ADVERTISEMENT

ಪರೀಕ್ಷೆ ವೇಳಾಪಟ್ಟಿ ಬದಲಾವಣೆಗೆ ಮನವಿ

ಕಾನೂನು ವಿ.ವಿ ವಿರುದ್ಧ ಎಸ್‌ಎಫ್‌ಐ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 21 ಜನವರಿ 2021, 1:49 IST
Last Updated 21 ಜನವರಿ 2021, 1:49 IST
ಕೊಪ್ಪಳದ ಹಿಂದಿ ಪ್ರಚಾರ ಸಭಾ ಕಾನೂನು ಕಾಲೇಜಿನ ಪ್ರಾಚಾರ್ಯರಿಗೆ ಎಸ್‌ಎಫ್‌ಐ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು
ಕೊಪ್ಪಳದ ಹಿಂದಿ ಪ್ರಚಾರ ಸಭಾ ಕಾನೂನು ಕಾಲೇಜಿನ ಪ್ರಾಚಾರ್ಯರಿಗೆ ಎಸ್‌ಎಫ್‌ಐ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು   

ಕೊಪ್ಪಳ: ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಕಾನೂನು ಶಿಕ್ಷಣ ಕಲಿಯುತ್ತಿರುವ ಎಲ್ಲ ವಿದ್ಯಾರ್ಥಿಗಳಿಗೆ ಫೆಬ್ರುವರಿ ತಿಂಗಳಲ್ಲಿ 2, 4, 6ನೇ ಸೆಮಿಸ್ಟರ್‌ನ ಪರೀಕ್ಷೆ ಮತ್ತು ಮಾರ್ಚ್ ತಿಂಗಳಲ್ಲಿ 1, 3, 5ನೇ ಸೆಮಿಸ್ಟರ್ ಪರೀಕ್ಷೆನಡೆಸಲು ತಯಾರಿ ನಡೆಸುತ್ತಿದ್ದು, ಇದು ಅವೈಜ್ಞಾನಿಕವಾಗಿದೆ ಎಂದು ಎಸ್ಎಫ್ಐ ರಾಜ್ಯ ಅಧ್ಯಕ್ಷ ಅಮರೇಶ ಕಡಗದ ತಿಳಿಸಿದರು.

ಅವರು ಈ ಕುರಿತು ಜಿಲ್ಲೆಯ ವಿವಿಧ ಕಾನೂನು ಕಾಲೇಜಿನ ಪ್ರಾಚಾರ್ಯರುಗಳಿಗೆ ಮನವಿ ಸಲ್ಲಿಸಿ ಮಾತನಾಡಿ,‘ಕಾನೂನು ಶಿಕ್ಷಣ ಕಲಿಯುತ್ತಿರುವ ಎಲ್ಲ ಸೆಮಿಸ್ಟರ್‌ನ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಲು ತಯಾರಿ ನಡೆಸಿದ್ದು, ಅದರ ಅಂಗವಾಗಿ ಈಗಾಗಲೇ ವಿಶ್ವವಿದ್ಯಾಲಯವು ತನ್ನ ವೆಬ್ ಸೈಟ್‌ನಲ್ಲಿ ವೇಳಾಪಟ್ಟಿ ಬಿಡುಗಡೆ ಮಾಡಿದೆ. ಏಕೆಂದರೆ ಇಡೀ ಪ್ರಪಂಚವೇಕೊರೊನಾ ಎಂಬ ಮಾಹಾಮಾರಿಗೆ ಜನ ತತ್ತರಿಸಿಹೋಗಿದ್ದಾರೆ.

ಇದರಿಂದ 9 ತಿಂಗಳು ಕಾಲೇಜು ಬಂದ್‌ ಆಗಿದ್ದವು. ಆದ್ದರಿಂದ ಈಗ ಏಕಾಏಕಿ ಪರೀಕ್ಷೆ ನಡೆಸುವುದು ಸರಿಯಲ್ಲ’ ಎಂದರು.

ADVERTISEMENT

ನಮ್ಮ ದೇಶದಲ್ಲಿ ಕೊರೊನಾದಿಂದಾಗಿ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿತ್ತು. ಇದರ ಮಧ್ಯೆ ವಿಶ್ವವಿದ್ಯಾಲಯಗಳು ನಡೆಸಿದ ಆನ್‌ಲೈನ್‌ ತರಗತಿಗಳಿಗೆ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ನೆಟ್‌ವರ್ಕ್‌ ಸಮಸ್ಯೆಯಿಂದಾಗಿ ಸಂಪೂರ್ಣವಾಗಿ ಹಾಜರಾಗಲು ಆಗಿರುವುದಿಲ್ಲ. ಆದರೆ ಈಚೆಗೆ ಕಾಲೇಜುಗಳು ಪ್ರಾರಂಭವಾಗಿದ್ದು ಸಮರ್ಪಕವಾಗಿ, ಆಪ್‌ಲೈನ್‌ ತರಗತಿ ಮುಗಿದ ನಂತರ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸುವುದಾಗಿ ಈ ಹಿಂದೆ ಎಸ್ಎಫ್ಐ ಸಂಘಟನೆ ರಾಜ್ಯದಾದ್ಯಂತ ಹೋರಾಟ ಮಾಡಿದ ಸಂದರ್ಭದಲ್ಲಿ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಭರವಸೆ ನೀಡಿದ್ದರು.

ಆದರೆ ಈಗ ವಿಶ್ವವಿದ್ಯಾಲಯದ ಕುಲಪತಿ ಸಚಿವರ ಸೂಚನೆ ಉಲ್ಲಂಘನೆ ಮಾಡಿ ಇದೇ ಶೈಕ್ಷಣಿಕ ವರ್ಷದ ಫೆಬ್ರವರಿ ಮತ್ತು ಮಾರ್ಚ್ ತಿಂಗಳಲ್ಲಿ ವಿದ್ಯಾರ್ಥಿಗಳಿಗೆಎಲ್ಲ ಹಂತದ ಪರೀಕ್ಷೆ ನಡೆಸಲು ಹೊರಟಿರುವುದು ಖಂಡನೀಯ ಎಂದರು.

ನಂತರ ನಗರದ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ ಕಾನೂನುಕಾಲೇಜಿನಪ್ರಾಚಾರ್ಯರ ಮೂಲಕ ವಿಶ್ವವಿದ್ಯಾಲಯ ಉಪಕುಲ
ಪತಿಗಳಿಗೆ ಮನವಿಸಲ್ಲಿಸಲಾಯಿತು.

ಜಿಲ್ಲಾ ಕಾರ್ಯದರ್ಶಿ ಸಿದ್ದಪ್ಪ, ತಿಮ್ಮಣ್ಣ ಹೊಮ್ಮಿನಾಳ,ಅನಿಲ್, ಹನುಮಂತ, ರವಿಚಂದ್ರ, ಮಲ್ಲಿಕಾರ್ಜುನ, ರಮೇಶ, ಸೋಮನಾಥ, ಪರಶುರಾಮ, ಪ್ರಕಾಶ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.