ADVERTISEMENT

‘75ನೇ ಫಿಟ್ ಇಂಡಿಯಾ ಫ್ರೀಡಂ ರನ್’

ಕ್ರೀಡಾ ಸಚಿವಾಲಯದಿಂದ 'ಅಜಾದಿ ಕಾ ಅಮೃತ ಮಹೋತ್ಸವ'

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2021, 14:00 IST
Last Updated 23 ಸೆಪ್ಟೆಂಬರ್ 2021, 14:00 IST
ಕೊಪ್ಪಳದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನೆಹರೂ ಯುವ ಕೇಂದ್ರದ ವತಿಯಿಂದ ಹಮ್ಮಿಕೊಂಡಿದ್ದ ಅಜಾದಿ ಕಾ ಅಮೃತ ಮಹೋತ್ಸವದ '75ನೇ ಫಿಟ್ ಇಂಡಿಯಾ ಫ್ರೀಡಂ ರನ್ ರನ್-2.0' ಕಾರ್ಯಕ್ರಮ ಸಭೆಯಲ್ಲಿ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಮಾತನಾಡಿದರು. ಎಸ್‌ಪಿ ಟಿ.ಶ್ರೀಧರ್, ಯುವ ಅಧಿಕಾರಿ ಮಾಂಟೂ ಪಾತಾರ ಮುಂತಾದವರು ಇದ್ದರು 
ಕೊಪ್ಪಳದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನೆಹರೂ ಯುವ ಕೇಂದ್ರದ ವತಿಯಿಂದ ಹಮ್ಮಿಕೊಂಡಿದ್ದ ಅಜಾದಿ ಕಾ ಅಮೃತ ಮಹೋತ್ಸವದ '75ನೇ ಫಿಟ್ ಇಂಡಿಯಾ ಫ್ರೀಡಂ ರನ್ ರನ್-2.0' ಕಾರ್ಯಕ್ರಮ ಸಭೆಯಲ್ಲಿ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಮಾತನಾಡಿದರು. ಎಸ್‌ಪಿ ಟಿ.ಶ್ರೀಧರ್, ಯುವ ಅಧಿಕಾರಿ ಮಾಂಟೂ ಪಾತಾರ ಮುಂತಾದವರು ಇದ್ದರು    

ಕೊಪ್ಪಳ: ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಜಿಲ್ಲೆಯಲ್ಲಿ '75ನೇ ಫಿಟ್ ಇಂಡಿಯಾ ಫ್ರೀಡಂ ರನ್2.0' ಕಾರ್ಯಕ್ರಮವನ್ನು ಸೆ.25ರಂದು ಹಮ್ಮಿಕೊಳ್ಳಲಾಗಿದ್ದು, ಯುವಕರು ಇದರಲ್ಲಿ ಭಾಗವಹಿಸಬೇಕು ಎಂದು ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಹೇಳಿದರು.

ನೆಹರೂ ಯುವ ಕೇಂದ್ರದ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಲಾಗಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕೇಂದ್ರಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ ಅಜಾದಿ ಕಾ ಅಮೃತ ಮಹೋತ್ಸವವನ್ನು ದೇಶದಾದ್ಯಂತ ಆಚರಿಸುತ್ತಿದ್ದು, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ನೆಹರೂ ಯುವ ಕೇಂದ್ರ, ವಿವಿಧ ಸಂಘ-ಸಂಸ್ಥೆಗಳು, ಎನ್.ಎಸ್.ಎಸ್., ಎನ್.ಜಿ.ಓ, ಯುವ ಜನ ಸಂಘಟನೆಗಳು ಹಾಗೂ ಜಿಲ್ಲೆಯ ವಿವಿಧ ಯುವ ಸಂಘಗಳ ಸಹಕಾರದೊಂದಿಗೆ 75ನೇ ಫಿಟ್ ಇಂಡಿಯಾ ಪ್ರೀಡಂ ರನ್-2.0 ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.

ADVERTISEMENT

ಪ್ರಧಾನಮಂತ್ರಿ ಅವರ ಭಾಷಣದಿಂದ ಸ್ಫೂರ್ತಿ ಪಡೆದು, ಮಾ.12 ರಂದು ಅಜಾದಿ ಕಾ ಅಮೃತ್ ಮಹೋತ್ಸವದ 'ಕರ್ಟನ್ ರೈಸರ್ಸ್‌' ಸಮಯದಲ್ಲಿ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ ಈ ಪರಿಕಲ್ಪನೆ ಮಾಡಿದೆ. ಫಿಟ್‌ನೆಸ್‌ ಅಗತ್ಯತೆಯನ್ನು ಸಕ್ರಿಯವಾಗಿಡಲು ವರ್ಚುವಲ್ ರನ್ ಪರಿಕಲ್ಪನೆಯ ಮೇಲೆ ಆರಂಭಿಸಲಾಯಿತು ಎಂದರು.

