ADVERTISEMENT

ವಿಜೃಂಭಣೆಯ ಮಹಾರಥೋತ್ಸವ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2019, 10:20 IST
Last Updated 27 ಡಿಸೆಂಬರ್ 2019, 10:20 IST
ಯಲಬುರ್ಗಾ ತಾಲ್ಲೂಕು ಸಂಗನಾಳ ಗ್ರಾಮದ ಸಂಗಮೇಶ್ವರ ಜಾತ್ರೆಯ ಪ್ರಯುಕ್ತ ಮಹಾ ರಥೋತ್ಸವ ಈಚೆಗೆ ಜರುಗಿತು
ಯಲಬುರ್ಗಾ ತಾಲ್ಲೂಕು ಸಂಗನಾಳ ಗ್ರಾಮದ ಸಂಗಮೇಶ್ವರ ಜಾತ್ರೆಯ ಪ್ರಯುಕ್ತ ಮಹಾ ರಥೋತ್ಸವ ಈಚೆಗೆ ಜರುಗಿತು   

ಯಲಬುರ್ಗಾ: ತಾಲ್ಲೂಕಿನ ಸಂಗನಾಳ ಗ್ರಾಮದ ಸಂಗಮೇಶ್ವರ ದೇವರ ಮಹಾ ರಥೋತ್ಸವ ಈಚೆಗೆ ವಿಜೃಂಭಣೆಯಿಂದ ಜರುಗಿತು.

ಬೆಳಿಗ್ಗೆ ದೇವಸ್ಥಾನದಲ್ಲಿ ವಿಶೇಷ ಪೂಜೆ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.

ಯಲಬುರ್ಗಾ, ಕುಕನೂರು, ಕಲ್ಲೂರು, ರಾಜೂರ, ಹಾಳಕೇರಿ, ಕೊಪ್ಪಳ, ಮಂಗಳೂರು ಸೇರಿ ವಿವಿಧ ಭಾಗಗಳ ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.

ADVERTISEMENT

ದೇವಸ್ಥಾನದ ಆವರಣದಿಂದ ಪಾದಗಟ್ಟೆವರೆಗೆ ತೆರಳಿದ ರಥಕ್ಕೆ ಭಕ್ತರು ಉತ್ತತ್ತಿ, ಬಾಳೆಹಣ್ಣು ಎಸೆದು ಭಕ್ತಿಯನ್ನು ಸಮರ್ಪಿಸಿದರು.

ಕುಕನೂರಿನ ಮಹಾದೇವ ದೇವರು, ಗಣ್ಯರಾದ ಬಸವರಾಜ ಗಡಾದ, ನಿರ್ಮಲ ತಳವಾರ, ಸೋಮಪ್ಪ ಜೋಗಣ್ಣವರ, ಶ್ರೀಶೈಲ ತಳವಾರ, ರಾಮಣ್ಣ, ಗವಿಸಿದ್ದಯ್ಯ ಗಂಧದ, ಶೇಖರ ಗುರಾಣಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.