ADVERTISEMENT

ರಡ್ಡಿ ಸಮಾಜದ ಬಡವರಿಗೆ ನೆರವು ಸಿಗಲಿ; ಉಪನ್ಯಾಸಕ ಲಿಂಗಾರಡ್ಡಿ

​ಪ್ರಜಾವಾಣಿ ವಾರ್ತೆ
Published 11 ಮೇ 2022, 3:54 IST
Last Updated 11 ಮೇ 2022, 3:54 IST
ಕೊಪ್ಪಳದ ಕಿನ್ನಾಳ ರಸ್ತೆಯ ಹೇಮರಡ್ಡಿ ಮಲ್ಲಮ್ಮ ದೇವಸ್ಥಾನದಲ್ಲಿ ಜಿಲ್ಲಾಡಳಿತದ ವತಿಯಿಂದ ನಡೆದ ಹೇಮರಡ್ಡಿ ಮಲ್ಲಮ್ಮ ಜಯಂತಿ ಕಾರ್ಯಕ್ರಮಕ್ಕೆ ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಚಾಲನೆ ನೀಡಿದರು
ಕೊಪ್ಪಳದ ಕಿನ್ನಾಳ ರಸ್ತೆಯ ಹೇಮರಡ್ಡಿ ಮಲ್ಲಮ್ಮ ದೇವಸ್ಥಾನದಲ್ಲಿ ಜಿಲ್ಲಾಡಳಿತದ ವತಿಯಿಂದ ನಡೆದ ಹೇಮರಡ್ಡಿ ಮಲ್ಲಮ್ಮ ಜಯಂತಿ ಕಾರ್ಯಕ್ರಮಕ್ಕೆ ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಚಾಲನೆ ನೀಡಿದರು   

ಕೊಪ್ಪಳ: ರಡ್ಡಿ ಸಮಾಜ ಶ್ರೀಮಂತ ವಾಗಿದ್ದರೂ ಇನ್ನೂ ಕೆಲವು ಕಡೆ ಕೂಲಿ ಮಾಡುವ, ಆರ್ಥಿಕವಾಗಿ ಹಿಂದುಳಿದ ಬಡವರು ಇದ್ದಾರೆ. ಅವರಿಗೆ ಸರ್ಕಾರದ ಸೌಲಭ್ಯ ಮೀಸಲಾತಿ ಗೊಂದಲದಿಂದ ದೊರೆಯುತ್ತಿಲ್ಲ ಎಂದು ಉಪನ್ಯಾಸಕ ಲಿಂಗಾರಡ್ಡಿ ಆಲೂರು ಹೇಳಿದರು.

ಮಂಗಳವಾರ ಕಿನ್ನಾಳ ರಸ್ತೆಯ ಹೇಮರೆಡ್ಡಿ ಮಲ್ಲಮ್ಮ ದೇವ ಸ್ಥಾನದ ಆವರಣದಲ್ಲಿ ಜಿಲ್ಲಾಡಳಿತದ ವತಿಯಿಂದ ನಡೆದ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಜಯಂತಿ ಕಾರ್ಯ ಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದರು.

ಮಲ್ಲಮ್ಮ ಮನೆ, ಸಮಾಜ, ದೇಶಕ್ಕೆ ಆದರ್ಶ ಪ್ರಾಯಳು. ಅವರ ಸನ್ನಡತೆಯಿಂದ ಶಿವನನ್ನು ಕಂಡ ಬಗೆ ಆದರ್ಶವಾಗಿದೆ. ಸಮಾಜದ ಜನತೆ ಕಷ್ಟ ಸಹಿಷ್ಣುಗಳು. ದುಡಿಮೆಯನ್ನೇ ದೇವರೆಂದು ನಂಬಿದವರು. ಆದರೂ ಕೆಲವರು ಬಡತನದಲ್ಲಿ ಇದ್ದಾರೆ. ಹಿಂದೂ ರಡ್ಡಿ, ಲಿಂಗಾಯತ ರಡ್ಡಿ, ರೆಡ್ಡಿ ಎಂದು ಮುಂತಾಗಿ ದಾಖ ಲಾಗಿ ಸಮಸ್ಯೆಯಾಗುತ್ತಿದೆ. ಇದನ್ನು ಜನ ಪ್ರತಿ ನಿಧಿಗಳು ಸರಿಪಡಿಸಬೇಕು ಎಂದರು.

ADVERTISEMENT

ರಾಜಕೀಯ ಮತ್ತು ಆರ್ಥಿ ಕವಾಗಿ ಸದೃಢ ಆಗಿದ್ದರೂ ಶೈಕ್ಷಣಿಕವಾಗಿ ಹಿಂದು ಳಿಯುತ್ತಿದ್ದೇವೆ. ಅಂತಹ ಕುಟುಂಬ ಗಳನ್ನು ಗುರು ತಿಸಿ ಸರ್ಕಾರ, ಸಮಾಜದ ಸಿರಿವಂತರು ಗುರುತಿಸಿ ಸಹಾಯ ಮಾಡಬೇಕಾಗುತ್ತದೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಮಾತನಾಡಿ, ನನ್ನ ರಾಜಕೀಯ ಜೀವನದ ಯಶಸ್ವಿಗೆ ರಡ್ಡಿ ಸಮಾಜದ ಕೊಡುಗೆ ಅಪಾರವಿದೆ ಎಂದರು.

ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಹಾಂತೇಶ ಪಾಟೀಲ್ ಮೈನಳ್ಳಿ ಮಾತನಾಡಿ, ಜಯಂತಿ ಕಾರ್ಯ ಕ್ರಮಗಳು ನಿರ್ದಿಷ್ಟ ಸಮುದಾಯಕ್ಕೆ ಸೀಮಿತ ವಾಗದೆ, ಸಮಾಜದ ಎಲ್ಲ ಸಮುದಾಯದವರ ಪಾಲ್ಗೊಳ್ಳುವಿಕೆ ಮೂಲಕ ಶರಣರ ತತ್ವ, ಆದರ್ಶಗಳಿಗೆ ಪೂರಕವಾಗಿರಬೇಕು ಎಂದರು.

ಕಲಾವಿದರಾದ ಸದಾಶಿವ ಪಾಟೀಲ ಹಾಗೂ ತಂಡದ ವತಿಯಿಂದ ನಾಡಗೀತೆ ಹಾಗೂ ಸುಗಮ ಸಂಗೀತ ಕಾರ್ಯಕ್ರಮ ನಡೆಯಿತು. ನಿವೃತ್ತ ಪ್ರಾಚಾರ್ಯ ಸಿ.ವಿ. ಜಡಿಯವರ ನಿರೂಪಿಸಿದರು.

ಬಿಜೆಪಿ ಮುಖಂಡ ಸಿ.ವಿ.ಚಂದ್ರ ಶೇಖರ, ಕಾಂಗ್ರೆಸ್ ಮುಖಂಡ ಎಸ್‌.ಬಿ.ನಾಗರಳ್ಳಿ, ಸಹಾಯಕ ಆಯುಕ್ತರಾದ ಬಸವಣಪ್ಪ ಕಲಶೆಟ್ಟಿ, ತಹಶೀಲ್ದಾರ್ ವಿಠ್ಠಲ್ ಚೌಗಲೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರೇಶ ಮರಬನಳ್ಳಿ, ಗವಿಸಿದ್ದಪ್ಪ ಕರಡಿ, ಸಮಾಜದಜಿಲ್ಲಾ ಅಧ್ಯಕ್ಷ ಜಗದೀಶಪ್ಪ ಸಿಂಗನಾಳ, ತಾಲ್ಲೂಕು ಅಧ್ಯಕ್ಷ ಪ್ರಭು ಹೆಬ್ಬಾಳ, ಎಚ್.ಎಲ್.ಹಿರೇಗೌಡರ್, ಪ್ರದೀಪ ಗೌಡ ಮಾಲೀಪಾಟೀಲ, ಸಂಧ್ಯಾ ಮಾದಿನೂರ, ವೆಂಕನಗೌಡ ಹಿರೇಗೌಡ್ರ, ಎಂ.ಮಂಜುನಾಥ ಇದ್ದರು.

‘ಮಲ್ಲಮ್ಮ ಆದರ್ಶ ಪಾಲಿಸಿ’

ಕಾರಟಗಿ: ಪಟ್ಟಣದ ವಿವಿಧೆಡೆ ಶಿವಶರಣೆ ಹೇಮರಡ್ಡಿ ಮಲ್ಲಮ ಜಯಂತಿಯನ್ನು ಮಂಗಳವಾರ ಸಂಭ್ರಮದಿಂದ ಆಚರಿಸಲಾಯಿತು.

ಬಿಜೆಪಿ ಕಚೇರಿ: ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಹೇಮರಡ್ಡಿ ಮಲ್ಲಮ್ಮ ಜಯಂತಿಯಂದು ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು.

ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಮಂಜುನಾಥ ಮಸ್ಕಿ ಮಾತನಾಡಿ, ಸಂಸಾರ ಮತ್ತು ಸಮಾಜಕ್ಕಾಗಿ ಹೇಮರಡ್ಡಿ ಮಲ್ಲಮ್ಮ ಅವರ ತೋರಿದ ಆದರ್ಶಗಳು ಸರ್ವಕಾಲಕ್ಕೂ
ಮಾದರಿಯಾಗಿವೆ ಎಂದರು.

ಪ್ರಮುಖರಾದ ಸತ್ಯನಾರಾಯಣ ಕುಲ್ಕರ್ಣಿ, ರಮೇಶ ಹುಳ್ಕಿಹಾಳ, ಸೋಮನಾಥ ಉಡುಮಕಲ್, ಮಂಜುನಾಥ ನಾಯಕ, ಬಸವರಾಜ ಅಂಗಡಿ, ಶಶಿ ಮೇದಾರ ಇದ್ದರು.

