ADVERTISEMENT

ಅಕ್ರಮ ಕಲ್ಲು ಗಣಿಗಾರಿಕೆ: ಲಾರಿ, ಟ್ರ್ಯಾಕ್ಟರ್ ವಶಕ್ಕೆ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2021, 7:19 IST
Last Updated 14 ಸೆಪ್ಟೆಂಬರ್ 2021, 7:19 IST
ಗಂಗಾವತಿ ತಾಲ್ಲೂಕಿನ ಮಲ್ಲಾಪುರ ಗ್ರಾಮದಲ್ಲಿ ಆಕ್ರಮವಾಗಿ ದ್ರಾಕ್ಷಿ ತೋಟದ ಬಳಕೆ ಬೇಕಾಗುವ ಕಲ್ಲು ಕಂಬಗಳನ್ನು ಸಾಗಾಟ ಮಾಡುತ್ತಿರುವ ಲಾರಿ, ಟ್ರಾಕ್ಟರ್ ಮೇಲೆ ತಹಶೀಲ್ದಾರರ ತಂಡ ದಾಳಿ ನಡೆಸಿ, ವಶಪಡಿಸಿಕೊಂಡಿವೆ.
ಗಂಗಾವತಿ ತಾಲ್ಲೂಕಿನ ಮಲ್ಲಾಪುರ ಗ್ರಾಮದಲ್ಲಿ ಆಕ್ರಮವಾಗಿ ದ್ರಾಕ್ಷಿ ತೋಟದ ಬಳಕೆ ಬೇಕಾಗುವ ಕಲ್ಲು ಕಂಬಗಳನ್ನು ಸಾಗಾಟ ಮಾಡುತ್ತಿರುವ ಲಾರಿ, ಟ್ರಾಕ್ಟರ್ ಮೇಲೆ ತಹಶೀಲ್ದಾರರ ತಂಡ ದಾಳಿ ನಡೆಸಿ, ವಶಪಡಿಸಿಕೊಂಡಿವೆ.   

ಗಂಗಾವತಿ: ತಾಲ್ಲೂಕಿನ ಮಲ್ಲಾಪುರ ಗ್ರಾಮದಲ್ಲಿ ಅಕ್ರಮಕಲ್ಲು ಸಾಗಾಟ ಮಾಡುತ್ತಿರುವ ಲಾರಿ ಮತ್ತು ಟ್ರ್ಯಾಕ್ಟರ್ ಅನ್ನು ತಹಶೀಲ್ದಾರ್ ನೇತೃತ್ವದಲ್ಲಿನ ತಂಡ ಸೋಮವಾರ ಬೆಳಿಗ್ಗೆ 2.30ಕ್ಕೆ ವಶಕ್ಕೆ ಪಡೆದಿದೆ.

ಮಲ್ಲಾಪುರ ಗ್ರಾಮದ ಸುತ್ತಮುತ್ತ ಅಕ್ರಮ ಗಣಿಗಾರಿಕೆ ನಡೆಯುವ ಕುರಿತು ತಹಶೀಲ್ದಾರ್ ಯು.ನಾಗರಾಜ ಅವರ
ಗಮನಕ್ಕೆ ಬಂದಿತ್ತು. ಈ ಕುರಿತು ಹಲವು ಬಾರಿ ಟ್ರ್ಯಾಕ್ಟರ್‌ಗಳ ಮೇಲೆ ದಾಳಿ ನಡೆಸಿ, ಪ್ರಕರಣಗಳನ್ನು ದಾಖಲಿಸಲಾಗಿತ್ತು.

ಈ ಭಾಗದಲ್ಲಿ ಕೆಲವರು ಕದ್ದು ಮುಚ್ಚಿ, ದ್ರಾಕ್ಷಿ ಬೆಳೆ ತೋಟಗಳ ಬಳಕೆ ಬೇಕಾಗುವ ಕಲ್ಲು ಕಂಬಗಳನ್ನು ಆಕ್ರಮವಾಗಿ ಸಾಗುತ್ತಿದ್ದರು. ಈ ಕುರಿತು ಖಚಿತ ಮಾಹಿತಿ ಪಡೆದ ಅಧಿಕಾರಿಗಳ ತಂಡ ಏಕಾಏಕಿ ವಾಹನಗಳ ಮೇಲೆ ದಾಳಿ ನಡೆಸಿದೆ. ಈ ಸಂದರ್ಭದಲ್ಲಿ ವಾಹನಗಳ ಚಾಲಕರು ಪರಾರಿಯಾಗಿದ್ದು, ಒಂದು ಲಾರಿ ಮತ್ತು ಟ್ರ್ಯಾಕ್ಟರ್ ಅನ್ನು ವಶಕ್ಕೆ ಪಡೆದು ಮುಂದಿನ ಕಾನೂನು ಕ್ರಮಕ್ಕೆ ನಗರ ಪೋಲಿಸ್ ಠಾಣೆಗೆ ಒಪ್ಪಿಸಲಾಗಿದೆ. ಈ ಕುರಿತು ಪ್ರಕರಣ ದಾಖಲಿಸಲಾಗಿದೆ.

ADVERTISEMENT

ತಹಶೀಲ್ದಾರ್ ಯು.ನಾಗರಾಜ, ಕಂದಾಯ ನೀರಿಕ್ಷಕ ಮಂಜುನಾಥ ಹಿರೇಮಠ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.