ADVERTISEMENT

ರಸಗೊಬ್ಬರದ ಬೇಡಿಕೆ; ರೈತರ ಜಮಾವಣೆ

​ಪ್ರಜಾವಾಣಿ ವಾರ್ತೆ
Published 6 ಜುಲೈ 2022, 16:07 IST
Last Updated 6 ಜುಲೈ 2022, 16:07 IST
ಯಲಬುರ್ಗಾದ ಟಿಎಪಿಸಿಎಂಎಸ್ ದಲ್ಲಿ ಯೂರಿಯಾ ಗೊಬ್ಬರ ಖರೀದಿಗೆ ಕೇಂದ್ರದ ಎದುರು ಜಮಾವಣೆಗೊಂಡ ರೈತರು
ಯಲಬುರ್ಗಾದ ಟಿಎಪಿಸಿಎಂಎಸ್ ದಲ್ಲಿ ಯೂರಿಯಾ ಗೊಬ್ಬರ ಖರೀದಿಗೆ ಕೇಂದ್ರದ ಎದುರು ಜಮಾವಣೆಗೊಂಡ ರೈತರು   

ಯಲಬುರ್ಗಾ: ರಸಗೊಬ್ಬರಕ್ಕಾಗಿ ಸಾಕಷ್ಟು ಸಂಖ್ಯೆಯ ರೈತರು ಟಿಎಪಿಸಿಎಂಎಸ್ ಅಂಗಡಿಯ ಮುಂದೆ ಜಮಾಯಿಸಿದ್ದರು.

ತಾಲ್ಲೂಕಿನಾದ್ಯಂತ ಉತ್ತಮ ಮಳೆ ಸುರಿದಿರುವ ಹಿನ್ನಲೆಯಲ್ಲಿ ರೈತರು ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾರೆ. ಕೆಲ ರೈತರು ಬಿತ್ತನೆಗೆ ಮುಂದಾಗಿದ್ದಾರೆ. ಬುಧವಾರ ರಸಗೊಬ್ಬರಕ್ಕಾಗಿ ರೈತರು ಅಂಗಡಿಯ ಮುಂದೆ ಜಮಾವಣೆಗೊಂಡು ಗೊಬ್ಬರಕ್ಕಾಗಿ ಕಾಯುತ್ತಿರುವುದು ಸಾಮಾನ್ಯವಾಗಿತ್ತು. ಹೆಚ್ಚಿನ ಸಂಖ್ಯೆಯ ರೈತರಿಗೆ ಗೊಬ್ಬರ ಲಭ್ಯವಾಗದೆ ನಿರಾಶೆಗೆ ಒಳಪಟ್ಟು ವಾಪಾಸ್ಸಾಗಿದ್ದು ಕಂಡು ಬಂತು. ಗೊಬ್ಬರಕ್ಕಾಗಿ ಯಲಬುರ್ಗಾ ಸೇರಿದಂತೆ ಸುತ್ತಮುತ್ತಲಿನ ಹಲವು ಗ್ರಾಮದಿಂದ ರೈತರು ಆಗಮಿಸಿದ್ದರು. ರಿಯಾಯಿತಿ ದರದಲ್ಲಿ ಲಭ್ಯವಾಗುವ ಯೂರಿಯಾ ರಸಗೊಬ್ಬರಕ್ಕಾಗಿ ಸುಮಾರು ದಿನಗಳಿಂದಲೂ ಕಾಯುತ್ತಿದ್ದಾರೆ.

ಟಿಎಪಿಸಿಎಂಎಸ್ ಅಧ್ಯಕ್ಷ ಶಿವಕುಮಾರ ನಾಗಲಾಪೂರಮಠ ಅವರು ಮಾತನಾಡಿ, ಉತ್ತಮವಾಗಿ ಮಳೆ ಆಗುತ್ತಿದ್ದರಿಂದ ಬಹುತೇಕ ರೈತರಿಗೆ ಗೊಬ್ಬರದ ಅವಶ್ಯಕತೆಯಿದೆ. ಈಗಾಗಲೇ 30ಟನ್ ಮಾರಾಟವಾಗಿದೆ. ಕೂಡಲೇ ಇನ್ನಷ್ಟು ಕೇಂದ್ರಕ್ಕೆ ಖರೀದಿಸಿ ರೈತರಿಗೆ ವಿತರಣೆಗೆ ಕ್ರಮಕೈಗೊಳ್ಳಲಾಗುವುದು ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.