ADVERTISEMENT

ಸಾಲ ಮನ್ನಾಕ್ಕೆ ರೈತ ಸಂಘ ಒತ್ತಾಯ

ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಕಾರ್ಯಕರ್ತರಿಂದ ಮನವಿ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2021, 16:56 IST
Last Updated 21 ಏಪ್ರಿಲ್ 2021, 16:56 IST
ಕುಷ್ಟಗಿಯಲ್ಲಿ ರೈತ ಸಂಘದ ಪ್ರಮುಖರು ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಗ್ರೇಡ್–2 ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು
ಕುಷ್ಟಗಿಯಲ್ಲಿ ರೈತ ಸಂಘದ ಪ್ರಮುಖರು ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಗ್ರೇಡ್–2 ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು   

ಕುಷ್ಟಗಿ: ರೈತರ ಸಾಲ ಮನ್ನಾ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಕಾರ್ಯಕರ್ತರು ಮನವಿ ಗ್ರೇಡ್‌ 2 ತಹಶೀಲ್ದಾರ್ ಮುರಳೀಧರ ಮೂಲಕ ಮುಖ್ಯಮಂತ್ರಿಗೆ ಅವರಿಗೆ ಸಲ್ಲಿಸಿದರು.

ಸಂಘಟನೆ ಪ್ರಮುಖರು ಮಾತನಾಡಿ,‘ಕೋವಿಡ್‌ ಸಮಸ್ಯೆ ಕಾರಣಕ್ಕೆ ಜಾರಿಯಾಗಿದ್ದ ಲಾಕ್‌ಡೌನ್‌ ಮತ್ತಿತರೆ ನಿರ್ಬಂಧಗಳು, ಮಾರುಕಟ್ಟೆ ವ್ಯವಸ್ಥೆ ಸ್ಥಗಿತಗೊಂಡಿದ್ದರಿಂದ ರೈತರು ಕಂಗಾಲಾಗುವಂತಾಗಿತ್ತು. ಈಗಲೂ ರೈತರ ಆರ್ಥಿಕ ಪರಿಸ್ಥಿತಿ ಸುಧಾರಿಸಿಲ್ಲ. ಹಾಗಾಗಿ ರೈತರ ಎಲ್ಲ ರೀತಿಯ ಬ್ಯಾಂಕ್‌ ಸಾಲಗಳನ್ನು ಮನ್ನಾ ಮಾಡಬೇಕು’ ಎಂದರು.

ಈ ತಾಲ್ಲೂಕು ನೀರಾವರಿ ಪ್ರದೇಶಕ್ಕೆ ಒಳಪಡದ ಕಾರಣ ರೈತರು ಮಳೆಯನ್ನೇ ನಂಬಿಕೊಳ್ಳುವಂತಾಗಿದೆ. ಆದರೆ ಅನಿಶ್ಚಿತ ಮಳೆಯಿಂದ ಫಸಲು ರೈತರ ಕೈಗೆ ಬರುತ್ತಿಲ್ಲ. ಮಾರುಕಟ್ಟೆಯಲ್ಲಿ ಬೆಲೆಯೂ ಇಲ್ಲ. ಹಾಗಾಗಿ ರೈತರ ವಿವಿಧ ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ರೀತಿಯಲ್ಲಿ ಬೆಂಬಲ ಬೆಲೆ ನಿಗದಿಪಡಿಸಬೇಕು. ರಾಸಾಯನಿಕ ಗೊಬ್ಬರ ದರ ಕಡಿತಗೊಳಿಸಬೇಕು ಎಂದು ಒತ್ತಾಯಿಸಿದರು.

ADVERTISEMENT

ಪ್ರಮುಖರಾದ ಹನುಮಂತಪ್ಪ ಹೊಳೆಯಾಚೆ, ನಾಗರಾಜ ಇಟಗಿ, ಇಸ್ಮಾಯಿಲ್ ನಾಲಾಬಂದ್ ಹಾಗೂ ಶ್ರೀನಿವಾಸ ಭೋವಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.