ADVERTISEMENT

ಹುಲಿಗೆಮ್ಮ ದೇವಿಗೆ ವಿಶೇಷ ಪೂಜೆ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2021, 3:05 IST
Last Updated 27 ಫೆಬ್ರುವರಿ 2021, 3:05 IST
ಹುಲಿಗೆಮ್ಮ ದೇವಿ
ಹುಲಿಗೆಮ್ಮ ದೇವಿ   

ಹುಲಿಗಿ (ಮುನಿರಾಬಾದ್): ಹುಲಿಗಿಯ ಹುಲಿಗೆಮ್ಮದೇವಿ ದೇವಸ್ಥಾನದಲ್ಲಿ ಭಾರತ ಹುಣ್ಣಿಮೆ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.

ಶನಿವಾರ (ಫೆ.27) ಬೆಳಿಗ್ಗೆ 6ಕ್ಕೆ ದೇವಿಗೆ ವಿಶೇಷ ಪೂಜೆ, ಪಂಚಾಮೃತ ಅಭಿಷೇಕ, ಕುಂಕುಮಾರ್ಚನೆ ಮತ್ತು ನೈವೇದ್ಯ ಸಮರ್ಪಣೆ ಕಾರ್ಯಕ್ರಮಗಳು ನಡೆಯಲಿವೆ.

ರಾತ್ರಿ 9ಕ್ಕೆ ಗಂಗಾದೇವಿ ಪೂಜೆ ನಡೆಯಲಿದೆ. ಬಳಿಕ ಕ್ಷೇತ್ರಪಾಲ ಅಜ್ಜಪ್ಪನವರಿಗೆ ‘ಗುಗ್ಗರಿ ಮುಟಗಿ’ ಪೂಜೆ ಮತ್ತು ಪೂಜಾರ ಮನೆತನದವರಿಗೆ ಉಡಿ ತುಂಬಲಾಗುವುದು.

ADVERTISEMENT

‘ದೇವಸ್ಥಾನದ ಆವರಣದಲ್ಲಿ ಪ್ಲಾಸ್ಟಿಕ್ ಮತ್ತು ಗುಟ್ಕಾ ಬಳಕೆ ನಿಷೇಧಿಸಲಾಗಿದೆ. ಭಕ್ತರು ಕೋವಿಡ್‌ ಮಾರ್ಗಸೂಚಿ ಪಾಲಿಸಬೇಕು. ಮಧ್ಯಾಹ್ನ 12 ರಿಂದ 2.30 ರವರೆಗೆ ದಾಸೋಹ ಭವನದಲ್ಲಿ ಅನ್ನಸಂತರ್ಪಣೆ ಮಾಡಲಾಗುತ್ತದೆ’ ಎಂದು ದೇವಸ್ಥಾನ ಕಾರ್ಯನಿರ್ವಾಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.