ಯಲಬುರ್ಗಾ: ತಾಲ್ಲೂಕು ಕಟ್ಟಡ ಕಾರ್ಮಿಕ ಯೂನಿಯನ್ ಸಂಘಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಜರುಗಿತು.
ಪ್ರಕಾಶ ಉಂಗ್ರಾಣಿ(ಅಧ್ಯಕ್ಷ), ಹೊನ್ನೂರಸಾಬ ವಟಪರವಿ(ಉಪಾಧ್ಯಕ್ಷ), ಎಂ.ಡಿ. ಹುಸೇನಪಾಷಾ ಕಂಚಗಾರ(ಕಾರ್ಯದರ್ಶಿ), ಧರ್ಮಣ್ಣ ರಾಮಪ್ಪ ಛಲವಾದಿ(ಸಂಘಟನಾ ಕಾರ್ಯದರ್ಶಿ), ಮುತ್ತಪ್ಪ ಕುದ್ರಿಕೊಟಗಿ(ಸಹ ಕಾರ್ಯದರ್ಶಿ), ಡಿ.ಕೆ. ರವಿಚಂದ್ರ(ಸಂಘಟನಾ ಕಾರ್ಯದರ್ಶಿ), ಕಾರ್ಯಕಾರಿ ಮಂಡಳಿ ಸದಸ್ಯರನ್ನಾಗಿ ಮಲ್ಲಪ್ಪ ಸೂರಕೊಡ ಸೇರಿ ಅನೇಕರು ಆಯ್ಕೆಯಾದರು.
ಅಭಿವೃದ್ಧಿಗೆ ಶ್ರಮ: ‘ಈ ಹಿಂದಿನ ಅಧ್ಯಕ್ಷರು ಸಂಘವನ್ನು ಉತ್ತಮ ರೀತಿಯಲ್ಲಿ ಬಲಪಡಿಸಿರುವ ರೀತಿಯಲ್ಲಿ ಮುಂದೆಯೂ ಸಂಘವನ್ನು ಸರ್ವ ಸದಸ್ಯರ ವಿಶ್ವಾಸ ಮತ್ತು ಸಲಹೆ ಸೂಚನೆಗಳನ್ನು ಪಡೆದು ಅಭಿವೃದ್ಧಿಗೊಳಿಸಲು ಶ್ರಮಿಸುತ್ತೇನೆ’ ಎಂದು ನೂತನ ಅಧ್ಯಕ್ಷ ಪ್ರಕಾಶ ಉಂಗ್ರಾಣಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.