ADVERTISEMENT

SSLC Result 2025 | ಬೇವೂರು: ಶೇ 96ರಷ್ಟು ಸಾಧನೆ 

​ಪ್ರಜಾವಾಣಿ ವಾರ್ತೆ
Published 3 ಮೇ 2025, 14:30 IST
Last Updated 3 ಮೇ 2025, 14:30 IST
ನಂದಿತಾ ಕುರ್ತಕೋಟಿ
ನಂದಿತಾ ಕುರ್ತಕೋಟಿ   

ಯಲಬುರ್ಗಾ: ತಾಲ್ಲೂಕಿನ ಬೇವೂರು ಗ್ರಾಮದ ಹಿಂದುಳಿದ ವರ್ಗಗಳ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಎಸ್‍ಎಸ್‍ಎಲ್‍ಸಿ ವಾರ್ಷಿಕ ಫಲಿತಾಂಶ ಶೇ 96ರಷ್ಟು ದಾಖಲಾಗಿದೆ.

ಒಟ್ಟು ಹಾಜರಾಗಿದ್ದ 50 ವಿದ್ಯಾರ್ಥಿಗಳ ಪೈಕಿ 48 ವಿದ್ಯಾರ್ಥಿಗಳು ವಿವಿಧ ಶ್ರೇಣಿಯಲ್ಲಿ ಪಾಸಾಗಿದ್ದಾರೆ. ಈ ಪೈಕಿ 31 ವಿದ್ಯಾರ್ಥಿಗಳು ಅತ್ಯುತ್ತಮ ಶ್ರೇಣಿ, 15 ಪ್ರಥಮ ಶ್ರೇಣಿ, ಇಬ್ಬರು ದ್ವಿತೀಯ ಶ್ರೇಣಿಯಲ್ಲಿ ಪಾಸಾಗಿದ್ದಾರೆ.

ನಂದಿತಾ ಕುರ್ತಕೋಟಿ ಶೇ 98.24, ಕೇದಾರನಾಥ ಹಿರೇಮಠ ಶೇ 97.76, ರಾಜೇಶ ಬೈಲಪತ್ತಾರ ಶೇ 96.80ರಷ್ಟು ಅಂಕ ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ ಎಂದು ಪ್ರಾಚಾರ್ಗೆ ಲಕ್ಷ್ಮಿ ಮಿಸ್ಕಿನ್ ತಿಳಿಸಿದ್ದಾರೆ.

ADVERTISEMENT
ಕೇದಾರನಾಥ ಹಿರೇಮಠ 
ರಾಜೇಶ ಬೈಲಪತ್ತಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.