'ಜನರು ತಮ್ಮ ದೈನಂದಿನ ಜೀವನದಲ್ಲಿ ಓಟ ಮತ್ತು ಕ್ರೀಡೆಗಳಂತಹ ಫಿಟ್‌ನೆಸ್‌ ಚಟುವಟಿಕೆತೆಗೆದುಕೊಳ್ಳಲು ಪ್ರೋತ್ಸಾಹಿಸುವುದು. ಅಲ್ಲದೇ ಬೊಜ್ಜು, ಸೋಮಾರಿತನ, ಒತ್ತಡ, ಆತಂಕ, ರೋಗ ಇತ್ಯಾದಿಗಳಿಂದ ಮುಕ್ತಿಯನ್ನು ಪಡೆಯುವುದು ಕಾರ್ಯಕ್ರಮದ ಗುರಿಯಾಗಿದೆ. ಈ ಅಭಿಯಾನದ ಮೂಲಕ ನಾಗರಿಕರು ನಿತ್ಯ ಕನಿಷ್ಠ 30 ನಿಮಿಷಗಳ ದೈಹಿಕ ಚಟುವಟಿಕೆ ಯೋಗ ಧ್ಯಾನದಂತಹ ಕಾರ್ಯಕ್ರಮಗಳನ್ನು 'ಫಿಟ್‌ನೆಸ್‌ ಕಿ ಡೋಸ್ ಅಧಾ ಘಂಟಾ ರೋಜ್'ನಲ್ಲಿ ಸೇರಿಸುವ ಸಂಕಲ್ಪ ಮಾಡಲು ಕರೆ ನೀಡಲಾಗುವುದು ಎಂದರು.

ಜಿಲ್ಲಾ ಯುವ ಸಂಘ ಪ್ರಶಸ್ತಿ:2021-22ನೇ ಸಾಲಿನ ಜಿಲ್ಲಾ ಯುವ ಸಂಘ ಪ್ರಶಸ್ತಿಗಾಗಿ ಜಿಲ್ಲೆಯ ನೋಂದಾಯಿತ ಯುವ, ಮಹಿಳಾ, ಯುವತಿ ಸಂಘಗಳಿಂದ ಸೆ.25 ರೊಳಗೆ ಅರ್ಜಿ ಆಹ್ವಾನಿಸಲಾಗಿದ್ದು, ಜಿಲ್ಲಾ ಮಟ್ಟದಲ್ಲಿ ಆಯ್ಕೆಯಾದ ಒಂದು ಯುವ ಸಂಘಕ್ಕೆ ₹ 25 ಸಾವಿರ ಬಹುಮಾನ ಮತ್ತು ಪ್ರಶಸ್ತಿ ಪತ್ರ ನೀಡಲಾಗುತ್ತದೆ. ರಾಜ್ಯ ಮಟ್ಟದಲ್ಲಿ ಆಯ್ಕೆಯಾದ ಒಂದು ಯುವ ಸಂಘಕ್ಕೆ ₹ 1 ಲಕ್ಷ ಹಾಗೂ ರಾಷ್ಟ್ರ ಮಟ್ಟದಲ್ಲಿ ಪ್ರಥಮ ಸ್ಥಾನಕ್ಕೆ ₹ 5 ಲಕ್ಷ, ದ್ವಿತೀಯ ಸ್ಥಾನಕ್ಕೆ ₹ 3 ಲಕ್ಷ ಮತ್ತು ತೃತೀಯ ಸ್ಥಾನಕ್ಕೆ ₹ 2 ಲಕ್ಷ ಬಹುಮಾನ ಮತ್ತು ಪ್ರಶಸ್ತಿ ಪತ್ರ ನೀಡಲಾಗುವುದು ಎಂದು ಜಿಲ್ಲಾ ಯುವ ಅಧಿಕಾರಿ ಮೊಂಟು ಪಾತಾರ ಮಾಹಿತಿ ನೀಡಿದರು.

ಸಭೆಯಲ್ಲಿ ಎಸ್‌ಪಿ ಟಿ.ಶ್ರೀಧರ್, ಉಪವಿಭಾಗಾಧಿಕಾರಿ ನಾರಾಯಣರೆಡ್ಡಿ ಕನಕರೆಡ್ಡಿ, ಪ್ರೊಬೇಷನರಿ ಐಎಎಸ್ ಅಧಿಕಾರಿ ಹೇಮಂತ್ ಕುಮಾರ್, ಜಿ.ಪಂ. ಲೆಕ್ಕಾಧಿಕಾರಿ ಬಸವರಾಜ, ಜಿಲ್ಲಾ ಕೈಗಾರಿಕಾ ಇಲಾಖೆ ಜಂಟಿ ನಿರ್ದೇಶಕ ಪ್ರಶಾಂತ ಬಾರಿಗಿಡದ್, ವಾರ್ತಾ ಇಲಾಖೆಎಡಿ ಸುರೇಶ, ನೆಹರು ಯುವ ಕೇಂದ್ರದ ಲೆಕ್ಕಾಧಿಕಾರಿ ರಾಮ್‌ರಾವ್ ಬಿರಾದಾರ್ಮುಂತಾದವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.