ADVERTISEMENT

ಕನಕಗಿರಿ: ನರೇಗಾ ಕೆಲಸ ನೀಡಲು ಒತ್ತಾಯ

ಅಖಿಲ ಕರ್ನಾಟಕ ರಾಜ್ಯ ಅನ್ನದಾತ ಸಂಘದ ಪದಾಧಿಕಾರಿಗಳಿಂದ ಮನವಿ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2021, 12:02 IST
Last Updated 17 ಸೆಪ್ಟೆಂಬರ್ 2021, 12:02 IST
ಕನಕಗಿರಿ ಸಮೀಪದ ಲಾಯದುಣಸಿ ಗ್ರಾಮಸ್ಥರಿಗೆ ಕೂಲಿ ಕೆಲಸ ನೀಡಬೇಕು ಎಂದು ಒತ್ತಾಯಿಸಿ ಅಖಿಲ ಕರ್ನಾಟಕ ರಾಜ್ಯ ಅನ್ನದಾತ ಸಂಘದ ಪ್ರಮುಖರು ಬುಧವಾರ ಪಿಡಿಒ ರವೀಂದ್ರ ಕುಲಕರ್ಣಿ ಅವರಿಗೆ ಮನವಿ ಸಲ್ಲಿಸಿದರು
ಕನಕಗಿರಿ ಸಮೀಪದ ಲಾಯದುಣಸಿ ಗ್ರಾಮಸ್ಥರಿಗೆ ಕೂಲಿ ಕೆಲಸ ನೀಡಬೇಕು ಎಂದು ಒತ್ತಾಯಿಸಿ ಅಖಿಲ ಕರ್ನಾಟಕ ರಾಜ್ಯ ಅನ್ನದಾತ ಸಂಘದ ಪ್ರಮುಖರು ಬುಧವಾರ ಪಿಡಿಒ ರವೀಂದ್ರ ಕುಲಕರ್ಣಿ ಅವರಿಗೆ ಮನವಿ ಸಲ್ಲಿಸಿದರು   

ಕನಕಗಿರಿ: ತಾಲ್ಲೂಕಿನ ಹುಲಿಹೈದರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಲಾಯದುಣಸಿ ಗ್ರಾಮಸ್ಥರಿಗೆ ನರೇಗಾ ಯೋಜನೆಯಲ್ಲಿ ಕೂಲಿ ಕೆಲಸ ನೀಡಬೇಕು ಎಂದು ಒತ್ತಾಯಿಸಿ ಅಖಿಲ ಕರ್ನಾಟಕ ರಾಜ್ಯ ಅನ್ನದಾತ ಸಂಘದ ಪ್ರಮುಖರು ಪಿಡಿಒ ರವೀಂದ್ರ ಕುಲಕರ್ಣಿ ಅವರಿಗೆ ಬುಧವಾರ ಮನವಿ ಸಲ್ಲಿಸಿದರು.

ಗ್ರಾಮದ ನೂರಾರು ಕುಟುಂಬಗಳು ನರೇಗಾ ಯೋಜನೆಯ ಉದ್ಯೋಗ ಚೀಟಿ ಹೊಂದಿದ್ದರೂ ಕೆಲಸ ಇಲ್ಲದಂತಾಗಿದೆ. ಕೂಲಿ ಕೆಲಸ ಇಲ್ಲದ ಕಾರಣ ಕೂಲಿಕಾರರು ದೂರದ ನಗರ ಪ್ರದೇಶಗಳಿಗೆ ಗುಳೆ ಹೋಗುತ್ತಿದ್ದಾರೆ. ಗುಳೆ ತಪ್ಪಿಸಲು ಕೂಲಿ ಕೆಲಸ ಕೊಡಬೇಕು ಎಂದು ಅವರು ಒತ್ತಾಯಿಸಿದರು.

ಕೂಲಿಕಾರರಿಗೆ ಕೆಲಸ ನೀಡದದ್ದರೆ ಗ್ರಾಮ ಪಂಚಾಯಿತಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ADVERTISEMENT

ಪಿಡಿಒ ರವೀಂದ್ರ ಕುಲಕರ್ಣಿ ಮಾತನಾಡಿ,‘ಕ್ರಿಯಾ ಯೋಜನೆ ರೂಪಿಸಿ ಕೂಲಿ ಕೆಲಸ ನೀಡಲಾಗುವುದು’ ಎಂದರು.

ಗ್ರಾ.ಪಂ. ಉಪಾಧ್ಯಕ್ಷ ಶಿವಶಂಕ್ರಪ್ಪ ಚೆನ್ನದಾಸರ, ಸಂಘದ ಅಧ್ಯಕ್ಷ ಭಾಗಪ್ಪ ಪೂಜಾರಿ, ಪದಾಧಿಕಾರಿಗಳಾದ ತಿರುಪತಿ ತಳವಾರ, ಯಂಕಪ್ಪ ತಳವಾರ, ಯಲ್ಲಾಲಿಂಗೇಶ, ಪಂಪಾಪತಿ ರೆಡ್ಡಿ, ಸಂಗಮೇಶ ರೆಡ್ಡಿ, ಕನಕರಾಯ ಉಡೇಜಾಲಿ, ರಾಮಣ್ಣ ಬಡಗೇರ ಹಾಗೂ ಸಂಘಟನೆಯ ಪ್ರಮುಖರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.