ADVERTISEMENT

ಕೊಪ್ಪಳ: ‘ಮಾತೃ ಭಾಷೆ ನಮ್ಮೆಲ್ಲರ ಭಾವನೆ’

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2022, 16:35 IST
Last Updated 26 ಆಗಸ್ಟ್ 2022, 16:35 IST
ಕೊಪ್ಪಳದಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ಸಾಧಕ ವಿದ್ಯಾರ್ಥಿಯನ್ನು ಸನ್ಮಾನಿಸಲಾಯಿತು
ಕೊಪ್ಪಳದಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ಸಾಧಕ ವಿದ್ಯಾರ್ಥಿಯನ್ನು ಸನ್ಮಾನಿಸಲಾಯಿತು   

ಕೊಪ್ಪಳ: ‘ವಿದ್ಯಾರ್ಥಿಗಳ ಹಾಗೂ ಶೈಕ್ಷಣಿಕ ಸಂಸ್ಥೆಗಳ ಉತ್ತಮ ಬಾಂಧವ್ಯಕ್ಕೆ ಸ್ನೇಹ ಸಮ್ಮೇಳನಗಳು ಅವಶ್ಯಕವಾಗಿವೆ’ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯ ಕುಲಸಚಿವ ಡಾ. ಎ. ಸುಬ್ಬಣ್ಣ ರೈ ಅಭಿಪ್ರಾಯಪಟ್ಟರು.

ನಗರದ ಗವಿಸಿದ್ಧೇಶ್ವರ ಪದವಿ ಕಾಲೇಜಿನಲ್ಲಿ ಈಚೆಗೆ ನಡೆದ ವಾರ್ಷಿಕ ಸ್ನೇಹ ಸಮ್ಮೇಳನ ಮತ್ತು ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಮಾತನಾಡಿ ‘ಹೊಸ ಶಿಕ್ಷಣ ನೀತಿಯು ವಿದ್ಯಾರ್ಥಿಗಳ ಸಮಗ್ರ ಅಭಿವೃದ್ಧಿಗೆ ಮಹತ್ವದ ಹೆಜ್ಜೆಯಾಗಿದೆ. ವಿದ್ಯಾರ್ಥಿಗಳು ಮಾತೃಭಾಷೆಯ ಮಹತ್ವವನ್ನು ಅರಿಯಬೇಕು. ಮಾತೃ ಭಾಷೆಯು ನಮ್ಮೆಲ್ಲರ ಭಾವನೆಯಾಗಿದೆ’ ಎಂದರು.

ಪ್ರಾಚಾರ್ಯ ಡಾ. ಚನ್ನಬಸವ, ವಿಜಯನಗರ ಕೃಷ್ಣದೇವರಾಯ ವಿ.ವಿ. ಸಿಂಡಿಕೇಟ್ ಸದಸ್ಯ ಡಾ.ಬಸವರಾಜ ಪೂಜಾರ, ವಿದ್ಯಾರ್ಥಿ ಮಂಡಳಿಯ ಕಾರ್ಯಾಧ್ಯಕ್ಷ ಡಾ.ರಾಜು ಹೊಸಮನಿ, ಕ್ರೀಡಾ ವಿಭಾಗದ ಮುಖ್ಯಸ್ಥ ವಿನೋದ ಮುದಿಬಸನಗೌಡರಇದ್ದರು.

ADVERTISEMENT

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಆರ್.ಡಿ.ಸಿ. ಪರೇಡ್‍ನಲ್ಲಿ ಭಾಗವಹಿಸಿದ್ದ ಎನ್.ಸಿ.ಸಿ. ವಿದ್ಯಾರ್ಥಿನಿ ಪ್ರೀತಿ ಸಜ್ಜನ, ಸಿ.ಎ. ಫೌಂಡೇಷನ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ಕಿಶೋರ ಮತ್ತು ವಿಶಾಲ್ ಹಾಗೂ ಕೃಷ್ಣದೇವರಾಯ ವಿ.ವಿ.ಗೆ ನಾಲ್ಕನೇ ರ್‍ಯಾಂಕ್‌ ಪಡೆದ ರಶ್ಮಿ ಹಕ್ಕಂಡಿ ಅವರನ್ನು ಸನ್ಮಾನಿಸಲಾಯಿತು.

ವಿದ್ಯಾರ್ಥಿ ಮಂಡಳಿಯ ಪ್ರಧಾನ ಕಾರ್ಯದರ್ಶಿ ಸಂಗೀತಾ, ಉಪಪ್ರಾಚಾರ್ಯ ಡಾ. ಕರಿಬಸವೇಶ್ವರ ಬಿ, ಪ್ರಾಧ್ಯಾಪಕರಾದ ಡಾ. ದಯಾನಂದ ಸಾಳುಂಕೆ, ಮಹೇಶ ಬಿರಾದಾರ, ಪ್ರವೀಣ ಹಾದಿಮನಿ, ಡಾ. ಸುಂದರ ಮೇಟಿ, ಶ್ರೀದೇವಿ, ವೆಂಕಟೇಶ ನಾಯ್ಕ, ಶರಣಪ್ಪ ಚೌವ್ಹಾಣ, ಮಂಜುನಾಥ ಎಂ, ಕಳಕನಗೌಡ ಪಾಟೀಲ ಸೇರಿದಂತೆ ಅನೇಕರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.