ADVERTISEMENT

ರಾಯರ ಆರಾಧನೆ: ಸಂಗೀತ ಗೋಷ್ಠಿ

ಯತಿವರ್ಯರ ವೃಂದಾವನಗಳಿಗೆ ವಿಶೇಷ ಅಲಂಕಾರ

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2021, 5:23 IST
Last Updated 25 ಆಗಸ್ಟ್ 2021, 5:23 IST
ಕುಷ್ಟಗಿಯ ರಾಘವೇಂದ್ರಸ್ವಾಮಿ ಮಠದಲ್ಲಿ ರಕ್ಷಿತ್‌ ಕುಲಕರ್ಣಿ ಶಾಸ್ತ್ರೀಯ ಸಂಗೀತ ಪ್ರಸ್ತುತಪಡಿಸಿದರು
ಕುಷ್ಟಗಿಯ ರಾಘವೇಂದ್ರಸ್ವಾಮಿ ಮಠದಲ್ಲಿ ರಕ್ಷಿತ್‌ ಕುಲಕರ್ಣಿ ಶಾಸ್ತ್ರೀಯ ಸಂಗೀತ ಪ್ರಸ್ತುತಪಡಿಸಿದರು   

ಕುಷ್ಟಗಿ: ರಾಘವೇಂದ್ರ ಸ್ವಾಮಿಗಳ ಮಧ್ಯಾರಾಧನೆ ಪ್ರಯುಕ್ತ ಮಂಗಳವಾರ ಇಲ್ಲಿಯ ರಾಘವೇಂದ್ರಸ್ವಾಮಿ ಮಠದಲ್ಲಿ ಸಂಗೀತ ಕಾರ್ಯಕ್ರಮ ನಡೆಯಿತು.

ಧಾರವಾಡದ ರಕ್ಷಿತ್ ಕುಲಕರ್ಣಿ ಅವರು ವಿವಿಧ ರಾಗಗಳಲ್ಲಿ ಶಾಸ್ತ್ರೀಯ ಗಾಯನ, ಸುಗಮ ಸಂಗೀತ ಮತ್ತು ದಾಸರ ಪದಗಳನ್ನು ಪ್ರಸ್ತುತಪಡಿಸಿ ಸಂಗೀತಾಸಕ್ತರ ಮನ ಮುದಗೊಳಿಸಿದರು.

ಜಯತೀರ್ಥ ಪಂಚಮುಖಿ ತಬಲಾ, ವಿನೋದ ಪಾಟೀಲ ಹಾರ್ಮೋನಿಯಂ ಮತ್ತು ಸಂತೋಷ ಅಳವಂಡಿ ತಾಳವಾದ್ಯ ಸಹ ಕಲಾವಿದರಾಗಿ ಸೇವೆ ಸಲ್ಲಿಸಿದರು.

ADVERTISEMENT

ವಾದಿರಾಜ ಪೂಜಾರ, ಶ್ರೀಧರಾಚಾರ ಪುರಾಣಿಕ ಅವರು ರಾಘವೇಂದ್ರಸ್ವಾಮಿ ಮತ್ತು ಜಯತೀರ್ಥ ಯತಿಗಳ ವೃಂದಾವನಗಳಿಗೆ ವಿಶೇಷ ಅಲಂಕಾರ ನೆರವೇರಿಸಿದರು.

ಭಜನಾ ಮಂಡಳಿ ಸದಸ್ಯರಿಂದ ಭಜನೆ, ಪಲ್ಲಕ್ಕಿ ಸೇವೆ, ಸ್ವಸ್ತಿ ವಾಚನ, ವಿಶೇಷ ಮಹಾಮಂಗಳರಾತಿ ಸೇರಿ ವಿವಿಧ ಧಾರ್ಮಿಕ ಆಚರಣೆಗಳು ನಡೆದವು.

ಈ ಸಂದರ್ಭದಲ್ಲಿ ರಾಘವೇಂದ್ರ ಸ್ವಾಮಿ ಆರಾಧಾನೆ ಮಹೋತ್ಸವದ ಪ್ರಮುಖರಾದ ತಿಮ್ಮಪ್ಪಯ್ಯ ದೇಸಾಯ, ಪ್ರಹ್ಲಾದಾಚಾರ ಸೌದಿ, ಕೃಷ್ಣ ಆಶ್ರೀತ, ರಾಮಾಚಾರ ಪುರಾಣಿಕ, ಭೀಮಸೇನ ಹಯಗ್ರೀವ, ಅಡವಿರಾವ ತಿಕೋಟಿಕರ, ಶ್ರೀನಿವಾಸಾಚಾರ ಆಚಾರ, ಪ್ರಹ್ಲಾದಾಚಾರ ಆಚಾರ ಮತ್ತು ಭಜನಾ ಮಂಡಳಿಯ ಸದಸ್ಯರು ಸೇರಿ ಹಲವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.