ADVERTISEMENT

ಕೊಪ್ಪಳ: ಪ್ರವಾಸಿಗರಿಗೆ ರಕ್ಷಣೆ ಒದಗಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2020, 11:24 IST
Last Updated 12 ಅಕ್ಟೋಬರ್ 2020, 11:24 IST
ಡಾ.ಶಿವಕುಮಾರ್ ಮಾಲಿ ಪಾಟೀಲ
ಡಾ.ಶಿವಕುಮಾರ್ ಮಾಲಿ ಪಾಟೀಲ   

ಗಂಗಾವತಿ: ತಾಲ್ಲೂಕಿನ ಆನೆಗೊಂದಿ ಭಾಗದಲ್ಲಿ ಪ್ರವಾಸಿಗರಿಗೆ ಹಾಗೂ ಸ್ಥಳೀಯರಿಗೆ ಕಾಡುಪ್ರಾಣಿಗಳ ಆತಂಕ ಶುರುವಾಗಿದೆ. ಹಾಗಾಗಿ ಅರಣ್ಯ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆ ಸೂಕ್ತ ರಕ್ಷಣೆ ಒದಗಿಸಬೇಕು ಎಂದು ಚಾರಣ ಬಳಗದ ಸಂಚಾಲಕ ಡಾ.ಶಿವಕುಮಾರ್‌ ಮಾಲಿ ಪಾಟೀಲ ಒತ್ತಾಯಿಸಿದ್ದಾರೆ.

ಒಂದು ವಾರದಲ್ಲಿ ಆನೆಗೊಂದಿ ಭಾಗದಲ್ಲಿ ಎರಡು ಚಿರತೆ ದಾಳಿ ಘಟನೆಗಳು ನಡೆದಿವೆ. ಹಾಗಾಗಿ ರಕ್ಷಣೆ ಒದಗಿಸಬೇಕು. ಪ್ರಾಣಿಗಳು ಇರುವ ಕುರಿತು ಸೂಚನಾ ಫಲಕಗಳನ್ನು ಅಳವಡಿಸಬೇಕು ಎಂದರು.

ಪ್ರವಾಸಿ ತಾಣಗಳಿಗೆ ಕನಿಷ್ಠ ₹5 ಟಿಕೆಟ್ ಮಾಡಿದರೆ ಎಷ್ಟು ಜನರು ಬರುತ್ತಾರೆ. ಎಲ್ಲಿಂದ ಬಂದಿದ್ದರು ಎಂಬ ಮಾಹಿತಿ ಸಿಗಲಿದೆ ಎಂದು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.