ಪುರಸಭೆ ಕಚೇರಿಯಲ್ಲಿ ಹೇಮರಡ್ಡಿ ಮಲ್ಲಮ್ಮ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಮುಖ್ಯಾಧಿಕಾರಿ ರೆಡ್ಡಿರಾಯನಗೌಡ, ಹೇಮರಡ್ಡಿ ಮಲ್ಲಮ್ಮ ಅವರ ಭಕ್ತಿ ಮತ್ತು ಕಾಯಕದಿಂದ ಹೆಸರಾಗಿದ್ದಾರೆ ಎಂದರು.

ಪುರಸಭೆ ವ್ಯವಸ್ಥಾಪಕ ಪರಮೇಶ್ವರಪ್ಪ, ಲೆಕ್ಕಾಧಿಕಾರಿ ನಾಗರಾಜ, ಸಿಬ್ಬಂದಿ ಸುಮಾ ಕಂಚಿ, ನಾಗೇಶ, ಪುಷ್ಪಾ, ಮಲ್ಲಮ್ಮ, ರೈತ ಮುಖಂಡ ಮರಿಯಪ್ಪ ಸಾಲೋಣಿ ಇದ್ದರು.

ಇಲ್ಲಿನ 13ನೇ ವಾರ್ಡ್‌ನ ಹೇಮರಡ್ಡಿ ಮಲ್ಲಮ್ಮ ವೃತ್ತದಲ್ಲಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಮಾಲಾರ್ಪಣೆ ಮಾಡಲಾಯಿತು.

‘ನಾರಿಯರಿಗೆ ಮಲ್ಲಮ್ಮ ಮಾದರಿ’

ಕುಷ್ಟಗಿ: ಪಟ್ಟಣ ಸೇರಿದಂತೆ ತಾಲ್ಲೂಕಿನ ವಿವಿಧೆಡೆ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಜಯಂತಿ ಮಂಗಳವಾರ ಆಚರಿಸಲಾಯಿತು.

ತಹಶೀಲ್ದಾರ್‌ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕ ಅಮರೇಗೌಡ ಬಯ್ಯಾಪುರ ಅವರು ಮಲ್ಲಮ್ಮ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ಅವರು, ನಾರಿಯರಿಗೆ ಮಾದರಿಯಾದ ಹೇಮರಡ್ಡಿ ಮಲ್ಲಮ್ಮ ಅವರ ತತ್ವ ಮತ್ತು ಆದರ್ಶಗಳನ್ನು ಅಳವಡಿಸಿಕೊಳ್ಳೋಣ ಎಂದರು.

ತಹಶೀಲ್ದಾರ್‌ ಎಂ.ಸಿದ್ದೇಶ್‌, ಗ್ರೇಡ್‌–2 ತಹಶೀಲ್ದಾರ್ ಮುರಳೀಧರ ಮುಕ್ತೆದಾರ, ಕ್ಷೇತ್ರ ಶಿಕ್ಷಣಾಧಿಕಾರಿ ಸುರೇಂದ್ರ ಕಾಂಬಳೆ, ಪ್ರಮುಖರಾದ ಶೇಖರಗೌಡ ಮಾಲಿಪಾಟೀಲ, ನಿವೃತ್ತ ಎಂಜಿನಿಯರ್ ಎಸ್‌.ಕೆ.ಪಾಟೀಲ ಇದ್ದರು.

ಬಂಡರಗಲ್ ಗ್ರಾಮದಲ್ಲಿ ನಡೆದ ಹೇಮರಡ್ಡಿ ಮಲ್ಲಮ್ಮ ಜಯಂತಿ ಕಾರ್ಯಕ್ರಮದಲ್ಲಿ ದೊಡ್ಡಬಸವನಗೌಡ ಬಯ್ಯಾಪುರ, ಮಹಾಂತೇಶ ಅಗಸಿಮುಂದಿನ, ಸುರೇಶ ಕುಂಟನಗೌಡ್ರ, ಜಿ.ಪಂ ಮಾಜಿ ಸದಸ್ಯ ನೇಮಣ್ಣ ಮೇಲಸಕ್ರಿ, ಬಸವರಾಜ ಹಡಪದ, ರಂಗಪ್ಪ ವಣಗೇರಿ, ಬಸನಗೌಡ ಪಾಟೀಲ, ಬಾಲನಗೌಡ ಪಾಟೀಲ, ಶರಣಪ್ಪ ತಳವಾರ, ಹನುಮಪ್ಪ ವಣಗೇರಿ, ಬಸವರಾಜ ವಣಗೇರಿ, ರೈತ ಸಂಘದ ಅಧ್ಯಕ್ಷ ಮರಿಲಿಂಗಪ್ಪ ಮೇಟಿ, ಶರಣಪ್ಪ ಗೌಡ್ರ, ಸೋಮನಗೌಡ ಪಾಟೀಲ, ಸೋಮಪ್ಪ ಹಡಪದ, ಪರಸಪ್ಪ ಚಳಗೇರಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.