಧ್ಯಕ್ಷೆ ಫರೀದಾ ಬೇಗಂ ಬೆಟಗೇರಿ, ಆರೋಗ್ಯ ಕೇಂದ್ರದ ನಿರೀಕ್ಷಣಾಧಿ ಬಸಮ್ಮ ಆರೋಗ್ಯ ಸಂರಕ್ಷಣಾ ಅಧಿಕಾರಿ ಶಾಂತಾದೇವಿ ದೇಸಾಯಿ, ಸರ್ಕಾರಿ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಶಿವಾನಂದ ಹೊಸಮನಿ ಹಾಗೂ ಸಹ ಶಿಕ್ಷಕಿ ನಂದಿತಾ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.