ಕೊಪ್ಪಳ: ಬಿರುಬಿಸಿಲಿಗೆ ಕಾದು ಕೆಂಡಂದಂತಾಗಿದ್ದ ಭೂಮಿಗೆ ಗುರುವಾರ ಸಂಜೆ ಆಲಿಕಲ್ಲು ಸಮೇತ ಸುರಿದ ಜೋರು ಮಳೆ ತಂಪರೆಯಿತು.
ಹಲವು ದಿನಗಳಿಂದ ವಿಪರೀತ ಬಿಸಿಲಿನಿಂದಾಗಿ ಜನ ಬೇಸತ್ತು ಹೋಗಿದ್ದರು. ಗುರುವಾರ ಬೆಳಿಗ್ಗೆ ಎಂದಿಗಿಂತಲೂ ಕಡಿಮೆ ಪ್ರಮಾಣದಲ್ಲಿ ಬಿಸಿಲು ಇತ್ತು. ಸಂಜೆಯಾಗುತ್ತಿದ್ದಂತೆಯೇ ಸಿಡಿಲಿನ ಆರ್ಭಟದೊಂದಿಗೆ ಮಳೆ ಸುರಿಯಿತು.
ಕೊಪ್ಪಳ, ಕಾರಟಗಿ ಹಾಗೂ ಗಂಗಾವತಿಯಲ್ಲಿ ಅಲಿಕಲ್ಲು ಮಳೆ ಬಂದಿದೆ. ಕುಕನೂರಿನಲ್ಲಿ ಉತ್ತಮ ಮಳೆಯಾದರೆ, ಪಕ್ಕದ ಯಲಬುರ್ಗಾದಲ್ಲಿ ಬಿಸಿಲಿನ ಧಗೆ ಜೋರಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.