ADVERTISEMENT

ಅಳವಂಡಿ: ಶಿಕ್ಷಕರ ತಂಡದಿಂದ ನಲಿ–ಕಲಿ ತರಗತಿ ಸಿಂಗಾರ

ಶಾಲೆಯತ್ತ ಮಕ್ಕಳ ಆಕರ್ಷಣೆ, ಕಲಿಕೆಯಲ್ಲಿ ಆಸಕ್ತಿ ಮೂಡಿಸುವ ಉದ್ದೇಶ

ಜುನಸಾಬ ವಡ್ಡಟ್ಟಿ
Published 23 ಮೇ 2023, 19:30 IST
Last Updated 23 ಮೇ 2023, 19:30 IST
ಗೋಡೆ ಬರಹಗಳನ್ನು ಅಂಟಿಸುತ್ತಿರುವ ಶಿಕ್ಷಕರು.
ಗೋಡೆ ಬರಹಗಳನ್ನು ಅಂಟಿಸುತ್ತಿರುವ ಶಿಕ್ಷಕರು.   

ಅಳವಂಡಿ: ಮಕ್ಕೆಳಮಗೆ ಜೀವ, ಬದುಕು, ನಲಿಕಲಿ ಶೃಂಗಾರ, ಮಕ್ಕಳ ಬದುಕು ಬಂಗಾರ... ಎಂಬ ಘೋಷ ವಾಕ್ಯದೊಂದಿಗೆ ಕೊಪ್ಪಳ ತಾಲ್ಲೂಕಿನ ಸಮಾನ ಮನಸ್ಕ 18 ಶಿಕ್ಷಕರಿರುವ ‘ಅಭಿನವ ಗವಿಶ್ರೀ ಗುರುಸೇವಾ ಬಳಗ’ವು ತಾಲ್ಲೂಕಿನ ಸರ್ಕಾರಿ ಶಾಲೆಗಳ ನಲಿ–ಕಲಿ ತರಗತಿಗಳಿಗೆ ಜೀವ ತುಂಬುವ ಕೆಲಸ ಮಾಡುತ್ತಿದೆ.

ಸಮೀಪದ ಹಟ್ಟಿ ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ನಲಿಕಲಿ ಕೊಠಡಿಯ ಅಂದ ಹೆಚ್ಚಿಸಿ, ಗ್ರಾಮಸ್ಥರ ಮೆಚ್ಚುಗೆ ವ್ಯಕ್ತವಾಗಿದೆ. ಬಳಗವು, ತಾಲ್ಲೂಕಿನ ಶಾಲೆಗಳನ್ನು ಆಯ್ಕೆ ಮಾಡಿಕೊಂಡು, ಸ್ವಂತ ವೆಚ್ಚದಲ್ಲಿ ನಲಿ-ಕೊಠಡಿಗಳಿಗೆ ಸುಣ್ಣ-ಬಣ್ಣ ಹಾಗೂ ವಿವಿಧ ಕಲಾಕೃತಿ ಚಿತ್ರ, ಗೋಡೆ ಬರಹಗಳು ಅಂಟಿಸಿ, ತರಗತಿಗೆ ಜೀವ ತುಂಬು ಕೆಲಸ ಮಾಡುತ್ತಿದೆ.

ಮಕ್ಕಳನ್ನು ಶಾಲೆಯತ್ತ ಆಕರ್ಷಿಸುವುದಲ್ಲದೇ, ಕಲಿಕೆಯಲ್ಲಿ ಆಸಕ್ತಿ ಮೂಡುವಂತೆ ಮಾಡುವುದು. ನಲಿ- ಕಲಿ ಪಾಠೋಪಗಳು ಮಕ್ಕಳು ಸಕ್ರಿಯವಾಗಿ ಕಲಿಯುವಂತೆ ಮಾಡುವುದು ಬಳಗದ ಉದ್ದೇಶವಾಗಿದೆ. ಸರಕಾರದ ಮಹತ್ವಕಾಂಕ್ಷೆ ಯೋಜನೆಯಾಗಿರುವ ನಲಿಕಲಿ, ಮಕ್ಕಳ ಮನೋವೈಜ್ಞಾನಿಕ ಕಲಿಕೆಯನ್ನು ಪ್ರೋತ್ಸಾಹಿಸುತ್ತದೆ. ಅದರ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಇಲಾಖೆ ಹಾಗೂ ಶಿಕ್ಷಕರಿಗೆ ಸಹಕರಿಸುವುದು ತಂಡದ ಆಶಯವಾಗಿದೆ.

