ಅಳವಂಡಿ: ಹೋಬಳಿ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ 10 ನಿಮಿಷಕ್ಕೂ ಹೆಚ್ಚು ಕಾಲ ಗಾಳಿ ಸಹಿತ ಮಳೆ ಸುರಿಯಿತು.
ಬೆಳಿಗ್ಗೆಯಿಂದ ವಿಪರೀತ ಬಿಸಿಲು ಮತ್ತು ಧಗೆಯ ವಾತಾವರಣದಿಂದ ತತ್ತರಿಸಿದ್ದ ಜನರಿಗೆ ಮಳೆ ತಂಪೆರೆಯಿತು.
ಕೆಲಹೊತ್ತು ಸುರಿದ ಮಳೆ ತಕ್ಷಣ ನಿಂತಿತು. ಜೋಳ, ಕಡಲೆ, ಗೋಧಿ, ಹತ್ತಿ ಸೇರಿದಂತೆ ವಿವಿಧ ಬೆಳೆಗಳ ಕೊಯ್ಲು ಮುಗಿದಿದ್ದು, ಜಮೀನುಗಳನ್ನು ಹರಗಿ ಹದ ಮಾಡಿಟ್ಟದ್ದ ರೈತರಿಗೆ ಮಳೆಯಿಂದ ಸ್ವಲ್ಪ ಅನುಕೂಲವಾಯಿತು.
ಈ ವರ್ಷದಲ್ಲಿ ಉತ್ತಮ ಮಳೆ ಬರುವ ನಿರೀಕ್ಷೆ ಮೂಡಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.