ADVERTISEMENT

ಹೊಸಪೇಟೆ ಕಾಲೇಜಿಗೆ ಪ್ರಥಮ ಬಹುಮಾನ

ರಾಜ್ಯಮಟ್ಟದ ವಿಜ್ಞಾನ ವಸ್ತುಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 5 ಜನವರಿ 2019, 14:42 IST
Last Updated 5 ಜನವರಿ 2019, 14:42 IST
ಕೊಪ್ಪಳದ ಗವಿಸಿದ್ಧೇಶ್ವರ ಕಾಲೇಜಿನಲ್ಲಿ ಶನಿವಾರ  ಹಮ್ಮಿಕೊಂಡಿದ್ದ ರಾಜ್ಯಮಟ್ಟದ ವಿಜ್ಞಾನ ವಸ್ತುಪ್ರದರ್ಶನ ಸಮಾರೋಪ ಸಮಾರಂಭದಲ್ಲಿ ವಿಜೇತ ವಿದ್ಯಾರ್ಥಿಗಳ ತಂಡಕ್ಕೆ ವಿಧಾನ ಪರಿಷತ್ ಸದಸ್ಯ ಎಸ್‌.ವಿ.ಸಂಕನೂರ ಬಹುಮಾನ ವಿತರಿಸಿದರು
ಕೊಪ್ಪಳದ ಗವಿಸಿದ್ಧೇಶ್ವರ ಕಾಲೇಜಿನಲ್ಲಿ ಶನಿವಾರ  ಹಮ್ಮಿಕೊಂಡಿದ್ದ ರಾಜ್ಯಮಟ್ಟದ ವಿಜ್ಞಾನ ವಸ್ತುಪ್ರದರ್ಶನ ಸಮಾರೋಪ ಸಮಾರಂಭದಲ್ಲಿ ವಿಜೇತ ವಿದ್ಯಾರ್ಥಿಗಳ ತಂಡಕ್ಕೆ ವಿಧಾನ ಪರಿಷತ್ ಸದಸ್ಯ ಎಸ್‌.ವಿ.ಸಂಕನೂರ ಬಹುಮಾನ ವಿತರಿಸಿದರು   

ಕೊಪ್ಪಳ: ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕಾಲೇಜು ಶಿಕ್ಷಣ ಇಲಾಖೆ ಸಹಯೋಗದಲ್ಲಿಶನಿವಾರ ನಗರದ ಗವಿಸಿದ್ಧೇಶ್ವರ ಕಾಲೇಜಿನಲ್ಲಿ ರಾಜ್ಯದ ಪದವಿ ವಿಜ್ಞಾನ ಕಾಲೇಜಿನ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ವಿಜ್ಞಾನ ವಸ್ತು ಪ್ರದರ್ಶನದಲ್ಲಿಹೊಸಪೇಟೆಯ ವಿಜಯನಗರಕಾಲೇಜಿನ ಕಾವ್ಯಾ ಕೆ., ಮತ್ತು ಚೈತ್ರಾ ಟಿ ಅವರ ವಿಜ್ಞಾನ ಮಾದರಿಗೆ ಪ್ರಥಮ ಬಹುಮಾನ (10 ಸಾವಿರ ನಗದು)ಲಭಿಸಿತು.

ರಾಜ್ಯದ ಆರು ವಿಭಾಗಗಳಿಂದ ವಿವಿಧ ಕಾಲೇಜಿನ 90 ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

'ಮನುಕುಲಕ್ಕಾಗಿ ವಿಜ್ಞಾನ ಮತ್ತು ತಂತ್ರಜ್ಞಾನ ಅವಿಷ್ಕಾರಗಳು' ಎಂಬ ವಿಷಯದ ಮೇಲೆ28 ವಿಜ್ಞಾನ ಮಾದರಿ ಪ್ರದರ್ಶನಕ್ಕೆ ಬಂದಿದ್ದವು.

ADVERTISEMENT

ಸಿಂಧನೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಮಂಜುನಾಥ ಬಿ. ಮತ್ತು ಮಂಜುನಾಥ ದ್ವಿತೀಯ ಬಹುಮಾನ (7 ಸಾವಿರ), ಉಡುಪಿಯ ಪೂರ್ಣ ಪ್ರಜ್ಞ ಕಾಲೇಜಿನ ಶಿಲ್ಪ ಜೆ. ಮತ್ತು ಸೌಜನ್ಯ ತೃತೀಯ ಬಹುಮಾನ(5 ಸಾವಿರ) ಹಾಗೂ ಹೊಸಬಾವಿಯ ಎಂ.ಎ.ಎಸ್.ಇ ಕಾಲೇಜಿನ ಕಾವ್ಯಾ ಮರಿಗೌಡರ್ ಮತ್ತು ಸಂಗೀತಾ ಯು.ಎ ಹಾಗೂ ಮಂಡ್ಯದ ಪಿ.ಇ.ಎಸ್ ಕಾಲೇಜಿನ ಜ್ಯೋತಿ ಮತ್ತು ಪಯೋನಿಧಿ ಅವರು ಸಮಾಧಾನಕರ ಬಹುಮಾನ(3 ಸಾವಿರ) ಪಡೆದರು.

ವಿಧಾನ ಪರಿಷತ್ ಸದಸ್ಯಹಾಗೂ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಅಧ್ಯಕ್ಷ ಎಸ್‌.ವಿ.ಸಂಕನೂರ ಕಾರ್ಯಕ್ರಮ ಉದ್ಘಾಟಿಸಿದರು.

ಗಿರೀಶ ಕಡ್ಲೆವಾಡ, ಜಗನ್ನಾಥ ಹಲ್ಮಡಗಿ, ವಿಜ್ಞಾನಿ ಡಿ.ಎಸ್.ಶಂಕರರಾವ್, ಡಾ.ಎಂ.ಬಿ.ಪಾಟೀಲ ವಿಶೇಷ ಉಪನ್ಯಾಸ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.