ಯಲಬುರ್ಗಾ: ಸ್ಥಳೀಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಅಡಿ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕುಷ್ಟಗಿ ಕಾಲೇಜಿನ ಸಹ ಪ್ರಾಧ್ಯಾಪಕ ಅಶೋಕ ಕೆಂಚರಡ್ಡಿ ಮಾತನಾಡಿ, ‘ಮನುಕುಲದ ಉಳಿವು ಹಾಗೂ ಮುಂದಿನ ಪೀಳಿಗೆಗಾಗಿ ಪರಸರ ಸಂರಕ್ಷಣೆ ಅವಶ್ಯಕವಾಗಿದೆ. ನೈಸರ್ಗಿಕ ಸಂಪನ್ಮೂಲಗಳನ್ನು ಹಿತಮಿತದಲ್ಲಿ ಬಳಸಿಕೊಳ್ಳುವುದು, ಪರಸರ ಹಾಳಾಗಾದಂತೆ ಅಭಿವೃದ್ಧಿ ಕಾರ್ಯ ಕೈಗೊಳ್ಳುವುದು, ಹೆಚ್ಚೆಚ್ಚು ಸಸಿಗಳನ್ನು ನೆಟ್ಟು ಅವುಗಳ ಪೋಷಣೆಗೆ ಶ್ರಮಿಸುವುದು ಹೀಗೆ ಪರಿಸರವನ್ನು ಸಂರಕ್ಷಿಸಿ ಅಭಿವೃದ್ಧಿಗೆ ವಿಶೇಷ ಕಾಳಜಿಯನ್ನು ಪ್ರತಿಯೊಬ್ಬರು ನೋಡಿಕೊಳ್ಳಬೇಕಾಗಿದೆ’ ಎಂದರು.
ಎನ್‍ಎಸ್‍ಎಸ್ ಸಂಚಾಲಕ ಸಹಾಯಕ ಪ್ರಾಧ್ಯಾಪಕ ಹನುಮೇಶ ಮಾತನಾಡಿದರು.
ಸಹಾಯಕ ಪ್ರಾಧ್ಯಾಪಕ ವಿರೇಶ ಗಜೇಂದ್ರಗಡ, ವಿನೋದ ಸಿದ್ದಣ್ಣನವರ, ಮಾರ್ಕೆಂಡಯ್ಯ ಹಂದ್ರಾಳ, ಶಂಕರ ಬಂಡಿಹಾಳ, ರಮೇಶ ಗುಜ್ಜಾರ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.