ADVERTISEMENT

ಶಿಕ್ಷಕರ ಕೆಲಸ ಮಾಡುತ್ತ, ಬಿಡುವಿನ ವೇಳೆಯಲ್ಲಿ ಸರ್ಕಾರದಿಂದ ಸಂಬಳ ಪಡೆದ ನಾವುಗಳು ಶಾಲೆಗೆ ಏನಾದರೂ ಕೊಡಬೇಕು ಎಂದು ಒಮ್ಮತದ ಮನಸ್ಸು ಮಾಡಿ, ಪ್ರತಿಯೊಬ್ಬರು ತಮ್ಮ ಕೈಲಾದಷ್ಟು ಹಣ ವಿನಿಯೋಗಿಸುತ್ತಿದ್ದೇವೆ ಎನ್ನುತ್ತಾರೆ ಬಳಗದ ಸದಸ್ಯರೊಬ್ಬರು.

ಮೊದಲು ತಾಲ್ಲೂಕಿನ ಓಜನಹಳ್ಳಿ, ಮುನಿರಾಬಾದ ಹಾಗೂ ಹಟ್ಟಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ನಲಿಕಲಿ ಕೊಠಡಿಯನ್ನು ಸುಣ್ಣ ಬಣ್ಣಗಳಿಂದ ಸಿಂಗರಿಸಿದ್ದಾರೆ. ಪ್ರತಿ ತರಗತಿಗೆ ಒಟ್ಟು ₹ 30,000 ಹಣ ಖರ್ಚು ಮಾಡಲಾಗುತ್ತದೆ.

ಶಿಕ್ಷಕರ ಸಂಘದ ಸಹಕಾರ: ಶಿಕ್ಷಕರ ಬಳಗದ ಕಾರ್ಯಕ್ಕೆ ಶಿಕ್ಷಕರ ಸಂಘವು ಸಹಕಾರ ನೀಡುತ್ತಿದ್ದು, ಶಿಕ್ಷಕರ ಸಂಘದ ಪದಾಧಿಕಾರಿಗಳು ಸಕ್ರಿಯವಾಗಿ ಭಾಗವಹಿಸುತ್ತಿದ್ದಾರೆ. ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಶಂಭುಲಿಂಗನಗೌಡ ಪಾಟೀಲ ಅವರು ಈ ಮಾದರಿ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಡಿಸಿದ್ದಾರೆ.

ತಂಡದ ಸದಸ್ಯರ ವಿವರ: ಪರುಶುರಾಮ ಬೆಲಮ್ಕರ, ರಮೇಶ ಬುಡ್ದನಗೌಡ್ರ, ಮಹೇಶ ಟಂಕಸಾಲಿ, ನಫಿಸಖಾನ ಪಠಾಣ, ಸುರೇಶ ತೋಟದ, ಬಾಳಪ್ಪ ಕಾಳೆ, ಬಸವರಾಜ ಕೋಮಲಾಪುರ, ಗವಿಸಿದ್ದಪ್ಪ ಕೇರಿ, ಬಸನಗೌಡ ಹೊಸಮನಿ, ದೇವೇಂದ್ರಪ್ಪ ಕೊಡದಳ, ಪರಮೇಶ್ವರಪ್ಪ ಕೊಟ್ರಣ್ಣವರ, ಅಂಬಣ್ಣ ಭಿಮನೂರ, ದೇವಪ್ಪ ಒಂಟಿಗಾರ, ಪ್ರಶಾಂತ ಕೆ.ಸಿ., ಸುಗುರೇಶ, ಪ್ರಕಾಶ ತಟ್ಟಿ, ಈರಪ್ಪ ಬಿಜಲಿ, ಯಶೋಧಾ ಹುನುಗುಂದ, ಸುಮತಿ ಸಿ., ಪೂರ್ಣಿಮಾ ತುಪ್ಪದ, ಪೂರ್ಣಿಮಾ ಪಟ್ಟಶೆಟ್ಟಿ, ನಾಗರತ್ನ ಎಂಬ ಮನಸ್ಕ ಶಿಕ್ಷಕರು ಅಭಿನವ ಗವಿಶ್ರೀ ಗುರುಸೇವಾ ಬಳಗ ಸೃಷ್ಟಿಸಿದ್ದಾರೆ.

