ಕುಕನೂರು: ಪಟ್ಟಣ ಸೇರಿದಂತೆ ರಾಜೂರು, ಆಡೂರು, ಮಸಬ ಹಂಚಿನಾಳ ಸುತ್ತಮುತ್ತ ಗುರುವಾರ ಮಧ್ಯಾಹ್ನ ಎರಡೂವರೆ ತಾಸು ಧಾರಾಕಾರ ಮಳೆ ಸುರಿದಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.
ಮಧ್ಯಾಹ್ನ 2.30ಕ್ಕೆ ಆರಂಭವಾದ ಮಳೆ 3 ಗಂಟೆಗೂ ಹೆಚ್ಚು ಕಾಲ ಸುರಿಯಿತು. ಹರಿಶಂಕರ ಬಂಡಿ ಗುದ್ನೆಪ್ಪನ ಮಠ, ಗೊರ್ಲೆಕೊಪ್ಪ, ರಾಜೂರು ಮುಂತಾದ ಕಡೆಗಳಲ್ಲಿ ಧಾರಾಕಾರ ಮಳೆಯಿಂದ ಹೊಲದಲ್ಲಿ ನೀರು ಜಮಾವನೆ ಗೊಂಡಿದೆ. ಒಂದುವರೆ ತಿಂಗಳಿಂದ ಮಳೆಯನ್ನು ಕಾಯುತ್ತಿದ್ದ ರೈತ ಬಾಡುತ್ತಿದ್ದ ಬೆಳೆಗಳಿಗೆ ಜೀವ ತುಂಬಿದಂತಾಗಿದೆ.
ಪಟ್ಟಣದ ಚರಂಡಿಗಳು ತುಂಬಿ ರಸ್ತೆಯ ಮೇಲೆ ನೀರು ಹರಿದಿದ್ದು, ವಿದ್ಯಾರ್ಥಿಗಳಿಗೆ ಬಹಳಷ್ಟು ತೊಂದರೆ ಅನುಭವಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.