ADVERTISEMENT

ಚನ್ನಮ್ಮ ದೇಶ ಕಂಡ ದಿಟ್ಟ ಮಹಿಳೆ: ಮಹಾಂತೇಶ ಸಜ್ಜನ್

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2020, 16:22 IST
Last Updated 8 ನವೆಂಬರ್ 2020, 16:22 IST
ಕನಕಗಿರಿಯ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಕಿತ್ತೂರು ರಾಣಿ ಚನ್ನಮ್ಮ ಜಯಂತಿ ಆಚರಿಸಲಾಯಿತು
ಕನಕಗಿರಿಯ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಕಿತ್ತೂರು ರಾಣಿ ಚನ್ನಮ್ಮ ಜಯಂತಿ ಆಚರಿಸಲಾಯಿತು   

ಕನಕಗಿರಿ: ಪಟ್ಟಣದ ನವಲಿ ರಸ್ತೆಯಲ್ಲಿರುವ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಕಿತ್ತೂರು ರಾಣಿ ಚನ್ನಮ್ಮ ಜಯಂತಿ ಆಚರಿಸಲಾಯಿತು.

ಬಿಜೆಪಿ ಮಂಡಲ ಅಧ್ಯಕ್ಷ ಮಹಾಂತೇಶ ಸಜ್ಜನ್ ಮಾತನಾಡಿ,‘ದೇಶದ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ ಮಹಿಳೆಯರಲ್ಲಿ ಕಿತ್ತೂರು ರಾಣಿ ಚನ್ನಮ್ಮ ಕೂಡ ಒಬ್ಬರು. ಅವರು ವೀರವನಿತೆಯಾಗಿದ್ದರು. ತಮ್ಮ ಜೀವನ ಇರುವವರೆಗೂ ಬ್ರಿಟಿಷರಿಗೆ ಸಿಂಹ ಸ್ವಪ್ನವಾಗಿ ಕಾಡಿದರು’ ಎಂದು ಸ್ಮರಿಸಿದರು.

ಪ್ರಧಾನ ಕಾರ್ಯದರ್ಶಿ ವಾಗೀಶ ಹಿರೇಮಠ ಮಾತನಾಡಿದರು.

ADVERTISEMENT

ಬಿಜೆಪಿ ಎಸ್ಸಿ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ಸಣ್ಣ ಕನಕಪ್ಪ, ಪಟ್ಟಣ ಪಂಚಾಯಿತಿ ಸದಸ್ಯರಾದ ರವೀಂದ್ರ ಸಜ್ಜನ್, ಸುಭಾಸ ಕಂದಕೂರ, ಪ್ರಮುಖರಾದ ಶರಣಪ್ಪ ಭಾವಿಕಟ್ಟಿ, ಕೀರ್ತಿ ಸೋನಿ, ಶಿವಪ್ಪ ಕಲ್ಮನಿ, ಶಿವಾನಂದ ವಂಕಲಕುಂಟಿ, ರಂಗಪ್ಪ ಕೊರಗಟಗಿ, ರಾಚಪ್ಪ ಬ್ಯಾಳಿ, ಪ್ರಕಾಶ ಹಾದಿಮನಿ, ಹರೀಶ ಪೂಜಾರ ಹಾಗೂ ಬಸವರಾಜ ಅಂಗಡಿ
ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.