ADVERTISEMENT

ಗಂಗಾವತಿ: ನಡುಗಡ್ಡೆಯಲ್ಲಿ ಸಿಲುಕಿದ್ದವರ ರಕ್ಷಣೆ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2022, 8:09 IST
Last Updated 12 ಆಗಸ್ಟ್ 2022, 8:09 IST
ರಕ್ಷಣಾ ಕಾರ್ಯಾಚರಣೆ
ರಕ್ಷಣಾ ಕಾರ್ಯಾಚರಣೆ   

ಗಂಗಾವತಿ (ಕೊಪ್ಪಳ): ಗಂಗಾವತಿ ತಾಲ್ಲೂಕಿನ ದೇವಘಾಟ್ ಸಮೀಪದ ನಡುಗಡ್ಡೆಯಲ್ಲಿ ಗುರುವಾರ ಸಿಲುಕಿದ್ದ ಇಬ್ಬರು ಕುರಿಗಾರರನ್ನು ಶುಕ್ರವಾರ ಸುರಕ್ಷಿತ ಪ್ರದೇಶಕ್ಕೆ ಕರೆದುಕೊಂಡು ಬರಲಾಗಿದೆ.

ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಗುರುವಾರ ಸಂಜೆಯಿಂದ ಕಾರ್ಯಾಚರಣೆ ನಡೆಸಿ ಶುಕ್ರವಾರ ಬೆಳಿಗ್ಗೆ ಅವರನ್ನು ಕರೆ ತಂದರು. ಜೊತೆಗೆ 120 ಮೇಕೆಗಳು ಎರಡು ನಾಯಿ ಮತ್ತು ಒಂದು ಹಸು ರಕ್ಷಣೆ ಮಾಡಲಾಗಿದೆ.

ದೇವಘಾಟ್‌ನಲ್ಲಿ ಕುರಿ ಮೇಯಿಸಲು ಹೋಗಿದ್ದ ಗಂಗಾವತಿ ತಾಲ್ಲೂಕಿನ ವಿರುಪಾಪುರ ಗ್ರಾಮದ ಹನುಮಂತಪ್ಪ, ಹನುಮೇಶ ನಡುಗಡ್ಡೆಯಲ್ಲಿ ಸಿಲುಕಿದ್ದರು. ನೀರು ಕಡಿಮೆಯಿದ್ದಾಗ ಹತ್ತು ದಿನಗಳ ಹಿಂದೆ ಈ ಕುರಿಗಾರರು ದೇವಘಾಟ್‌ಗೆ ಹೋಗಿದ್ದರು. ಜಿಲ್ಲಾ ಅಗ್ನಿಶಾಮಕ ದಳದ ಠಾಣಾಧಿಕಾರಿ ಜಿ. ಕೃಷ್ಣೋಜಿ ಕಾರ್ಯಾಚರಣೆ ನೇತೃತ್ವ ವಹಿಸಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.