ನಲಿ ಕಲಿ ತಟ್ಟೆ ಚಪ್ಪರ ಹಾಗೂ ಕಲಿಕೋಪರಕರಣ ಗೋಡೆ ಬರಹಗಳಿಂದ ಶೃಂಗರಗೊಂಡ ಓಜಿನಹಳ್ಳಿಯ ಸರಕಾರಿ ಶಾಲೆಯ ನಲಿ ಕಲಿ ತರಗತಿ
ಶಂಕ್ರಯ್ಯ.ಟಿ.ಎಸ್ ಕ್ಷೇತ್ರ ಶಿಕ್ಷಣಾಧಿಕಾರಿ ಕೊಪ್ಪಳ
ಶಂಭುಲಿಂಗನಗೌಡ ಪಾಟೀಲ್ ಹಲಗೇರಿ
ತಂಡದ ಶಿಕ್ಷಕಿಯೊಬ್ಬರೂ ಗೋಡೆಯ ಮೇಲೆ ಚಿತ್ರವನ್ನು ಬಿಡುಸುತ್ತಿರುವ ದೃಶ್ಯ

Quote - ತಾಲ್ಲೂಕಿನ ಸಮಾನ ಮನಸ್ಕ ಶಿಕ್ಷಕರು ಸ್ವಂತ ಹಣದಲ್ಲಿ ನಲಿ–ಕಲಿ ತರಗತಿಗಳಿಗೆ ಸುಣ್ಣ- ಬಣ್ಣ ಬಳಿದು ಹಾಗೂ ಗೋಡೆಬರಹ ಅಂಟಿಸಿ ಸಿಂಗರಿಸುತ್ತಿದ್ದಾರೆ. ಇದು ಮಕ್ಕಳನ್ನು ಶಾಲೆಯತ್ತ ಆಕರ್ಷಿಸಲಿದ್ದು ಅವರ ಕಾರ್ಯ ಶ್ಲಾಘನೀಯ ಶಂಕ್ರಯ್ಯ ಟಿ.ಎಸ್. ಕ್ಷೇತ್ರ ಶಿಕ್ಷಣಾಧಿಕಾರಿ ಕೊಪ್ಪಳ

Quote - ನಲಿಕಲಿ ತರಗತಿ‌ಗಳು ಗ್ರಾಮೀಣ ಮಕ್ಕಳಿಗೆ ಅತ್ಯಂತ ಉಪಯುಕ್ತ. ತಾಲ್ಲೂಕಿನ 18 ಜನ ಶಿಕ್ಷಕರ ಕಾರ್ಯ ಮಕ್ಕಳಿಗೆ ಉಪಯೋಗವಾಗಿಲಿದೆ. ಎಲ್ಲ ಶಿಕ್ಷಕರಿಗೆ ಅಭಿನಂದನೆಗಳು. ಈ ಕಾರ್ಯಕ್ಕೆ ಸದಾ ನಮ್ಮ ಸಹಕಾರ ಇರಲಿದೆ ಶಂಭುಲಿಂಗನಗೌಡ ಪಾಟೀಲ ಹಲಗೇರಿ ರಾಜ್ಯಾಧ್ಯಕ್ಷ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.